ಬೆಳೆ ಹಾನಿ, ಜಲಾವೃತ ಪ್ರದೇಶಗಳಿಗೆ ಬಿಜೆಪಿ ನಿಯೋಗ ಭೇಟಿ; ಪರಿಶೀಲನೆ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಮಳೆಯಿಂದ ಉಂಟಾದ ನೆರೆ ಹಾವಳಿ ಪ್ರದೇಶಗಳಿಗೆ ಬುಧವಾರ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಛಲುವಾದಿ ನಾರಾಯಾಣ ಸ್ವಾಮಿ, ರಾಯಚೂರು ಶಾಸಕ ಡಾ.ಶಿವರಾಜ ಪಾಟೀಲ್ ಇತರ ಬಿಜೆಪಿ ಮುಖಂಡರು ಭೇಟಿ ನೀಡಿ ಪರಿಶೀಲಿಸಿದರು.
ಕೋಳ್ಳುರ್ ಸೇತುವೆ, ಯಕ್ಚಿಂತಿ, ಮದರಕಲ್, ಹೈಯಾಳ್ ಗ್ರಾಮಗಳಿಗೆ ಭೇಟಿ ಅಲ್ಲಿನ ಜಲಾವೃತ ಪ್ರದೇಶಗಳಲ್ಲಿನ ಬೆಳೆ ಹಾನಿ ಬಗ್ಗೆ ರೈತರಿಂದ ಮತ್ತು ಜಿಲ್ಲಾಡಳಿತದಿಂದ ಮಾಹಿತಿ ಪಡೆದರು.
ಕೊಳ್ಳುರ್ ಸೇತುವೆ ಪ್ರತಿ ವರ್ಷ ಮುಳುಗುತ್ತದೆ. ಇಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಿದಾಗಲೇ ರೈತರ, ಜನರ ಸಮಸ್ಯೆಗೆ ಮುಕ್ತಿ ಸಿಗುತ್ತದೆ ಎಂದು ಕೋಳ್ಳುರ್ ಗ್ರಾಮ ಪಂಚಾಯಿತಿ ಅಧ್ಯಕ್ಷರು,ಸದಸ್ಯರು ನಾರಾಯಣಸ್ವಾಮಿ, ಡಿಸಿ ಅವರಿಗೆ ಮನವಿ ಸಲ್ಲಿಸಿದರು. ಪರಿಹಾರ ನೀಡುವಂತೆ ಒತ್ತಾಯಿಸಿದರು.
ಅಲ್ಲಿಂದ ಯಕ್ಚಂತಿ, ಮದರಕಲ್, ಹೈಯಾಳ್ ಗ್ರಾಮಗಳ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಪರಸ್ಥಿತಿ ಕುರಿತು ಮಾಹಿತಿ ಪಡೆದ ಛಲವಾದಿ ಅವರು, ಈ ಎಲ್ಲದರ ಬಗ್ಗೆ ಮಾಹಿತಿ ಸಂಗ್ರಹಿಸಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಅವರಿಗೆ ಸಲ್ಲಿಸಲಾಗುವುದು. ನಂತರ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿ ಪರಿಹಾರಕ್ಕೆ ಒತ್ತಾಯಿಸಲಾಗುವುದೆಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾಧ್ಯಕ್ಷ, ಶಾಸಕ ಡಾ. ಶಿವರಾಜ್ ಪಾಟೀಲ್, ಡಿಸಿ ಡಾ.ಸುಶೀಲಾ, ಎಸ್ಪಿ, ಸಂಗೀತಾ, ಎಸಿ ಹಂಪಣ್ಣ ಸಜ್ಜನ್, ಡಿಎಸ್ಪಿ ತಳವಾರ, ಶಹಾಪುರ ತಹಸಿಲ್ದಾರ ಉಮಾಕಾಂತ ಹಳ್ಳೆ, ಬಿಜೆಪಿ ನಾಯಕರಾದ ಮಹೇಶರಡ್ಡಿ ಮುದ್ನಾಳ,ಸಿದ್ದಣ್ಣಗೌಡ ಕಾಡಂನೊರ,ವಿಲಾಸ್ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರುಶುರಾಮ ಕುರಕುಂದಿ,ಸದಶಿವಪ್ಪಗೌಡ ರೊಟ್ನಡಗಿ,ಬಸವರಾಜಪ್ಪ ವಿಭೂತಹಳ್ಳಿ, ದೇವರಾಜ ನಾಯಕ ಉಳ್ಳೆಸೂಗುರ,ವೇಣುಮಾದವ ನಾಯಕ, ರಾಜಶೇಖರ ಕಾಡಂನೋರ,ವಿರುಪಾಕ್ಷರಡ್ಡಿ ಮಾಚನೂರ, ಬಸವರಾಜ ಸೋನ್ನದ,ಗೋವಿಂದಪ್ಪ ಖಾನಾಪುರ,ಚಂದ್ರಶೇಖರ ಮಾರ್ಕಲ್,ಸಂಗು ಅನುವಾರ,ಮಲ್ಲಮ್ಮ ಹೊಸಪೇಟೆ ,ಲಕ್ಷ್ಮಿಪುತ್ರ ಪಾಟೀಲ್,ನಾಗಶೆಟ್ಟಿ ಖಾನಪುರ ಸೇರಿದಂತೆ ಅನೇಕರು ಇದ್ದರು…