ಮಾತ್ರೆ ಸೇವಿಸಿದ 20ಕ್ಕೂ ಅಧಿಕ ಮಕ್ಕಳು ಅಸ್ವಸ್ಥ

By admin

ಯಾದಗಿರಿ: ಆನೆಕಾಲು ರೋಗ ತಡೆ ಮಾತ್ರೆಗಳನ್ನು ಸೇವಿಸಿದ ತಾಲೂಕಿನ ಶೆಟ್ಟಿಗೆರೆ ಗ್ರಾಮದ ಸರಕಾರಿ ಶಾಲೆಯ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.

ಆನೆಕಾಲು ರೋಗ ಮುಕ್ತಕ್ಕೆ ಇಂದು ಔಷಧಿಗಳನ್ನ ಸೇವಿಸುವ ಕಾರ್ಯಕ್ರಮವಿತ್ತು. ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಮಾತ್ರೆಗಳನ್ನು ನುಂಗಿಸಲಾಗಿತ್ತು.

ಆನೆಕಾಲು ರೋಗ ತಡೆ ಮಾತ್ರೆಗಳನ್ನು ಸೇವಿಸಿ ಮಕ್ಕಳ ಅಸ್ವಸ್ಥರಾಗಿದ್ದಾರೆ.

ಜಿಲ್ಲಾಸ್ಪತ್ರೆಗೆ ಟಿಎಚ್ಓ ಡಾ.ಹಣಮಂತರೆಡ್ಡಿ ಭೇಟಿ, ಪರಿಶೀಲನೆ ನಡೆಸಿದರು.

20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಮುಂದುವರಿದಿದೆ. ಇದಲ್ಲದೇ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ .

ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲು. ಆಸ್ಪತ್ರೆ ವೈದ್ಯರಿಂದ ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿಸಿ ಪಾಲಕರು ವೈದ್ಯರ ವಿರುದ್ದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.