
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ತಾಲೂಕಿನ ಸಗರ ಗ್ರಾಮದ ದೇಸಾಯಿ ಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಅಗಸ್ಟ್ 12 ಸೋಮವಾರದಂದು ಬೆಳಗ್ಗೆ 8:30ಕ್ಕೆ ಶ್ರಾವಣ ಮಾಸದ ನಿಮಿತ್ಯವಾಗಿ ಶ್ರೀ ಮಹಾತ್ಮ ಸಿದ್ದರಾಮೇಶ್ವರ ಸ್ವಾಮಿ,ಕರ್ತೃ ಗದ್ದುಗೆಗೆ ರುದ್ರಾಭಿಷೇಕ,ಸಹಸ್ರ ಬಿಲ್ವಾರ್ಚನೆ,ಪಂಚಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಮುಖ್ಯಸ್ಥರಾದ ಶ್ರೀ ವಿಶ್ವರಾಧ್ಯ ಸ್ವಾಮಿ ದೇಸಾಯಿ ಮಠ ಪ್ರಕಟಣೆಗೆ ತಿಳಿಸಿದ್ದಾರೆ.
ನಂತರ 11:30ಕ್ಕೆ 25ನೇ ವರ್ಷದ ವಾರ್ಷಿಕೋತ್ಸವ ನಿಮಿತ್ಯವಾಗಿ ಪೂಜ್ಯಶ್ರೀ ಷ.ಬ್ರ.ಡಾ: ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಕಡಕೋಳಮಠ ಇವರಿಗೆ ತುಲಾಭಾರ ಹಾಗೂ ಧರ್ಮಸಭೆ ಜರಗುವುದು.ಸಗರ ಒಕ್ಕಲಗೇರಿ ಹಿರೇಮಠದ,ಮರುಳ ಮಹಾಂತ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು.ಶಹಾಪುರದ ಕುಂಬಾರಗೇರಿ ಹಿರೇಮಠದ ಪೂಜ್ಯರಾದ ಸೂಗುರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಉಪದೇಶ ನೀಡಲಿದ್ದಾರೆ,
ಲಕ್ಷ್ಮಿಪುರದ ಶ್ರೀ ಗಿರಿ ಮಠದ ಪೂಜ್ಯರಾದ ಡಾ. ಷ.ಬ್ರ.ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು,ಹಲಕರ್ಟಿ ಶ್ರೀ ಸಿದ್ದೇಶ್ವರ ಹಿರೇಮಠದ ರಾಜಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ನಾಗಠಾಣ ಹಿರೇಮಠದ ಸೋಮೇಶ್ವರ ಶಿವಾಚಾರ್ಯ ಮಹಾ ಸ್ವಾಮಿಗಳು,ಚಿಗರಳ್ಳಿಯ ಸಿದ್ದ ಬಸವ ಕಬೀರಾನಂದ ಮಹಾಸ್ವಾಮಿಗಳು,ಅಕ್ಕಮಹಾದೇವಿ ಮಠದ ಮಾತೋಶ್ರೀ ಶರಣಮ್ಮ ತಾಯಿ,ನಿಲೋಗಲ್ಲದ ಗುರುಲಿಂಗಯ್ಯ ತಾತ ಗದ್ದುಗೆಯ ಬಸಯ್ಯ ಸ್ವಾಮಿಗಳು, ಸೋಮಲಾಪುರದ ಸಿದ್ಧ ಪರ್ವತ ಅಂಬಾದೇವಿ ಮಠದ ಪ್ರಧಾನ ಅರ್ಚಕರಾದ ಅಂಬರೀಶ್ ಭಟ್, ಚನ್ನೂರಿನ ಶ್ರೀ ರೇವಣಸಿದ್ದೇಶ್ವರ ಮಠದ ವೇ.ಮೂ.ಗುರುಪಾದಯ್ಯ ಸ್ವಾಮಿಗಳ ಸಮ್ಮುಖದಲ್ಲಿ ಧರ್ಮಸಭೆ ಜರುಗುವುದು,ವೇ.ಮೂ.ಆಮಯ್ಯ ಸ್ವಾಮಿ ಶಾಸ್ತ್ರಿಗಳು ಬಂಟನೂರು ವೈದಿಕತ್ವ ನಡೆಸಿ ಕೊಡುವರು ಶಿಕ್ಷಕರಾದ ರಾಜಶೇಖರ ದೇಸಾಯಿ,ಸೇರಿದಂತೆ ಗ್ರಾಮದ ಸುತ್ತಮುತ್ತಲಿನ ಭಕ್ತರು ಪಾಲ್ಗೊಳ್ಳುವರು ಎಂದು ಮಠದ ಮೂಲಗಳು ತಿಳಿಸಿವೆ.
