
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ವಿಶೇಷವಾಗಿ ಗರ್ಭಿಣಿಯರು, ಬಾಣಂತಿಯರು, ಹಾಗೂ ಹದಿಹರಿಯದ ಹೆಣ್ಣುಮಕ್ಕಳು, ರಕ್ತಹಿನತೆ ಕಡೆಗೆ ಗಮನ ನೀಡಬೇಕು ಪೌಷ್ಟಿಕ ಆಹಾರ ಹಸಿರು ತರಕಾರಿ ಹಣ್ಣು ಹಂಪಲಗಳು ಮಳಕೆ ಕಟ್ಟಿದ ಕಾಳುಗಳು ದಿನಾಲು ಒಂದು ಹಿಡಿ ಶೇಂಗಾ ಮತ್ತು ಬೆಲ್ಲಾವನ್ನು ಸೇವಿಸಬೇಕು. ರಕ್ತ ಹಿನತೆ ಆಗದಂತೆ ನೊಡಿಕೊಳ್ಳಬೇಕು. ಹಾಗೂ ತಾಯಿ ಮತ್ತು ಮಗುವಿನ ಸ್ವಚ್ಚತೆ ಕಡೆಗೆ ಹೆಚ್ಚಿನ ಆದ್ಯತೆ ನಿಡುವಂತೆ ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪ್ರಭುಲಿಂಗ ಮಾನಕರ್ ಅವರು ಸಲಹೆ ನೀಡಿದರು.
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಗಾಜರ್‌ಕೊಟ್ ಗ್ರಾಮದಲ್ಲಿ ಹೆಪಟೈಟಿಸ್ ಹಾಗೂ ಎದೆಹಾಲು ಸಪ್ತಾಹ ಒಆರ್‌ಎಸ್ ದಿನ ಕುರಿತು ಆರೋಗ್ಯದ ಅರಿವು ಆರೋಗ್ಯ ಮೇಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗಾಜರ್‌ಕೊಟ್ ಪ್ರಾ.ಆ. ಕೇಂದ ಇವುಗಳ ಸಹಯೋಗದಲ್ಲಿ ಆಯೋಜಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕರು ಆರೋಗ್ಯ ಇಲಾಖೆಯ ಎಲ್ಲಾ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಮಾಹಿತಿ ಪಡೆದುಕೊಂಡು ಉತ್ತಮ ಆರೋಗ್ಯವನ್ನು ರೂಪಿಸಿಕೊಳ್ಳುವುದರ ಸಲುವಾಗಿ ಈ ಮೇಳದಲ್ಲಿ ಮಾಹಿತಿ, ತಪಾಸಣೆ, ಪರೀಕ್ಷೆ, ಚಿಕಿತ್ಸೆ, ರಾಷ್ಟಿçÃಯ ಆರೋಗ್ಯ ದಿನಗಳ ಮಾಹಿತಿ ನೀಡಲಾಗುತ್ತದೆ, ಆದ್ದರಿಂದ ಎಲ್ಲಾ ಸಾರ್ವಜನಿಕರು, ಆರೋಗ್ಯ ಮೇಳದ ಸದುಪಯೋಗ ಪಡೆದುಕೊಂಡು ಆರೋಗ್ಯವಂತರಾಗಬೇಕು ಎಂದು ಹೇಳಿದರು.
ಯಾದಗಿರಿ ತಾಲೂಕಾ ಆರೋಗ್ಯ ಅಧಿಕಾರಿ ಡಾ.ಹನಮಂತ ರೆಡ್ಡಿ ಪ್ರಸ್ತಾವಿಕವಾಗಿ ಮಾತನಾಡಿ, ಆರೋಗ್ಯ ಮೇಳದಿಂದ ಸಾರ್ವಜನಿಕರಿಗೆ ತುಂಬಾ ಉಪಯೋಗವಿದ್ದು ಮಾಹಿತಿ ಪಡೆದುಕೊಂಡು ಇತರರಿಗೂ ತಿಳಿಸಬೇಕು ಮಳೇಗಾಲ ಆರಂಭವಾಗಿರುವದರಿAದ ವಾಂತಿ ಬೇದಿ ಹಾಗೂ ಇತರೆ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಂಭವವಿರುವದರಿAದ ಸಾರ್ವಜನಿಕರು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡು ಆರೋಗ್ಯ ಕಾಪಾಡಿಕೋಳ್ಳುವಂತೆ ತಿಳಿಸಿದರು.
ಯಾದಗಿರಿ ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ಡಾ.ಮಲ್ಲಪ್ಪ.ಕೆ ಮಾತನಾಡಿ, ಒಆರ್‌ಎಸ್‌ಓರಲ್ ರಿಹೈಡ್ರೇಷನ್ ಸಲ್ಯೂಷನ್ (ಮೌಖಿಕ ಪುನರ್ಜಲೀಕರಣ ಪರಿಹಾರ) ನ ಪ್ರಾಮುಖ್ಯತೆ ಮತ್ತು ಅದರ ಕುರಿತು ಜನರಲ್ಲಿ ಅರಿವು ಮೂಡಿಸಿ ,ಜಾಗತಿಕವಾಗಿ ಪ್ರತಿವರ್ಷ ಜುಲೈ 29 ಅನ್ನು ವಿಶ್ವ ಒಆರ್‌ಎಸ್ ದಿನವನ್ನಾಗಿ ಪರಿಗಣಿಸಲಾಗುತ್ತದೆ. ಅನೇಕ ಅಭಿವೃದ್ಧಿ ದೇಶದಲ್ಲಿ ಶಿಶು ಮತ್ತು ಮಕ್ಕಳ ಸಾವಿಗೆ ಪ್ರಮುಖ ಕಾರಣದಲ್ಲಿ ಅತಿಸಾರವೂ ಒಂದಾಗಿದೆ. ವಿಶ್ವ ಆರೋಗ್ಯ ಸಂಘಟನೆ ಪ್ರಕಾರ, ಐದು ವರ್ಷದ ಶಿಶುಗಳ ಸಾವಿನ
ಪ್ರಮಾಣದಲ್ಲಿ ಎರಡನೇ ಪ್ರಮುಖ ಕಾರಣ ಅತಿಸಾರ ಆಗಿದೆ. ವಿಶ್ವ ಒಆರ್‌ಎಸ್ ದಿನದ ಪ್ರಮುಖ ಉದ್ದೇಶ ಕೇವಲ ಅತಿಸಾರದ ಪ್ರಕರಣದಲ್ಲಿ ಮಾತ್ರ ಒಆರ್‌ಎಸ್ ಮಹತ್ವ ನೀಡದೇ, ಇದನ್ನು ನೀರಿನಿಂದ ನಿರ್ಜಲೀಕರಣಗೊಂಡವರಿಗೂ ಇದು ಅವಶ್ಯಕವಾಗಿದೆ ಎಂದು ತಿಳಿಸಿದರು. ಪ್ರತಿ ವರ್ಷ ಆಗಸ್ಟ್ 1 ರಿಂದ
7ರವರೆಗೆ ಸ್ತನ್ಯಪಾನ ಸಪ್ತಾಹ ನಡೆಸಲಾಗುತ್ತದೆ. ಇದು ವಿಶ್ವದಾದ್ಯಂತ ನಡೆಯುವ ಸಪ್ತಾಹವಾಗಿದ್ದು, ತಾಯಿಯ ಎದೆಹಾಲಿನ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಇದನ್ನು ಆಚರಿಸಲಾಗುತ್ತದೆ. ತಾಯಿಯ ಎದೆಹಾಲು ಮಗುವಿಗೆ ಅಮೃತವಿದ್ದಂತೆ. ಮಗು ಹುಟ್ಟಿ ಕಣ್ತೆರೆದ ತಕ್ಷಣ ಎದೆಹಾಲು ಸೇವಿಸುತ್ತದೆ. ಎಳೆ ಜೀವಕ್ಕೆ ಇದೇ ಜೀವಾಮೃತ. ತಾಯಿಹಾಲು ಶಿಶುವಿಗೆ ಅಗತ್ಯ ಪೋಷಕಾಂಶಗಳು, ಆ್ಯಂಟಿಬಾಡೀಸ್ (ಪ್ರತಿಕಾಯಗಳು)ಗಳನ್ನು ಪೂರೈಸುವುದಲ್ಲದೆ, ಶಿಶುವಿನ ರೋಗನಿರೋಧಕ ವ್ಯವಸ್ಥೆ ಮತ್ತು ಸಂಪೂರ್ಣ ಆರೋಗ್ಯ ವೃದ್ಧಿಗೆ ಅವಶ್ಯ.ಶಿಶುವಿನ ಮೊದಲ ಆರು ತಿಂಗಳುಗಳ ಅವಧಿಯಲ್ಲಿ ಅದಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಎದೆಹಾಲು ಒಳಗೊಂಡಿರುತ್ತದೆ ಎಂದು ತಿಳಿಸಿದರು.
ಯಾದಗಿರಿ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಸಂಜೀವಕುಮಾರ ರಾಯಚೂರಕರ ಮಾತನಾಡಿ, ಪ್ರತಿ ವರ್ಷ, ಜುಲೈ 28 ರಂದು ವಿಶ್ವ ಹೆಪಟೈಟಿಸ್ ದಿನವನ್ನು ಆಚರಿಸಲಾಗುತ್ತದೆ ಮತ್ತು ಜನರಿಗೆ ಅರಿವು ಮೂಡಿಸಲು ಮತ್ತು ವೈರಲ್ ಹೆಪಟೈಟಿಸ್ ಪರಿಣಾಮದ ಬಗ್ಗೆ ಜನರಿಗೆ ತಿಳಿಸುತ್ತದೆ, ಇದು ಪಿತ್ತಜನಕಾಂಗದ ಉರಿಯೂತ ಉಂಟುಮಾಡಬಹುದು, ಇದು ತೀವ್ರವಾದ ಪಿತ್ತಜನಕಾಂಗಕ್ಕೆ ಸಂಬAಧಿಸಿದ ಕಾಯಿಲೆಗಳು ಮತ್ತು ಯಕೃತ್ತಿನ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಯಕೃತ್ತಿನಲ್ಲಿ (ಲಿವರ್) ಉರಿಯೂತವನ್ನುಂಟು ಮಾಡುವ ಲಕ್ಷಣಗಳು ಅಥವಾ ರೋಗಗಳಿಗೆ ಹೆಪಟೈಟಿಸ್ ಎಂದು ಹೇಳಲಾಗುತ್ತದೆ. ಈ ಉರಿಯೂತ ಸತತ ಮದ್ಯಪಾನ ಸೇವನೆಯಿಂದ ಅಥವಾ ವೈರಸ್ಗಳಿಂದ ಹೆಪಟೈಟಿಸ್ ಅನ್ನು ಹೆಪಟೈಟಿಸ್ ಎ,ಬಿ, ಸಿ ಮತ್ತು ಡೆಲ್ಟಾ ಫ್ಯಾಕ್ಟರ್ ಎಂದು ಗುರುತಿಸಲಾಗುವ ವೈರಸ್‌ಗಳಿಂದ ಹರಡಬಹುದು. ಒಬ್ಬ ಮನುಷ್ಯನಿಗೆ ಒಂದೇ ಯಕೃತು (ಲಿವರ್)ಇರುತ್ತದೆ. ವ್ಯಾಯಮ ಧ್ಯಾನ ಪ್ರಾಣಾಯಮ ಮತ್ತು ಪೌಷ್ಟಿಕ ಆಹಾರದಿಂದ ಒಳ್ಳೆಯ ಯಕೃತು (ಲಿವರ್)ಆರೋಗ್ಯ ಪಡೆಯಬಹುದು ಎಂದು ತಿಳಿಸಿದರು. ಮತ್ತು ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತಧಾನ ಮಡುವುದರಮುಖಾಂತರ ಹಲವಾರು ಜನರ ಪ್ರಾಣಗಳನ್ನು ಉಳಿಸಬಹುದೆಂದು ತಿಳಿಸಿದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜ್ಯೊತಿ ಕಟ್ಟಿಮನಿ ಯಾದಗಿರಿ ಮಾತನಾಡಿ, ವಿಶ್ವದ ಜನಸಂಖ್ಯೆ ದಿನೆ ದಿನೆ ಹೆಚ್ಚಾಗುತ್ತಿದ್ದು, ಅದರಲ್ಲಿ ಭಾರತದೇಶದ ಜನಸಂಖ್ಯೆ ವಿಪರೀತವಾಗಿ ಹೆಚ್ಚಾಗುತ್ತಿದ್ದು, ಆತಂಕದ ವಿಷಯವಾಗಿದೆ ಜನಸಂಖ್ಯೆ ನಿಯಂತ್ರಣ ಅನಿವಾರ್ಯ ಅಗಿದೆ. ಸಾರ್ವಜನಿಕರು ಕುಟುಂಬ ಕಲ್ಯಾಣ ವಿಧಾನಗಳಾದ ತಾತ್ಕಾಲಿಕ, ಖಾಯಂ ವಿಧಾನಗಳನ್ನು ಬಳಿಸಿಕೊಂಡು ಚಿಕ್ಕಕುಟುಂಬ ಚೊಕ್ಕ ಕುಟುಂಬ ಆರೋಗ್ಯವಂv Àಕುಟುಂಬ ಹೊಂದುವAತೆ ತಿಳಿಸಿದರು. ಆರೋಗ್ಯ ಇಲಾಖೆಯ ಅಡಿಯಲ್ಲಿ ಸಿಗುವ ಕುಟುಂಬ ಕಲ್ಯಾಣ ಸೇವೆ ಮತ್ತು ಸೌಲಬ್ಯಗಳನ್ನು ಪಡೆದುಕೊಂಡು ಜನಸಂಖ್ಯೆ ನಿಯಂತ್ರಣ ಮತ್ತು ಮಕ್ಕಳ ನಡುವಿನ ಅಂತರ ಕಾಯ್ದಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ ನೀಡಿದರು.
ಯಾದಗಿರಿ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಸಾಜೀದ್ ಮತನಾಡಿ, ಜುಲೈ ತಿಂಗಳಲ್ಲಿ ಡೆಂಗ್ಯೊ ಮಾಸಾಚರಣೆ ಕಾರ್ಯಕ್ರಮ ಇರುವ ಪ್ರಯುಕ್ತ ಮಾತನಾಡಿ ಮಳೆಗಾಲ ಆರಂಭವಾಗಿರುವುದರಿAದ ಶುದ್ದ ನೀರಿನಲ್ಲಿ ಈಡಿಸ್ ಇಜಿಪ್ತೆ ಜಾತಿಯ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತವೆ ಹಾಗೂ ಸೊಂಕಿತ ಸೊಳ್ಳೆಗಳ ಕಚ್ಚುವುದರಿಂದ ರೋಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಆದ್ದರಿಂದ ಮನೆಯ ಒಳಗೆ ಮತ್ತು ಹೊರಗೆ ಸ್ವಚ್ಛತೆ ಕಾಪಡಿಕೊಳ್ಳುವಂತೆ, ನೀರು ನಿಲ್ಲದಂತೆ, ಲಾರ್ವಾಗಳು ಉತ್ಪತ್ತಿ ಆಗದಂತೆ, ನೋಡಿಕೊಳ್ಳುವುದು. ವಿಶ್ರಾಂತಿ ಪಡೆಯುವಾಗ ತಪ್ಪದೆ ಸೊಳ್ಳೆ ಪರದೆ ಹಾಗೂ ಸೊಳ್ಳೆ ನಿರೋದಕಗಳನ್ನು ಬಳಸುವಂತೆ ಹಾಗೂ ಯಾವುದೇ ಜ್ವರ ವಿರಲಿ ಸಮೀಪದ ಆಸ್ಪತ್ರೆ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೋಡು ಚಿಕಿತ್ಸೆ ಪಡೆಯಬೆಕೇಂದು ತಿಳಿಸಿದರು.
ಸ್ವರ ಸಾಮ್ರಾಟ ಜಾನಪದ ಕಲಾ ತಂಡದವರಿAದ ಬೀದಿ ನಾಟಕದ ಮುಖಾಂತರ ಅರಿವು ಮೂಡಿಸಲಾಯಿತು. ಯಾದಗಿರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಶ್ರೀ ತುಳಸಿರಾಮ ಚವ್ಹಾಣ ಕಾರ್ಯಕ್ರಮದ ನಿರೂಪಣೆ ನೆರವೇರಿಸಿದರು. ಶ್ರೀಮತಿ ಕವಿತಾ ಎಲ್‌ಟಿಒ ಪ್ರಾ.ಆ.ಕೇಂದ್ರ ಗಾÀಜರ್‌ಕೊಟ್ ಪ್ರಾರ್ಥನೆ ಸ್ವಾಗತ ವಂದನಾರ್ಪಣೆ ನೇರವೆರಿಸಿದರು.
ಈ ಸಂದರ್ಭದಲ್ಲಿ ಡಾ.ಶಿವಪ್ರಸಾದ ಮೇತ್ರಿ, ಡಾ.ಭೀಮರೆಡ್ಡಿ ಡಾ.ಮಂಗಳ ಅನ್ವಾರ್, ಯಾದಗಿರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು, ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ನೀಲಮ್ಮ, ಸುದರ್ಶನ, ಶ್ರೀಮತಿ ರತ್ನಮ್ಮ, ರವಿಬಂಡಿ, ಹನುಮಂತ್‌ರಾಯ ಕುಲ್ಕರ್ಣಿ, ಅಬ್ದುಲ್‌ಅಜಿಜ್, ಖಲಿಮುದ್ದಿನ್, ಸುಬಾಶ್, ಸೈಯ್ಯದ ಹುಸೇನ್, ರಾಜಕುಮಾರ್, ಸ್ನೆಹಲತಾ, ಶರನಪ್ಪ ಪಿಡಿಒ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.
