
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಕಾಲಿಗೆ ಚಕ್ರ ಕಟ್ಟಿಕೊಂಡು ಇಡೀ ಕರ್ನಾಟಕದಾದ್ಯಂತ ಸಮಾಜದ ಏಳಿಗೆಗಾಗಿ ಬಡ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಸಂಘಟನೆಯ ಮೂಲಕ ನಿಸ್ವಾರ್ಥದಿಂದ ಸಮಾಜವನ್ನು ಗಟ್ಟಿಯಾಗಿ ಕಟ್ಟುವ ಕೆಲಸ ಕೂಡಲಸಂಗಮದ ಪ್ರಥಮ ಜಗದ್ಗುರುಗಳಾದ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಮಾಡುತ್ತಿದ್ದಾರೆ,ನಮ್ಮ ಸ್ವಾಮಿಜಿಗಳ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದರೆ ನಮ್ಮ ಸಮಾಜ ಸುಮ್ಮನಿರಲ್ಲ ಎಂದು ಶಹಾಪುರ ತಾಲೂಕ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ದೇವಿಂದ್ರಪ್ಪ ತೋಟಗೇರ ಎಚ್ಚರಿಕೆ ನೀಡಿದ್ದಾರೆ.
ವಿನಾಕಾರಣ ನಮ್ಮ ಸಮಾಜದ ಸ್ವಾಮೀಜಿಗಳ ಮೇಲೆ ಆರೋಪ ಮಾಡಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅವರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ,ಪ್ರಚೋದನೆ ನೀಡುತ್ತಿರುವರನ್ನು ಕೂಡಲೇ ಬಂಧಿಸಬೇಕು,ಇಲ್ಲದಿದ್ದರೆ ಇಡೀ ರಾಜ್ಯದ್ಯಂತ ಪಂಚಮಸಾಲಿ ಸಮಾಜದ ಬಂಧುಗಳು ರಸ್ತೆಗೆಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ.ಸುಮ್ಮನೆ ಪಂಚಮಸಾಲಿಗಳನ್ನು ಕೆಣಕುವುದು ತರವಲ್ಲ,”ನಮ್ಮ ತಂಟೆಗೆ ಬಂದ ಬ್ರಿಟಿಷರನ್ನೇ ನಾವು ಬಿಟ್ಟಿಲ್ಲ” ಇನ್ನು ನೀವು ಯಾವ ಲೆಕ್ಕ ಎಂದು ಸ್ವಾಭಿಮಾನದಿಂದ ನುಡಿದರು.
ನಮ್ಮ ಸ್ವಾಮೀಜಿಗಳು ಮಠಮಾನ್ಯಗಳು ಕಟ್ಟಲಿಲ್ಲ ಜೊತೆಗೆ ಮನಸ್ಸುಗಳು ಕಟ್ಟುವ ಕೆಲಸ ಮಾಡುತ್ತಿದ್ದಾರೆ,ಜೊತೆಗೆ ಪ್ರಗತಿಪರ ಚಿಂತನೆಗಳು ಬಿತ್ತುವ ಮೂಲಕ ಸಮಾಜದ ಉದ್ದಾರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ.ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ ಮಾತನಾಡಬೇಕು,ಪ್ರಭಾವಿ ನಾಯಕರ ಚೀಲಾಗಳು ಈ ಕೆಲಸ ಮಾಡುತ್ತಿದ್ದಾರೆ.ಇದು ಒಳ್ಳೆಯ ಬೆಳವಣಿಗೆಯಲ್ಲ ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಖಾರವಾಗಿ ನುಡಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಗುರು ಅಂಗಡಿ ಹೊಸೂರ,ಶರಣು ಶಹಪುರ ಬೇವಿನಹಳ್ಳಿ,ಬಸವಲಿಂಗಪ್ಪ ಹೊಸಕೆರ,ಚನ್ನಬಸಪ್ಪ ಶಿನ್ನೂರ, ಶಂಕರ ಕಡಗುಡ,ಹಾಗೂ ಇತರರು ಸಮಾಜ ಬಾಂಧವರು ಉಪಸ್ಥಿತರಿದ್ದರು.
