ಮೌಲ್ಯಗಳ ಮಹಾವೃಕ್ಷ ಶ್ರೀ ಮಹಾ ಶಿವಶರಣೆ ಹೇಮರಡ್ಡಿ ಮಲ್ಲಮ್ಮ

By admin

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣನ್ನು ದೇವತೆಯ ರೂಪದಲ್ಲಿ ಪೂಜಿಸುತ್ತಾ ಬಂದಿದ್ದಾರೆ, ಅನೇಕ ಮಹಾತ್ಮರೂ ಕೂಡ ಮಹಿಳೆಗೆ ಸಮಾನ ಸ್ಥಾನಮಾನ ನೀಡಿದ್ದಾರೆ, ಬುದ್ಧ, ಬಸವ, ಅಂಬೇಡ್ಕರ, ವಿವೇಕಾನಂದ, ಗಾಂಧಿಜೀ ಯಂತಹ ಅನೇಕ ಮಹನೀಯರು ಮಹಿಳೆಗೆ ವಿಶೇಷ ಗೌರವ ನೀಡಿದ್ದಲ್ಲದೆ, ಮಹಿಳೆಯರಿಗೆ ಸಮಾನತೆ ಕೊಡಿಸುವಲ್ಲಿ ಶ್ರಮಿಸಿದ್ದಾರೆ. ಭಾರತೀಯ ಆಧ್ಯಾತ್ಮಕ್ಷೇತ್ರದಲ್ಲಿ ಅನೇಕ ಪುರುಷರು ಸಾಧನೆ ಮಾಡಿ ಶಿವ ಶಿಖರವೇರಿದ್ದಾರೆ, ಅನೇಕ ಋಷಿಗಳು, ಸಾದು ಸಂತರು, ಆರೂಡರು, ಅಚಲ ರು, ಶರಣರು,ಸಿದ್ದರು, ಮಹಾಂತರು ತಮ್ಮ ತಪಸ್ಸಿನಿಂದ, ನಡೆ-ನುಡಿಯಿಂದ ಆಧ್ಯಾತ್ಮ ಕ್ಷೇತ್ರದಲ್ಲಿ, ಬಕ್ತಿಯ ಮೂಲಕ,ಆಚರಣೆಗಳ ಮೂಲಕ ‘ಪರೋಪಕಾರಿ ಗುಣಗಳಮೂಲಕ, ಹಾಡುಗಳ ಮೂಲಕ ಸಾಧನೆ ಮಾಡಿ ಸಮಾಜಕ್ಕೆ ಪ್ರೇರಕ ಶಕ್ತಿ ಯಾಗಿದ್ದಾರೆ.ಈ ಹಿನ್ನಲೆಯಲ್ಲಿ ನೋಡಿದಾಗ ಭಾರತದ ಆಧ್ಯಾತ್ಮ ಕ್ಷೇತ್ರಕ್ಕೆ ಮಹಿಳಾ ಸಾಧಕಿಯರ ಪಾಲು ಕಡಿಮೆಯಿಲ್ಲ.ಆಧ್ಯಾತ್ಮ ಕ್ಷೇತದಲ್ಲಿ ಅನೇಕ ಮಹಿಳೆಯರು ಲ್ಹೌಕಿಕ ಪ್ರಪಂಚದಿಂದ ದೂರ ಸರಿದು ಅಲ್ಹೌಕಿಕದೆಡೆಗೆ ತಮ್ಮನ್ನು ತಾವು ತೋಡಗಿಸಿಕೊಂಡು ದೈವತ್ವಕ್ಕೆ ಏರಿದ ಅನೇಕ ಮಹಿಳಾಮಣಿಗಳಿದ್ದಾರೆ. ಅವರಲ್ಲಿ ಪ್ರಮುಖರಾದವರೆಂದರೆ ರಾಜಸ್ಥಾನದ ಮೀರಾಬಾಯಿ ಕಾಶ್ಮೀರದ ಲಲ್ಲೇಶ್ವರಿ ತಮಿಳುನಾಡಿನ ಅಂಡಾಳದೇವಿ ಮಹಾರಾಷ್ಟ್ರದ ಜನಾಬಾಯಿ ಮುಕ್ತಾಬಾಯಿ ಹಾಗೂ ನಮ್ಮ ಕನ್ನಡನಾಡಿನ ಅಕ್ಕಮಹಾದೇವಿ ಮತ್ತು ನೀಲಾಂಬಿಕೆ ಗಂಗಾಂಬಿಕೆ ಅಕ್ಕನಾಗಮ್ಮ ಮೋಳಿಗೆಯ ಮಹದೇವಮ್ಮ ಆಯ್ದಕ್ಕಿ ಲಕ್ಕಮ್ಮ ಹೀಗೆ ಅನೇಕ ಮಹಿಳೆಯರು ಆಧ್ಯಾತ್ಮ ಕ್ಷೇತ್ರದ ಮಹಾ ಜ್ಯೋತಿಯಾಗಿ ಬೆಳಗುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಸಂಸಾರದಲ್ಲಿ ಇದ್ದುಕೊಂಡು (ಶಿವ ) ಮಲ್ಲಿಕಾಜು೯ನನ ಧ್ಯಾನ ಮಾಡುತ್ತಾ, ಸಂಸಾರದ ಜೀವನದಲ್ಲಿ ಏನೆಲ್ಲ ಕಷ್ಟ ಎದುರಾದರೂ ಅವುಗಳನ್ನು ತನ್ನ ಬಕ್ತಿಯ ಮೂಲಕ ಸೇವೆ ಮಾಡಿ ಸಾಧನೆ ಮಾಡಿದ ಮಹಾ ಸಾಧಕಿಯೆಂದರೆ ಅಂದ್ರ ಪ್ರದೇಶದ( ಈಗ ತೆಲಂಗಾಣ ) ಮಹಾಸಾಧ್ವಿ ಶ್ರೀ ಹೇಮರಡ್ಡಿ ಮಲ್ಲಮ್ಮ. ಆಧ್ಯಾತ್ಮ ಕ್ಷೇತ್ರದತ್ತ ಸಾಗಲು ಬಕ್ತಿಯನ್ನು ಉರುಗೋಲಾಗಿ ಮಾಡಿಕೊಂಡ ಶ್ರೀ ಹೇಮರಡ್ಡಿ ಮಲ್ಲಮ್ಮ ಸ್ತ್ರೀಕುಲದ ಮಹಾರತ್ನ.ಮಲ್ಲಮ್ಮ ತಾನು ಏನು ಸಾಹಿತ್ಯ ಬರೆಯದ್ದಿದ್ದರೂ ಅವರ ಜೀವನವೇ ಒಂದು ದೊಡ್ಡ ಸಾಹಿತ್ಯ ವಾಗಿರುವ ಮಹಾ ಸಾಧಕಿ ಯಾದ ರೆಡ್ಡಿ ಕುಲ ದೇವತೆ ಮಹಾಸಾಧ್ವಿ ಶ್ರೀ ಮಹಾ ಶಿವಶರಣ ಹೇಮರೆಡ್ಡಿ ಮಲ್ಲಮ್ಮ ಹೇಮರೆಡ್ಡಿ ಮಲ್ಲಮ್ಮ ಓದಿದವರಲ್ಲ ಬರೆದವನಲ್ಲ ಆದರೆ ಹಲವಾರು ಜನ ಸಾಹಿತಿಗಳು ವಿದ್ವಾಂಸರು ತನ್ನ ಬದುಕನ್ನು ಬರೆಯುವಂತೆ ಬದುಕಿ ತೋರಿಸಿಕೊಟ್ಟ ಧೀಮಂತ ಶ್ರೇಷ್ಠ ಅಧ್ಯಾತ್ಮ ಸಾಧಕ ಶ್ರೀ ಮಲ್ಲಿಕಾರ್ಜುನ ಕಾರುಣ್ಯದ ಕೂಸು ಅಂದರೆ ಶ್ರೀ ಮಹಾಮಾತೆ ಹೇಮರೆಡ್ಡಿ ಮಲ್ಲಮ್ಮ.

ಹೇಮರಡ್ಡಿ ಮಲ್ಲಮ್ಮ ಓದಿಲ್ಲ. ಬರೆದಿಲ್ಲ ಆದರೆ ಲಕ್ಷ ಲಕ್ಷ ವಿದ್ವಾಂಸರು ತನ್ನ ಕುರಿತು ಬರೆಯುವಂತೆ ಬಾಳಿ ಬದುಕಿನ ರೀತಿಯನ್ನು ತೋರಿಸಿಕೊಟ್ಟ ಶ್ರೇಷ್ಠ ಆಧ್ಯಾತ್ಮದ ಸಾಧಕಿ.ಅಕ್ಕಮಹಾದೇವಿ ಶ್ರೀಶೈಲ್ ಮಲ್ಲಿಕಾಜು೯ನನ್ನು ತನ್ನ ಗಂಡ ಎಂದು ನಂಬಿ ಪೂಜಿಸಿದರೆ ಮಲ್ಲಮ್ಮ ಶ್ರೀಶೈಲ್ ಮಲ್ಲಿಕಾಜು೯ನ ತನ್ನ ತಂದೆ ಎಂದು ಪೂಜಿಸುತ್ತಾಳೆ. ಇಬ್ಬರ ಸ್ಥಳ ಒಂದೆ, ಗುರಿ ಒಂದೇ ದೇವರು ಒಬ್ಬನೇ ಆದರೆ ಬರೆಯದಿದ್ದರೂ ಆದಶ೯ ಸತಿಯಾಗಿ ಬಾಳಿದ ಮಲ್ಲಮ್ಮ, ಬರಹದ ಹಾಗೂ ವಿರಹದ ಜೀವನ ಸಾಗಿಸಿದ ಅಕ್ಕಮಹಾದೇವಿ ಇಬ್ಬರೂ ಮಲ್ಲಿಕಾಜು೯ನನ ಪರಮ ಬಕ್ತರು ಎಂಬುವದರಲ್ಲಿ ಎರಡು ಮಾತಿಲ್ಲ ಇಂತಹ ಮಹಾನ್ ಸಾಧಕಿಯಾದ ಮಲ್ಲಮ್ಮ ತಾಯಿಯ ಜನ್ಮ ದಿನ ಇದೇ ಮೇ 10ರಂದು ಇರುವ ನಿಮಿತ್ಯ ಈ ಲೇಖನ ಬರೆದಿರುವೆ. ಈ ದಿನ ಕನಾ೯ಟಕ.ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಅಷ್ಟೇ ಅಲ್ಲ ದೇಶ, ವಿದೇಶಗಳಲ್ಲೂ ಮಹಾಸಾದ್ವಿ ಶ್ರೀ ಹೇಮರಡ್ಡಿ ಮಲ್ಲಮ್ಮ ತಾಯಿಯವರನ್ನು ಪೂಜಿಸುವ , ಭಜಿಸುವ ಲಕ್ಷ ಲಕ್ಷ ಬಕ್ತರು ಇದ್ದಾರೆ, ಮುಂದೆಯೂ ಇರುತ್ತಾರೆ.
ಜನನ ಬಾಲ್ಯ: -ಇಂದಿನ ಅಂದ್ರ ಪ್ರದೇಶದಲ್ಲಿರುವ ಕನೂ೯ಲ ಜಿಲ್ಲೆಯ ಆತ್ಮಕೂರ ತಾಲೂಕಿನ ರಾಮಪುರ ಗ್ರಾಮದ ಶ್ರೀಮತಿ ಗೌರಮ್ಮ ಶ್ರೀ ನಾಗರಡ್ಡಿ ದಂಪತಿಗಳ ಉದರದಲ್ಲಿ ಕ್ರಿ.ಶ 1422 ಮೇ ೧೦ರಂದು ಜನಿಸಿದಳೆಂದು ಇತ್ತಿಚಿಗೆ ನಿದ೯ ರಿಸಲಾಗಿದೆ. ಬಹುಕಾಲ ಮಕ್ಕಳಿಲ್ಲದ ನಾಗರಡ್ಡಿ, ಗೌರಮ್ಮ ದಂಪತಿಗಳು ಶ್ರೀಶೈಲ್ ಮಲ್ಲಿಕಾಜು೯ನನಿಗೆ ಬಕ್ತಿಯಿಂದ ಬೇಡಲು ಇವರ ಬಕ್ತಿಗೆ ಮೆಚ್ಚಿ ನೀಡಿದ ಮಲ್ಲಯ್ಯ ಕಾರುಣ್ಯದ ಕೂಸು ಮಲ್ಲಮ್ಮ.ಮಲ್ಲಮ್ಮ ಬಾಲ್ಯದಲ್ಲಿ ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬಂತೆ ಬಹು ಜಾಣೆಯಾಗಿದ್ದ ಮಲ್ಲಮ್ಮ ತನ್ನ ಹತ್ತಿರ ಬರುವ ಗೆಳತಿಯರಿಗೆಲ್ಲಾ ಮಾಗ೯ದಶ೯ನ ಮಾಡುತ್ತಿದ್ದಳು.ಮಲ್ಲಮ್ಮನ ಮನೆತನವೀರಶೈವರಡ್ಡಿ ಮನೆತನವಾದ್ದರಿಂದ “ಇಷ್ಟಲಿಂಗ ಪೂಜೆ “ಮನೆತನದ ಸಂಸ್ಕಾರದಿಂದಲೇ ಒಲಿದು ಬಂದಿದೆ.ಬಾಲ್ಯದಲ್ಲೇ ಅಷ್ಟಾವರಣ ತತ್ವದ ಅನುಸಂಧಾನ ಕಾಯ೯ದಲ್ಲಿ ತೊಡಗಿದ ಮಲ್ಲಮ್ಮ “ಗುರು.ಲಿಂಗ .ಜಂಗಮ.ಪಾದೋಧಕ.ಪ್ರಸಾದ.ವಿಭೂತಿ, ರುದ್ರಾಕ್ಷಿ, ಮಂತ್ರ ಜಪ, ಏನೆ ತೊಂದರೆ ಬಂದರೂ ಇವುಗಳನ್ನು ಬಿಡದೆ ಮಲ್ಲಮ್ಮ ಮಾಡುತ್ತಿದ್ದಳು. ಹೀಗೆ ಬಾಲ್ಯದಿಂದಲೇ ಆಧ್ಯಾತ್ಮದ ಕಡೆ ಒಲವು ತೋರುತ್ತಾ ಪೂಜೆ, ಧ್ಯಾನ, ಜಪ, ತಪದಲ್ಲಿ ಹಂಬಲ ಬೆಳೆಸಿಕೊಂಡ ಮಲ್ಲಮ್ಮಳನ್ನು ಸೂಕ್ಷ್ಮವಾಗಿ ನೋಡುತ್ತಿದ್ದ ತಂದೆ, ತಾಯಿ ಮದುವೆ ಮಾಡಬೇಕೆಂದು ನಿಶ್ಚಯಿಸಿದಾಗ ಈಗಾಗಲೇ ರಾಜ್ಯವನ್ನು ಕಳೆದುಕೊಂಡು ತನ್ನ ಐದು ಮಕ್ಕಳೊಂದಿಗೆ ಸಿದ್ದಾಪುರದಲ್ಲಿ ನೆಲೆಸಿದ ಕುಮಾರ ಗಿರಿರೆಡ್ಡಿ ತನ್ನ ತಂಗಿ ಮಲ್ಲಮಾಂಬೆಯ ಗಂಡನಾದ ಕಾಟಯ್ಯರಡ್ಡಿಗೆ ರಾಜ್ಯ ಬಿಟ್ಟುಕೊಟ್ಟು ಪ್ರಶಾಂತವಾದ ಜಹಗೀರ ಸ್ಥಳವಾದ ಸಿದ್ದಾಪುರದಲ್ಲಿ ತನ್ನ ಹೆoಡತಿ ಪದ್ಮಾವತಿ .ಮಕ್ಕಳಾದ ಕೋಮಟಿರೆಡ್ಡಿ.ವೆಂಕಾರೆಡ್ಡಿ.ನಾಗರೆಡ್ಡಿ.ಬರಮರೆಡ್ಡಿ, ವೇಮಾ ರೆಡ್ಡಿ (ವೇಮನ ) ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ ಇವರ 3ನೇ ಮಗನಾದ ಶ್ರೀ ಬರಮರೆಡ್ಡಿಗೆ ಮಲ್ಲಮ್ಮಳನ್ನು ಕೊಟ್ಟು ನಾಗರೆಡ್ಡಿ ದಂಪತಿಗಳು ಮದುವೆ ಮಾಡಿಕೊಟ್ಟರು.ಸಿದ್ದಾಪುರ ಗ್ರಾಮವು- (ಕ್ರಿ.ಶ 1444) ಶ್ರೀಶೈಲ್ ಸಮೀಪದ ಆತ್ಮಕೂರ ಹಾಗೂ ದೊರನಾಲ್ ನಡುವೆ ಇದ್ದ ಸ್ಥಳ. ಆದರೆ ಇಂದು ಮಲ್ಲಮ್ಮನ ತವರೂರು ರಾಮಪುರ ಇಂದು ಇಲ್ಲ ತೋಟದ ಪ್ರದೇಶವಾದರೂ ಗಂಡನ ಊರು ಸಿದ್ದಾಪುರ ಹಾಳು ಬಿದ್ದ ಹೊಲಗದ್ದೆಗಳು ಆಗಿವೆ.ಕುರುಹುಗಳಾಗಿ ಪುರಾತನ ಶಿವಾಲಯಗಳು ಇಂದು ಆ ಸ್ಥಳದಲ್ಲಿ ಉಳಿದಿವೆ. ಏನೇ ಇರಲಿ ಮಲ್ಲಮ್ಮ ಗಂಡನ ಮನೆಗೆ ಹೋಗುವಾಗ ತಂದೆ, ತಾಯಿ ಅತ್ತೆ ಮಾವ.ಗಂಡ .ಮೈದುನರನ್ನು ಎಲ್ಲರನ್ನು ಚೆನ್ನಾಗಿ ನೋಡಿಕೊ ತವರು ಮನೆ ಕಿತಿ೯ ತರು ಎಂದು ಹೇಳಿ ಗಂಡನ ಮನೆಗೆ ಕಳುಹಿಸುತ್ತಾರೆ, ಇತ್ತ ಮಲ್ಲಮ್ಮ ಗಂಡನ ಮನೆಯಲ್ಲಿ ದಿನನಿತ್ಯ ಪ್ರಾತ ಕಾಲದಲ್ಲಿ ಎದ್ದು ಶಿವನಾಮ ಜಪ ಮಾಡುತ್ತಾ ಮುಖ ತೊಳೆದುಕೊಂಡು ವಿಭೂತಿಧರಿಸಿ ಪತಿ ಅತ್ತೆ, ಮಾವ ಎಲ್ಲಾ ಹಿರಿಯರಿಗೂ ನಮಸ್ಕರಿಸಿ ಮನೆಯಂಗಳ ಕಸಗೂಡಿಸಿ ರಂಗವಲ್ಲಿ ಹಾಕಿ ನಿತ್ಯದ ಕೆಲಸ ಮಾಡುತ್ತಿದ್ದ ಮಲ್ಲಮ್ಮಳಿಗೆ ಊರಿನ ಜನರಿಂದ ಅತ್ತೆ ಮಾವಮೈದುನ ರಿಂದ ಎಲ್ಲರಿಗಿಂತ ಮಲ್ಲಮ್ಮಳಿಗೆ ಒಳ್ಳೆಯ ಹೆಸರು ಬಂದದ್ದು ಕಂಡು ಹೊಟ್ಟೆಕಿಚ್ಚು ಪಟ್ಟನೆ ನಾದಿನಿ, ನೆಗಣಿಯರು ಅತ್ತೆಗೆ ಚಾಡಿ ಹೇಳಿ ಮಲ್ಲಮ್ಮಳಿಗೆ ಮನೆಯ ಕೆಲಸ ಬಿಡಿಸಿದನ ಕಾಯಲು ಅಡಿವಿಗೆ ಕಳಿಸುವರು.ಮಲ್ಲಮ್ಮ ತಾಯಿ ಗೋ ಸೇವೆ ಶ್ರೇಷ್ಠ ಸೇವೆ ಎಂದು ಪರಿಭಾವಿಸಿಕೊಂಡು ಮಲ್ಲಯ್ಯನ ಧ್ಯಾನ ಮಾಡುತ್ತಾ, ದನ ಮೇಯಿಸುತ್ತಾ. ಅನೇಕ ಪವಾಡಗಳನ್ನು ಮಾಡುತ್ತಾಳೆ, ಇದರಿಂದ ಪರಿಪರಿಯಾಗಿ ನೊಂದ ನಾದಿನಿ ,ನೆಗಣಿಯರು ಮತ್ತೆ ಅತ್ತೆಯ ತಲೆ ತುಂಬಿ ಈಕೆ ಊರಲ್ಲಿ ಇದ್ದರೆ ನಮಗೆ ಬೆಲೆ ಸಿಗಲ್ಲ ಎಂದು ಮಲ್ಲಮ್ಮನ್ನು ಮನೆಗೆ ಬಾರದ ಅಲ್ಲೆ ಹೊಲದಲ್ಲಿ ಗುಡಿಸಿಲದಲ್ಲಿ ಇರಲು ಅತ್ತೆಯಿಂದ ಆದೇಶ ಮಾಡಿಸುತ್ತಾರೆ, ಮಹಾ ಸಾದ್ವಿಮಲ್ಲಮ್ಮ ಅದಕ್ಕೂ ಅಂಜದೇ ಗುಡಿಸಿಲದಲ್ಲಿ ತಂದ ತಂಗಾಳ ಅನ್ನವನ್ನು ಸಂತೋಷದಿಂದ ಉಂಡು, ದನ ಮೇಯಿಸುತ್ತಾ, ಮಲ್ಲಯ್ಯನ ಧ್ಯಾನ ಮಾಡುತ್ತಾ, ತಂಗಳ ಅನ್ನವೇ ಶಿವನಿಗೆ ನೆವೈದ್ಯ ಮಾಡುತ್ತಾ .ಹಕ್ಕಿ ಪಕ್ಷಿಗಳಿಗೆ ಆಹಾರ ನೀಡುತ್ತಾ ಮಳೆ ಚಳಿ ಲೆಕ್ಕಿಸಿದೆ ತಿಪ್ಪೆ ಗೊಬ್ಬರ (ಸೆಗಣಿ) ಹೆಚ್ಚಿಗೆ ಮಾಡುತ್ತಾ ಜೀವನ ಸಾಗಿಸುತ್ತಿರುವಾಗ ಮಲ್ಲಮ್ಮನ ಹೆಸರು ದಿನದಿನಕ್ಕೆ ಹೆಚ್ಚು ಬೆಳೆಯುವವದ ಕಂಡು ನೆಗಣಿಯವರು ಮಾತನಾಡಿಕೊಂಡುಗಂಡನಾದ ಭರಮರೆಡ್ಡಿಗೆ ಮಲ್ಲಮ್ಮಳ ವಿರುದ್ಧ ಇಲ್ಲಸಲ್ಲದ ಚಾಡಿ ಹೇಳಿ ಮಲ್ಲಮ್ಮಳ ಶೀಲದ ಬಗ್ಗೆಯೂ ಸಂಶಯ ಮೂಡಿಸಿ ಮಲ್ಲಮ್ಮಳ ವಿರುದ್ಧ ಎತ್ತಿಕಟ್ಟಿ ನಿನ್ನ ಹೆಂಡತಿಯನ್ನು ಕೊಂದು ಭಾ ಎಂದು ಹೇಳಿದ ಮಾತನ್ನು ಕೇಳಿ ಮುಗ್ಧ ನಾದ ಭರಮರೆಡ್ಡಿ ಮಲ್ಲಮ್ಮಳನ್ನು ಕೊಲ್ಲಲ್ಲು ಕೈಯಲ್ಲಿ ಕೋಡಲಿ ಹಿಡಿದುಕೊಂಡು ಸಿಟ್ಟಿನಿಂದ ಮಲ್ಲಮ್ಮ ವಾಸವಿದ್ದ ಗುಡುಸಿಲಿಗೆ ಬರುತ್ತಾನೆ.ಮಲ್ಲಮ್ಮ ಎಲ್ಲ ಮರೆತು ಧಾನ್ಯದಲ್ಲಿ ಕುಳಿತಿರುತ್ತಾಳೆ. ಬರಮರಡ್ಡಿ ಏನು ಮಾತಾಡದೆ ಮಲ್ಲಮ್ಮನನ್ನ ಹಾಗೂ ಲಿಂಗ ವನ್ನ ನೋಡುತ್ತಾ ಬಹು ಹೊತ್ತು ನಿಂತಾಗ ಭರಮರಡ್ಡಿಗೆ ಮಲ್ಲಮ್ಮಳ ಹಾಗೂ ಮಲ್ಲಿಕಾಜು೯ನರ ಮಹಾ ದಿವ್ಯ ಚೇತನದ ದರುಶನವಾಗುತ್ತದೆ. ಇದರಿಂದ ಭರಮರಡ್ಡಿ ಕೊಲ್ಲಲು ತಂದ ಕೊಡಲಿಯನ್ನು ತನಗರಿವಿಲ್ಲದಂತೆ ನೆಲಕ್ಕೆ ಬಿಡುತ್ತಾನೆ.ಮಲ್ಲಮ್ಮಳ ನಿಜ ಬಕ್ತಿ ಕಂಡು ಮಲ್ಲಮ್ಮಳ ಕಾಲಿಗೆ ನಮಸ್ಕಾರ ಮಾಡಲು ಹೋಗಿ ನನ್ನನ್ನು ಕ್ಷಮಿಸು ಬೀಡು ಬೇರೆಯವರ ಮಾತು ಕೇಳಿ ನಿನ್ನನ್ನು ಕೊಲ್ಲಲು ಬಂದಿದ್ದೆ ಎಂದಾಗ ಮಲ್ಲಮ್ಮ ಶಿವ ಶಿವಾ ಎಂದು ಗಂಡನನ್ನು ತಡೆದು ಅವನ ಪಾದಕ್ಕೆ ನಮಸ್ಕರಿಸುವಳು.ನೋಡಿ ನಿಮ್ಮದು ಏನು ತಪ್ಪಿಲ್ಲ.ಎಲ್ಲವೂ ಶ್ರೀ ಮಲ್ಲಿಕಾಜು೯ನನ ಲೀಲೆ ಎಂದು ಹೇಳಿದಾಗ ಮುಂದೆ ಸತಿ-ಪತಿಯರಿಬ್ಬರೂ ಶ್ರೇಷ್ಟ ದಾಂಪತ್ಯ ಜೀವನ ನಡೆಸುತ್ತಿರುವಾಗ ಒಂದು ದಿನ ಶ್ರೀ ಮಲ್ಲಯ್ಯ ಮಲ್ಲಮ್ಮಳ ಮನೆಗೆ ಜಂಗಮವೇಷದಲ್ಲಿ ಬಿಕ್ಷೆಗೆ ಬರುತ್ತಾನೆ. ಮನೆಯಲ್ಲಿದ್ದ ಅತ್ತೆ, ನೆಗಣಿ’ ನಾದಿನಿಯರು ನಿನು ಕುರುಡ ನೋ’ ಕುಂಟನೋ, ದುಡಿದು ತಿನ್ನು ಎಂದು ನಿಂದಿಸಿ ಏನು ನೀಡದೆ ಬೈಯ್ದು ಕಳುಹಿಸುತ್ತಾರೆ, ಕ್ಷಣಾಧ೯ದಲ್ಲಿ ಶ್ರೀಮಲ್ಲಯ್ಯ ಮಾಯವಾದ ತಕ್ಷಣ. ನಿಂದಿಸಿದ ಎಲ್ಲರಿಗೂ ದೇಹಕ್ಕೆ ಬಹುರೋಗ ಬರುತ್ತದೆ, ಮೈ ಹುರಿಯಿಂದ ತಡೆದು ಕೋಳ್ಳಲಾಗದೆ ಗೋಳಾಡುತ್ತಿರುತ್ತಾರೆ, ವಿಷಯ ತಿಳಿದ ಮಲ್ಲಮ್ಮ ಮಲ್ಲಯ್ಯನನ್ನ ಪ್ರಾಥನೆ ಮಾಡಿ ನನ್ನ ಮನೆಯವರು ತಿಳಿಯದೆ ತಪ್ಪು ಮಾಡಿದ್ದಾರೆ ಅವರನ್ನು ಕ್ಷಮಿಸಿ ಎಂದು ಆಧಾರ ಹಚ್ಚುವಳು ಆಗ ಎಲ್ಲರೂ ಮೊದಲಿನಂತೆ ರಾಗಿ ಮಲ್ಲಮ್ಮ ನಮ್ಮನ್ನು ಕ್ಷಮಿಸು ತಪ್ಪಾಗಿದೆ ಎಂದು ನಮಸ್ಕರಿಸಲು ಹೋಗುವರು.ಮಲ್ಲಮ್ಮ ಅತ್ತೆ ನೀವು ಹಿರಿಯರು ಹಾಗೆಲ್ಲ ನನಗೆ ನಮಸ್ಕಾರ ಮಾಡಬಾರದು ಎಂದು ಎಲ್ಲರನ್ನು ಕ್ಷಮಿಸಿ ದೊಡ್ಡ ವಳಾಗುತ್ತಾಳೆ, ಹೀಗೆ ಮಲ್ಲಮ್ಮ ತಾಯಿ ಲೋಕದಲ್ಲಿ ವಿಷ ನೀಡಿದವರಿಗೆ ಅಮೃತ ನೀಡಿ.ಪುಣ್ಯ ಸಂಪಾದಿಸುತ್ತಾಳೆ ಹೀಗೆ ಸದಾ ಕಾಯಕದಲ್ಲೂ ಜಪ-ತಪ – ಪೂಜೆ ಮಾಡುತ್ತಾ ಮಲ್ಲಯ್ಯನ ಧಾನ್ಯ ಮಾಡುತ್ತಿರುವದನ್ನು ನೋಡಿದ ಹಾಗೂ ತಾಯಿಯ ಬಕ್ತಿಗೆ ಮೆಚ್ಚಿ ಶ್ರೀ ಮಲ್ಲಿಕಾಜು೯ನ ಒಂದು ದಿನ ದರುಶನ ನೀಡಿದನು. ಆಗ ಮಲ್ಲಮ್ಮಳಿಗೆ ನೀನು ಈ ಲೋಕ ಬಿಟ್ಟು ಹೋಗುವ ಶುಭ ಘಳಿಗೆ ಬಂದಿದೆ, ನಿನ್ನ ಕೊನೆಯ ಆಸೆ ಕೇಳು ಈಡೇರಿಸುವೆ ಎಂದು ಶ್ರೀಗಿರಿಮಲ್ಲಯ್ಯ ಕೇಳಿದಾಗ ಮಲ್ಲಮ್ಮ ನನ್ನ ರಡ್ಡಿ ಕುಲಬಾಂದವರುಭೂಮಿ ನಂಬಿ ಬದುಕುವರು ಅವರಿಗೆ ಬಡತನ ಬರದಂತೆ ನೋಡಿಕೊ ಎಂದಳು ಆಗ ಮಲ್ಲಯ್ಯ ವರ ನೀಡಿದ ಅಂದುವರ ನೀಡಿದ ಸ್ಥಳವೇ ಇಂದು ಶ್ರೀ ಶೈಲ್ ದಲ್ಲಿ ಮಲ್ಲಮ್ಮನ ಕಣ್ಣಿರು ಸ್ಥಳ ಎಂದು ಪ್ರಖ್ಯಾತಿ ಹೊಂದಿದೆ. ಹೀಗೆ ಮಹಾತಾಯಿ ಹೇಮರಡ್ಡಿ ಮಲ್ಲಮ್ಮ52 ವರುಷಗಳ ಕಾಲ ಶ್ರೇಷ್ಠ ಬದುಕು ನಡೆಸಿ ಕ್ರಿ.ಶ 1474ರಲ್ಲಿ ಲಿಂಗೈಕ್ಯ ಳಾದಳೆಂದು ಹಾಗೂ ಮಲ್ಲಮ್ಮಳ ಕಣ್ಣಿರಿನ ಸ್ಥಳವೇ ಆ ತಾಯಿ ಲಿಂಗೈಕ್ಯವಾದ ಸ್ಥಳವೆಂದು ಸಂಶೋಧಕರು ನಿಧ೯ರಿಸುತ್ತಾರೆ, ಈ ಸ್ಥಳದಲ್ಲಿ ಇಂದು ಭವ್ಯ ಗೋಪುರದಿಂದ ಕೂಡಿದ ದೇವಾಲಯವನ್ನು ಲಿಂಗೈಕ್ಯ ಜಗದ್ಗುರು ಶ್ರೀ ಉಮಾಪತಿ ಪಂಡಿತಾರಾಧ್ಯ ಭಗವತ್ಪಾದರು ಅಂದು ಪರಿಶ್ರಮ ಪಟ್ಟು ನಿಮಿ೯ಸುತ್ತಾರೆ, ಈ ಪೂಜ್ಯರ ಕಾಲಾವಧಿಯಲ್ಲಿ 12 ವರುಷ ಶ್ರಾವಣ ಮಾಸದಲ್ಲಿ ಮಲ್ಲಮ್ಮನ ಪುರಾಣ ಪ್ರವಚನ ನಡೆಸಿದ ಕಿತಿ೯ ಇವರದ್ದಾಗಿದೆ. ಇಂತಹ ಆಧ್ಯಾತ್ಮದ ಶಿಖರವಾಗಿ ಬೆಳೆದ ಮಲ್ಲಮ್ಮ ಸಂಸಾರಿಕೆ ನಡೆಸುವ ಮಹಿಳೆಯರಿಗೆ ಮಾದರಿಯಾಗಿದ್ದಾಳೆ. ಇಂತಹ ಶ್ರೇಷ್ಠ ಸಾಧಕಿಗೂ ಶ್ರೀ ಶ್ರೀಶೈಲ್ ಪಿಠಕ್ಕೂ ಅವಿನಾಭವ ಸಂಬಂಧವಿದೆ.ಮಲ್ಲಮ್ಮಳ ಸಾಧನೆಯ ಹಿಂದೆ ಅಂದಿನ ಜಗದ್ಗುರುಗಳಾದ ಚಂದ್ರ ಗುಂಡ ಶಿವಾಚಾಯ೯ರ ಮಾಗ೯ದಶ೯ ನವಿದೆ ಹಾಗೂ ಜಗದ್ಗುರು ಶ್ರೀ ಕರಿಬಸವೇಂದ್ರ ಶಿವಾಚಾಯ೯ರ ಸದುಪದೇಶವಿದೆ.ಈ ಇವ೯ ಪೂಜ್ಯರ ಆಶೀವಾ೯ದದಿಂದ ಹಾಗೂ ತನ್ನ ಅಚಲ ಬಕ್ತಿಯಿಂದ ಮಲ್ಲಯ್ಯನ ಕೃಪೆ ಪಾತ್ರಳಾಗಿ ಅನೇಕ ಪವಾಡಗಳು ನಡೆಯುತ್ತವೆ ಅವುಗಳಲ್ಲಿ ಮುಖ್ಯವಾದವುಗಳೆಂದರೆ, ೧ ಜಂಗಮನಿಗೆ ಬಿತ್ತನೆ ಬೀಜ ನೀಡಿ ಮರಳನ್ನು ತಾ ಬಿತ್ತಿ ಬೆಳೆದದ್ದು.೨ ಮಹಾಬೋಗಿಯಾದ ಮೈದುನ ವೇಮನನ್ನನ್ನು ಯೋಗಿಯಾಗಿ ಬದಲಾವಣೆ ಮಾಡಿದ್ದು, ೩ ಕಾಡಕವಡಿಕಾಯಿಯನ್ನು ಬಂಗಾರವಾಗಿಸಿದ್ದು.೪ ಕಾಳಿದಾಸನಿಗೆ ಕಣ್ಣು ಕೊಟ್ಟದ್ದು ೫ ಮೂಕನಿಗೆ ಶ್ರೀಶೈಲ್ ದಲ್ಲಿ ವೆಂಕಟೇಶ್ವರನ ದಶ೯ನ ಮಾಡಿಸಿದ್ದು ೬ ಕುಷ್ಠರೋಗಿಗಳಿಗೆ ಉಣಬಡಿಸಿ ರೋಗ ಪರಿಹಾರ ಮಾಡಿದ್ದು, ಹೀಗೆ ಅನೇಕ ಪವಾಡಗಳು ಮಲ್ಲಮ್ಮನ ಜೀವನದಲ್ಲಿ ನಡೆಯುತ್ತವೆ.ಬಕ್ತಿ ಸಾಧಕಿಯಾದ ಮಲ್ಲಮ್ಮಳ ಜೀವನ ಕುರಿತು ಜನಪದರು ಹಾಡುಗಳ ಮೂಲಕ ಹಾಡುತ್ತಾ, ಕುಟ್ಟುವ, ಬೀಸುವ, ಹಂತಿ ಹೊಡೆಯುವ ಹೀಗೆ ಆಯಾ ಸಂದಭ೯ಗಳಲ್ಲಿ ಹಾಡುತ್ತಾ, ಕಥೆ ಹೇಳುತ್ತಾ ಮಲ್ಲಮ್ಮ ತಾಯಿಯ ಚರಿತ್ರೆ ರಚಿಸಲು ಜನಪದ ಸಾಹಿತ್ಯ ಪೂರಕವಾಗಿದೆ’ಶಿಷ್ಟ ಸಾಹಿತ್ಯದಲ್ಲಿ ಮಲ್ಲಮ್ಮನ ಕುರಿತು ಮೊದಲು ಬರೆದವರೆಂದರೆ ದಾಂಪುರದ ಚನ್ನ ಕವಿಗಳು ನಂತರ ಪಂ.ಪುಟ್ಟರಾಜಗವಾಯಿಗಳು, ಮುಂದೆ ಚೆನ್ನಮಲ್ಲ ಶಿವಶರಣ ಶಾಸ್ತ್ರಿಗಳು ಅನೇಕರು ಪುರಾಣಬರೆದರು. ನಾಟಕವನ್ನು ಮೊದಲು ನಲವಡಿ ಶ್ರೀಕಂಠಶಾಸ್ತ್ರಿಗಳು ಬರೆದಿದ್ದು ನಂತರ ಪಂ. ಪುಟ್ಟರಾಜ ಗವಾಯಿಗಳು ಇದನ್ನು ಪರಿಷ್ಕರಿಸಿ ಬರೆದು ಅನೇಕ ಕಡೆ ತಾಯಿ ಮಲ್ಲಮ್ಮಳ ನಾಟಕ ಪ್ರಯೋಗ ಮಾಡಿಸುತ್ತಾರೆ, ಗದಗನಲ್ಲಿ ಇಂದಿಗೂ ಮಲ್ಲಮ್ಮನ ಥೆಟರ ಎಂದು ಪ್ರಸಿದ್ಧಿ ಪಡೆದ ಸ್ಥಳವಿದೆ. ಶ್ರೇಷ್ಠ ಸಾಧಕಿ ಮಲ್ಲಮ್ಮಳ ಬದುಕಿನಲ್ಲಿ ಎರಡು ಗುಣ ಪ್ರಮುಖವಾಗಿ ಕಾಣುತ್ತವೆ ಒಂದು ಶಿವಬಕ್ತಿ, ಎರಡನೆಯದು ಪತಿಬಕ್ತಿ. ಎರಡನ್ನು ಶಾಂತಿ, ಸಹನೆ, ತಾಳ್ಮೆ, ದಯೆ ಗುಣದಿಂದ ನಡೆದುಕೊಂಡು ಸಾಕ್ಷಾತ್ ಶಿವರೂಪಿಯಾದ ಶ್ರೀಮಲ್ಲಯ್ಯನ ದಶ೯ನಭಾಗ್ಯ ಪಡೆದದ್ದು ಮಹಾ ಸಂಗತಿ’ ಇಂತಹ ಮಲ್ಲಮ್ಮ ಳ ಆದಶ೯ ಬದುಕಿನಿಂದ ತಿಳಿಯಬೇಕಾದ ತತ್ವಗಳೆಂದರೆ.ಕಾಯಕ ಮಾಡಬೇಕು’ ದಾನ ಮಾಡಬೇಕು.ಸಂಸಾರ ಮಾಡುತ್ತಾ ಸದ್ಗತಿಪಡೆಯುವದು, ಪಾಲಿಗೆ ಬಂದದ್ದು ಪಂಚಾಮೃತವೆಂದು ಸ್ವಿಕರಿಸುವದು, ತನ್ನಂತೆ ಪರರು ಎಂದು ಅರಿತು ನಡೆಯುವದು. ದೇವರಲ್ಲಿ ನಿಷ್ಠೆ ಹಾಗೂ ಕ್ಷಮಿಸುವ ಗುಣ ಹೊಂದುವದು ಈ ಎಲ್ಲ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದಾಗ ಮಾತ್ರ ನಮ್ಮ ಜೀವನ ಸಾಥ೯ ಕವಾಗುತ್ತದೆ; ರಡ್ಡಿ ಕುಲದ ಮಹಾವೃಕ್ಷವಾದ ಮಹಾಸಾದ್ವಿ ಮಲ್ಲಮ್ಮಳ ಜಯಂತಿ ಮಾಡಿದ್ದು ಅಥ೯ ಪೂಣ೯ ವೆನಿಸುತ್ತದೆ. ಮಲ್ಲಮ್ಮ ತಾಯಿಯ ಕುರಿತು ಅನೇಕ ಲೇಖನಗಳು, ಕವನ, ಕಥೆ, ಪುಸ್ತಕ ಹೊರ ಬಂದಿವೆ. ಡಾ. ಶಾಂತಾ ಸಣ್ಣ ಲ್ಲಪ್ಪನವರ, ಶ್ರೀ ಸೂಗಯ್ಯ ಹಿರೇಮಠ ಅನೇಕ ವಿದ್ವಾ oಸರು ಗ್ರಂಥ ಬರೆದರೂ ಇನ್ನೂ ಮಲ್ಲಮ್ಮ ತಾಯಿಯ ಕುರಿತು ಹೆಚ್ಚಿನ ವಿವರಗಳು ಸಂಶೋಧನೆಯಾಗಬೇಕಾಗಿದೆ.

ಲೇಖನ: ನಿಂಗನಗೌಡ.ಹ.ದೇಸಾಯಿ (ಹನಿ) ಪರಸನಹಳ್ಳಿ ಸಾಹಿತಿ, ಸಂಶೋಧಕರು, ಶಿಕ್ಷಕರು, ತಾ:ಸುರಪುರ, ಜಿ: ಯಾದಗಿರಿ, 9845338898