ತಾಲೂಕು ಮಟ್ಟದ ಮರಳು ಸಮಿತಿ

By admin
ಯಾದಗಿರಿ : ಜಿಲ್ಲೆಯ ಎಲ್ಲಾ ಮರಳು ತಪಾಸಣಾ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಒದಗಿಸಿ, ಅಕ್ರಮ ಮರಳು ಸಾಗಾಣಿಕೆ ಸಂಬAಧಿಸಿದAತೆ ಸಾರ್ವಜನಿಕರಿಂದ ಹೆಚ್ಚಿನ ದೂರಗಳು ಬರುತ್ತಿದ್ದು ಸದರಿ ದೂರುಗಳ ಕುರಿತು ಅಗತ್ಯ ಕ್ರಮ ವಹಿಸಿ, ಅಕ್ರಮ ಮರಳು ಸಾಗಾಣಿಕೆಯನ್ನು ತಡೆಯುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಸಮಿತಿಯ ಎಲ್ಲಾ ಸದಸ್ಯರುಗಳಿಗೆ ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಅವರು ಸೂಚಿಸಿದರು.

ಸಹಾಯಕ ಆಯುಕ್ತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಮಟ್ಟದ ಮರಳು ಸಮಿತಿಯ ಸಭೆ ನಡೆಸಿ ಅವರು ಮಾತನಾಡಿದರು.

2023-24ನೇ ಸಾಲಿನಿಂದ ಇಲ್ಲಿಯವರೆಗೆ ಅಕ್ರಮ ಮರಳು ಸಾಗಾಣಿಕೆ ಕುರಿತು ದಾಖಲಾದ ಪ್ರಕರಣಗಳ ಕುರಿತು ಆರಕ್ಷಕ ಉಪ ಅಧೀಕ್ಷಕರು ಸುರಪುರ ಮಾಹಿತಿ ನೀಡಿ ಸುರಪುರ ತಾಲೂಕಿಗೆ ಸಂಭAದಿಸಿದAತೆ ಒಟ್ಟು 36 ಹಾಗೂ ಶಹಾಪೂರ ತಾಲೂಕಿಗೆ ಸಂಭAದಿಸಿದAತೆ ಒಟ್ಟು 29 ಪ್ರಕರಣಗಳು ದಾಖಲಾಗಿರುತ್ತವೆ ಮತ್ತು ಆರಕ್ಷಕ ಉಪ ಅಧೀಕ್ಷಕರು ಯಾದಗಿರಿ ರವರು ಮಾಹಿತಿ ನೀಡಿ ವಡಗೇರಾ ತಾಲೂಕಿಗೆ ಸಂಭAದಿಸಿದAತೆ ಒಟ್ಟು 24 ಪ್ರಕರಣಗಳನ್ನು ದಾಖಲಿಸಿ 04 ಪ್ರಕರಣಗಳಲ್ಲಿ ದಂಡ ವಿಧಿಸಲಾಗಿರುತ್ತದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.

ತಾಲೂಕು ಮೋಟಾರ್ ವಾಹನ ನಿರೀಕ್ಷಕರು ಸುರಪುರ, ಶಹಾಪೂರ ಮತ್ತು ವಡಗೇರಾ ಇವರಿಗೆ ಹೆಚ್ಚುವರಿ ಮರಳು ಸಾಗಿಸುತ್ತಿರುವ ಮತ್ತು ಹೆಚ್ಚುವರಿ ಫಿಟಿಂಗ್ ಇರುವ ವಾಹನಗಳ ಕುರಿತು ಕ್ರಮ ವಹಿಸುಂತೆ  ಸಹಾಯಕ ಆಯುಕ್ತರು ಸೂಚಿಸಿದರು.

ಮರಳು ಬ್ಲಾಕ್ಗಳಿಗೆ ಈಗಾಗಲೇ ಸ್ಥಳ ತನಿಖೆ ಕೈಗೊಂಡಿರುವ ಕುರಿತು ಮಾಹಿತಿ ಪಡೆದು ಹಾಗೂ ತಹಶೀಲ್ದಾರರು ಸುರಪುರ, ಶಹಾಪೂರ ಮತ್ತು ವಡಗೇರಾ ಮತ್ತು ಸಮಿತಿ ಎಲ್ಲಾ ಸದಸ್ಯರುಗಳಿಗೆ ಸ್ಥಳ ತನಿಖೆ ಕೈಗೊಳ್ಳುವಂತೆ ಸೂಚಿಸಿದರು.

ಹೊಸದಾಗಿ ಗುರುತಿಸಲಾದ ಮತ್ತು ಸ್ಥಾಪಿಸಬಹುದಾದ  ಶಹಾಪೂರ ತಾಲೂಕಿಗೆ ಸಂಭAದಿಸಿದAತೆ  ಮುಡಬೂಳ ಗ್ರಾಮದಲ್ಲಿ, ವಡಗೇರಾ ತಾಲೂಕಿನ ಗೊಂದೇನೂರ ಮತ್ತು ಹಾಲಗೇರಾ ಗ್ರಾಮಗಳಲ್ಲಿ ಹೊಸದಾಗಿ ಮರಳು ತಪಾಸಣಾ ಕೇಂದ್ರ ಸ್ಥಾಪಿಸಲು ಸ್ಥಳ ಗುರುತಿಸಿರುವುದಾಗಿ ತಿಳಿಸಿದರು.

ಮುಂದುವರೆದು ಮರಳು ತಪಾಸಣಾ ಕೇಂದ್ರಗಳಿಗೆ ಈಗಾಗಲೇ ಪೋಲೀಸ್ ಮತ್ತು ಕಂದಾಯ  ಸಿಬ್ಬಂಧಿಗಳನ್ನು ನೇಮಿಸಲಾಗಿದ್ದು ಸಮಯಕ್ಕೆ ಸರಿಯಾಗಿ ಎಲ್ಲಾ ಸಿಬ್ಬಂಧಿಗಳು ಹಾಜರಾಗಿ ಜಿಪಿಎಸ್ ಭಾವಚಿತ್ರವನ್ನು ಯಾದಗಿರಿ ಜಿಲ್ಲಾ ಕಂದಾಯ ಗ್ರೂಪ್‌ನಲ್ಲಿ ಹಾಕುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಸಮಿತಿಗೆ ಸಂಬAಧಿಸಿದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.