
ಸೆಕ್ಯುಲರ್ ವಾಯ್ಸ್ ನ್ಯೂಸ್ ಕಲಬುರಗಿ
ಕಲಬುರಗಿ ಮಹಾನಗರಪಾಲಿಕೆಗೆ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳು ಅವಿರೋಧ ಆಯ್ಕೆ ನಡೆದು ಇತಿಹಾಸ ಸೃಷ್ಟಿಸಿದೆ.ಮಹಾನಗರಪಾಲಿಕೆ ಆದ ನಂತರ 22 ವರ್ಷಗಳಲ್ಲಿ ಪ್ರಥಮ ಬಾರಿಗೆ ಮೆಯರ್ ಮತ್ತು ಉಪ ಮೇಯರ್ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು ಇದೇ ಮೊದಲ ಬಾರಿಯಾಗಿದೆ.
ಈ ಬಾರಿಯ 22ನೇ ಪಾಲಿಕೆಯ ಮಹಾಪೌರ ಸ್ಥಾನವು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಗಿತ್ತು, ಮೀಸಲಾತಿ ಪ್ರಕಟವಾದಗಿನಿಂದಲೇ ಕಾಂಗ್ರೆಸ್ ಪಕ್ಷದ ಎಸ್‌ಟಿ ಏಕೈಕ ಅಭ್ಯರ್ಥಿಯಾಗಿರುವ ಯಲ್ಲಪ್ಪ ನಾಯ್ಕೋಡಿ ಅವರ ಆಯ್ಕೆ ನಿಶ್ಚತವಾಗಿತ್ತು.
ಇಂದು ಮಧ್ಯಾಹ್ನ 12 ಗಂಟೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಮೆಯರ್ ಸ್ಥಾನಕ್ಕಾಗಿ ಸಲ್ಲಿಸಿದ ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಹಾಗೂ ಉಪ ಮಹಾಪೌರ ಸ್ಥಾನಕ್ಕೆ ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಎಸ್ ನ ಅಲೀಮ ಪಟೇಲ್ ಅವರು ನಾಮಪತ್ರ ಸಲ್ಲಿಸಿದ್ದು. ಕೊನೆಯ ಹಂತದಲ್ಲಿ ಅವರು ತಮ್ಮ ನಾಮಪತ್ರ ಹಿಂದಕ್ಕೆ ಪಡೆದ ಹಿನ್ನೆಲೆಯಲ್ಲಿ ಉಪ ಮೇಯರ್ ಆಯ್ಕೆ ಕೂಡ ಅವಿರೋಧವಾಗಿದೆ ಎಂದು ಚುನಾವಣಾಧಿಕಾರಿಗಳಾದ ಪ್ರಾದೇಶಿಕ ಆಯುಕ್ತರು ಘೋಷಿಸಿದರು.
ಅಂತಿಮವಾಗಿ ಕಾಂಗ್ರೆಸ್ ಪಕ್ಷದ ವಾರ್ಡ ನಂ. 53ರ ಯಲ್ಲಪ್ಪ ನಾಯ್ಕೋಡಿ ಅವರು ಮಹಾಪೌರರಾಗಿ ಹಾಗೂ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಈ ಬಾರಿ ಕಾಂಗ್ರೆಸ್ ಟಿಕೆಟ್ ಪಡೆದು ವಿಜಯರಾದ ವಾರ್ಡ ನಂ. 10ರ ಹೀನಾ ಬೇಗಂ ಅಬ್ದುಲ್ ರಹೀಮ ಮುಲ್ಲಾ ಅವರು ಉಪ ಮಹಾಪೌರರಾಗಿ ಆಯ್ಕೆಯಾದರು.
