
ರಾಜ್ಯದ ಗೃಹಮಂತ್ರಿಗಳೆ ಒಬ್ಬ ಅಪರಾಧಿಯನ್ನು ನಿಮ್ಮ ಮನೆಯಲ್ಲಿ ಇರಿಸಿಕೊಂಡಿದ್ದೀರಿ, ಪಿಎಸ್ಐ ಪರಶುರಾಮನಂತಹ ವ್ಯಕ್ತಿಯ ಸಾವಿಗೆ ಕಾರಣಿಕರ್ತನಾದ ಶಾಸಕ ಚನ್ನಾರೆಡ್ಡಿ ತುನ್ನೂರು ಮತ್ತು ಆತನ ಮಗನು ನಿಮ್ಮ ಮನೆಗೆ ಬಂದಿದ್ದು ಕೂಡಲೇ ಆ ವ್ಯಕ್ತಿಯನ್ನು ಬಂಧಿಸಬಹುದು, ಆದರೆ ನೀವು ಮಾಡಿದ್ದೇನು ? ಗೃಹಮಂತ್ರಿಗಳಾದ ಪರಮೇಶ್ವರ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣ ಸ್ವಾಮಿಆಗ್ರಹಿಸಿದರು. ನಗರದ ಬಿಜೆಪಿ ಜಿಲ್ಲಾಧ್ಯಕ್ಷ ಅಮಿನ್ ರೆಡ್ಡಿ ಯಾಳಗಿಯವರ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಶಿಷ್ಯರು ಶಾಸಕ ಚನ್ನಾರೆಡ್ಡಿ ತುನ್ನೂರು. ಎಐಸಿಸಿ ಅವರ ಬೆಂಬಲವಿದೆ.ಕೂಡಲೇ ಶಾಸಕ ಚನ್ನಾರೆಡಿ ತುನ್ನೂರ್
ಮತ್ತು ಆತನ ಮಗನನ್ನು ಕೂಡಲೇ ಬಂಧಿಸಬೇಕು.
ಜಾತಿನಿಂದನೆ ಪ್ರಕರಣ ದಾಖಲಾದ 24 ಗಂಟೆಯೊಳಗೆ ಅಪರಾಧಿಯನ್ನು ಬಂಧಿಸಬೇಕು.
ಸಾಮಾನ್ಯರಿಗೆ ಒಂದು ಕಾನೂನು, ಜನಪ್ರತಿನಿಧಿಗಳಿಗೆ ಇನ್ನೊಂದು ಕಾನೂನು ಇದು ಯಾವ ನ್ಯಾಯ ಎಂದು ಗೃಹ ಸಚಿವರ ವಿರುದ್ಧ ಹರಿಹಾಯ್ದರು.
ಯಾದಗಿರಿ ಜಿಲ್ಲೆಯಲ್ಲಿ ಪ್ರತಿದಿನ ಪಿಎಸ್ಐ ಪರಶುರಾಮ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಗಳು ನಡೆಯುತ್ತಿವೆ.ಜಿಲ್ಲಾ ಉಸ್ತುವಾರಿ ಸಚಿವರು ಕುಟುಂಬಕ್ಕೆ ಸಾಂತ್ವನ ಹೇಳಲು ಕೂಡ ಹೋಗಿಲ್ಲ. ಮುಖ್ಯಮಂತ್ರಿಗಳೇ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿ ಎಂದು ತಿಳಿಸಿದರು.
ವರ್ಗಾವಣೆ ವಿಷಯದಲ್ಲಿ ಸರ್ಕಾರದಲ್ಲಿ ಅತಿ ದೊಡ್ಡ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವುದಕ್ಕೆ ಪಿಎಸ್ಐ ಪರಶುರಾಮ ಸಾವೇ ಕಾರಣ.30 ಲಕ್ಷ ರೂಪಾಯಿ ಕೊಟ್ಟು ವರ್ಗಾವಣೆ ಮಾಡಿಕೊಂಡ ನಂತರ ವರ್ಷಕ್ಕೆ ಮತ್ತೆ 30 ಲಕ್ಷ ರೂಪಾಯಿ ಕೊಡಬೇಕು. ಪರಶುರಾಮ ತಮ್ಮ ಸ್ವಂತ ಸೈಟ್ ಗಳು,
ಚಿನ್ನಾಭರಣಗಳನ್ನು ಮಾರಿ 7 ಲಕ್ಷ ಹಣವನ್ನು ಜಮಾಹಿಸಿದ್ದರು. ಇಂತಹ ವ್ಯಕ್ತಿ ದುರಾದೃಷ್ಟವಶಾತ್ ಆತ್ಮಹತ್ಯೆ ಮಾಡಿಕೊಂಡರು. ಈ ಕೊಲೆಗೆ ಕಾರಣಿಕರ್ತರಾದ ಶಾಸಕರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಯಾದಗಿರಿ ಜಿಲ್ಲೆಯಲ್ಲಿ ಮಟ್ಕ, ಜೂಜಾಟ ಮತ್ತು ಮರಳು ಸಾಕಾಣಿಕೆ ರಾಜಾರೋಷವಾಗಿ ನಡೆಯುತ್ತಿವೆ. ಇದಕ್ಕೆಲ್ಲ ಕಡಿವಾಣ ಸರ್ಕಾರ ಹಾಕುತ್ತಿಲ್ಲ. ಉಸ್ತುವಾರಿ ಸಚಿವರು ಕೂಡ ಇದಕ್ಕೆ ಸಹಕಾರ ನೀಡುವಂತೆ ಕಂಡುಬರುತ್ತದೆ.ಜಿಲ್ಲಾ ಆಡಳಿತಕ್ಕೆ ಗೊತ್ತಿದ್ದರೂ ಕೈಕಟ್ಟಿ ಕುಳಿತುಕೊಂಡಿದೆ.ಜಿಲ್ಲಾಧಿಕಾರಿಗಳು ಸರಕಾರದ ಅಣತಿಯಂತೆ ಕೆಲಸ ಮಾಡುತ್ತಿವೆ. ಕೂಡಲೇ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಬೇಕು. ಮುಖ್ಯಮಂತ್ರಿಗಳು ಹಿಂದುಳಿದ ಯಾದಗಿರಿ ಜಿಲ್ಲೆಗೆ ಹೆಚ್ಚಿನ ಅನುದಾನವನ್ನು ನೀಡಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಮೂಡಾ ಹಗರಣದಲ್ಲಿ ಸಿಲುಕಿಕೊಂಡಿದ್ದು ಅವರ ಪತ್ನಿಯ ಹೆಸರಿನಲ್ಲಿ 14 ಸೈಟ್ಗಳನ್ನು ಕಾನೂನು ಬಾಹಿರವಾಗಿ ತೆಗೆದುಕೊಂಡಿದ್ದಾರೆ.ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡುವ ಭರವಸೆ ಇದೆ. ಮುಖ್ಯಮಂತ್ರಿಗಳ ರಾಜೀನಾಮೆಗಾಗಿ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಅಮಿನ್ ರೆಡ್ಡಿ ಯಾಳಗಿ,ಜಿಲ್ಲಾ ಬಿಜೆಪಿ ನಗರ ಮಂಡಲ ಅಧ್ಯಕ್ಷ ಚಂದ್ರಶೇಖರ ಯಾಳಗಿ, ಗ್ರಾಮೀಣ ಮಂಡಲ ಅಧ್ಯಕ್ಷ ತಿರುಪತಿ ಹತ್ತಿ ಕಟ್ಟಿಗಿ, ಬಿಜೆಪಿ ಗ್ರಾಮೀಣ ಯುವ ಘಟಕದ ಅಧ್ಯಕ್ಷ ಮಹೇಶ ರಸ್ತಾಪುರ, ಬಸವರಾಜ ವಿಭೂತಿಹಳ್ಳಿ, ಪರಶುರಾಮ ಕುರುಕುಂದಿ ಮಹೇಶ ರೆಡ್ಡಿ, ತಿರುಪತಿ, ಗುರುಕಾಮ,ಶರಣಗೌಡ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಇದ್ದರು.
ಪಜಾ ಮತ್ತು ಪಪಂ ಹಣವನ್ನು ಪಜಾ ಮತ್ತು ಪಂಗಡದವರಿಗೆ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಗಾಗಿ ಮೀಸಲಿಟ್ಟಿರುತ್ತಾರೆ.ಆ ಹಣವನ್ನು ಸರಕಾರ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಂಡಿದೆ.187 ಕೋಟಿ ವಾಲ್ಮೀಕಿ ನಿಗಮದ ಹಣವನ್ನು ಚುನಾವಣೆಗಾಗಿ ದೋಚಿದ್ದಾರೆ. ಮೈಸೂರಿನ ಮೂಡಾ ಹಗರಣದಲ್ಲಿ 3 ಎಕರೆ 16 ಗುಂಟೆ ದಲಿತರ ಜಮೀನನ್ನು ಪರಭಾರಿ ಮಾಡಿ ಹಂಚಲಾಗಿದೆ. ದಲಿತ ಪಿಎಸ್ಐ ಪರಶುರಾಮ ಮತ್ತು ಚಂದ್ರಶೇಖರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2022-23ನೇ ಸಾಲಿನಲ್ಲಿ 53 ದಲಿತರ ಹತ್ಯೆಯಾಗಿದೆ. 123 ಜನ ದಲಿತರ ಅತ್ಯಾಚಾರವಾಗಿದೆ. ದಲಿತ ವಿರೋಧಿ ಸರಕಾರವಿದು. ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ.
-ಎನ್ . ಮಹೇಶ, ಮಾಜಿ ಸಚಿವರು.
