ದಕ್ಷ ಅಧಿಕಾರಿ ಪಿಎಸ್ಐ ಪರಶುರಾಮ್ ಸಾವಿನ ಪ್ರಕರಣ ಸಿಬಿಐಗೆ ಒಪ್ಪಿಸಲು ಒತ್ತಾಯ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಅಮೃತ ಪಿಎಸ್ಐ ಪರಶುರಾಮ್ ರವರ ಸಾವಿಗೆ ಕಾರಣೀಕರ್ತರಾದ ಶಾಸಕರು ಮತ್ತು ಪುತ್ರರನ್ನು ಕೂಡಲೇ ಬಂಧಿಸುವಂತೆ ನಗರದಲ್ಲಿ ದಲಿತ ಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಯಿತು. ರೊಚ್ಚಿಗೆದ್ದ ಸಂಘಟನಾ ಕಾರರು ನಗರದ ವಾಲ್ಮೀಕಿ ಚೌಕದಿಂದ ಹೊಸ ತಹಸಿಲ್ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಧರಣಿ ಕುಳಿತ ಪ್ರತಿಭಟನಾಕಾರರು ಪ್ರಕರಣವನ್ನು ಸಿಬಿಐಗೆ ಬಯಸುವಂತೆ ಆಗ್ರಹಿಸಿದರು.
ಶಾಸಕ ಚನ್ನಾ ರೆಡ್ಡಿ ಅವರ ಪುತ್ರ ಸನ್ನೇಗೌಡನನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ತಹಸಿಲ್ದಾರ್ ಉಮಾಕಾಂತ್ ಹಳ್ಳೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ನಿಷ್ಠಾವಂತ ಅಧಿಕಾರಿ ಪರಶುರಾಮ ಚಲವಾದಿ ಅವರನ್ನು 30 ಲಕ್ಷ ಬೇಡಿಕೆ ಇಟ್ಟಿದ್ದಲ್ಲದೆ ಜಾತಿ ನಿಂದನೆ ಮಾಡಿರುವ ಶಾಸಕ ಚನ್ನಾರೆಡ್ಡಿ ಹಾಗೂ ಅವರ ಪುತ್ರ ಸನ್ನೇಗೌಡನನ್ನು ಸಮುದಾಯದ ಕಣ್ಣಿಗೆ ಮಣ್ಣೆರೆಚುವ ಉದ್ದೇಶದಿಂದ ಅಟ್ರಾಸಿಟಿ ಕೇಸ್ ಮಾಡಿ ಆತನನ್ನು ಬಂಧಿಸದೆ ಬಿಟ್ಟಿರುವ ಪೋಲಿಸ್ ಇಲಾಖೆಗೆ ಆತ್ಮಸಾಕ್ಷಿ ಅನ್ನೋದು ಇದೆಯಾ? ತನ್ನದೇ ಆದ ಇಲಾಖೆ ಅಧಿಕಾರಿಗೆ ನ್ಯಾಯ ಕೊಡಿಸದ ಪೊಲೀಸರು ಸಾಮಾನ್ಯ ಜನರಿಗೆ ಯಾವ ನ್ಯಾಯ ಕೊಡಿಸುತ್ತಾರೆ, ಹಣ ಅಧಿಕಾರಕ್ಕಾಗಿ ಮಣೆ ಹಾಕುವ ಪೊಲೀಸ್ ಇಲಾಖೆಗೆ ಧಿಕ್ಕಾರ. ಶಾಸಕ ಹಾಗೂ ಅವನ ಪುತ್ರನನ್ನು ಕೂಡಲಿ ಬಂಧಿಸದೇ ಇದ್ದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಪ್ರತಿಭಟನೆಯಲ್ಲಿ ದಲಿತ ಸಂಘಟನೆಯ ಹಿರಿಯ ಮುಖಂಡ ಮಲ್ಲಿಕಾರ್ಜುನ ಪೂಜಾರಿ, ಶಿವಪುತ್ರ ಜವಳಿ, ರಾಯಪ್ಪ ಸಾಲಿಮನಿ, ಮಹಾದೇವ ದಿಗ್ಗಿ, ಹೊನ್ನಪ್ಪ ಗಂಗನಾಳ, ಸುಭಾಷ್ ತಳವಾರ, ಜೈರೆಡ್ಡಿ ಹೊಸ್ಮನಿ,ಬಸವರಾಜ, ಮರೆಪ್ಪ ಕನ್ಯಾಕೋಳುರು, ಮರೆಪ್ಪ ಕ್ರಾಂತಿ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.