
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಸಮುದಾಯದ ಯುವ ಪೀಳಿಗೆಯವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಪ್ರಾತಿನಿದ್ಯ ಸಿಗುವಂತೆ ಮಾಡಬೇಕಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.ನಗರದ ಫಕೀರೇಶ್ವರ ಮಠದಲ್ಲಿ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ತಾಲೂಕು ಘಟಕ ಆಯೋಜಿಸಿದ ನೂತನ ಅಧ್ಯಕ್ಷರ ಹಾಗೂ ಕಾರ್ಯಕಾರಿಣಿ ಸದಸ್ಯರ ಪದಗ್ರಹಣ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ವೀರಶೈವ ಲಿಂಗಾಯತ ಸಮಾಜ ಒಗ್ಗಟ್ಟು ಪ್ರದರ್ಶಿಸುವ ಅಗತ್ಯ ಇದೆ. ಸಮಾಜದ ಕಲ್ಯಾಣ ಮಂಟಪ ನಿರ್ಮಾಣಕ್ಕೆ 1.50 ಕೋಟಿ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು. ಸಮುದಾಯಕ್ಕೆ ಅವಶ್ಯವಾಗಿರುವ ಕಲ್ಯಾಣ ಮಂಟಪ ನಿರ್ಮಿಸಲು ನಗರದಲ್ಲಿ ಸುಮಾರು 1 ಎಕರೆ ಜಮೀನು ನೀಡಲಾಗಿದೆ. ಆದರೆ, ಅದರ ಮೌಲ್ಯ ಕಡಿಮೆಗೊಳಿಸಲು ಅಧಿವೇಶನದಲ್ಲಿ ಸಾಧ್ಯವಿದ್ದು ಮುಂಬರುವ ದಿನಗಳಲ್ಲಿ ಸುಮಾರು ಶೇ.10ರಿಂದ 25ರಷ್ಟು ಮೌಲ್ಯದಲ್ಲಿ ಜಮೀನು ಅನುಮೋದನೆ ‘ಮಾಡಿಸಲು ಪ್ರಯತ್ನಿಸಲಾಗುವುದು.
ಸಾನ್ನಿಧ್ಯವಹಿಸಿದ್ದ ಪೂಜ್ಯ ಸೂಗುರೇಶ್ವರ ಶಿವಾಚಾರ್ಯರು ಮಾತನಾಡಿ, ವೀರಶೈವ ಸಮಾಜದ ಸಂಘಟನೆಗಳು ಸಂಘಟಿತರಾಗಿ ಸಮಾಜವನ್ನು ಮತ್ತಷ್ಟು ಮೇಲೆತ್ತುವ ಪ್ರಯತ್ನ ಮಾಡಬೇಕು. ಸಂಘದ ಬಲವರ್ಧನೆಗೆ ಪ್ರತಿಯೊಬ್ಬರು ಕೈಜೋಡಿಸಿ ನೂತನ ಅಧ್ಯಕ್ಷರೊಂದಿಗೆ ಕಾರ್ಯಕ್ರಮಗಳನ್ನು ರೂಪಿಸಿ ಸಂಘಕ್ಕೆ ಕೀರ್ತಿ ತರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆಯಾದ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಸೇರಿದಂತೆ ವೀರಶೈವ ಮಹಾಸಭಾದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಮತ್ತು ಮಹಿಳಾ ಕಾರ್ಯಕಾರಿಣಿ ಸದಸ್ಯರಿಗೆ ಸನ್ಮಾನಿಸಲಾಯಿತು.
ಫಕೀರೇಶ್ವರ ಮಠದ ಪೂಜ್ಯ ಗುರುಪಾದ ಸ್ವಾಮಿ, ಚರಬಸವೇಶ್ವರ ಗದ್ದುಗೆ ಪೂಜ್ಯ ಬಸವಯ್ಯ ಶರಣರು, ದ್ವಾದಶ ಜ್ಯೋರ್ತಿಲಿಂಗ ದೇವಸ್ಥಾನದ ಪೂಜ್ಯ ವಿಶ್ವರಾಧ್ಯ ದೇವರು ಸಾನ್ನಿಧ್ಯ ವಹಿಸಿದ್ದರು. ಚಂದ್ರಶೇಖರ ಸಾಹು ಆರಭೋಳ, ಸಿದ್ದಲಿಂಗಣ್ಣ ಆನೆಗುಂದಿ ಮಾತನಾಡಿದರು.ಮಹಾಸಭೆ ಜಿಲ್ಲಾಧ್ಯಕ್ಷ ಚಿನ್ನಪ್ಪ ಮೋಸಂಬಿ, ಗುರುನಾಥರೆಡ್ಡಿ ಸುಬೇದಾರ, ಚೆಂದಪ್ಪ .ನಾಗನಗೌಡ ಸುಬೇದಾರ.ಪರ್ವತರೆಡ್ಡಿ ಬೆಂಡೆಬೆಂಬಳಿ,ಮಾಣಿಕರೆಡ್ಡಿ ಗೋಗಿ, ತಾಲೂಕ ಯುವ ಅಧ್ಯಕ್ಷ ಶಂಭುಲಿಂಗಗೋಗಿ,ಲಿಂಗಣ್ಣ ಪಡಶೆಟ್ಟಿ,ಗದಿಗೆಪ್ಪ ದೇಸಾಯಿ,ಶಿವಶರಣಪ್ಪ ಕಾಮಾ, ಮಲ್ಲರೆಡ್ಡಪ್ಪ ಹೋತಪೇಟ, ಶರಣಪ್ಪ ಸಾಹು ಮುಂಡಾಸ,ಶರಣಗೌಡ ರಾಂಪುರ, ರಾಜಶೇಖರ ಪಾಟೀಲ್ ಸೇರಿ ಇತರರು ಇದ್ದರು. ರುದ್ರಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಜಾಕಾ ಸ್ವಾಗತಿಸಿದರು. ವಿರೇಶ ಉಳ್ಳಿ ನಿರೂಪಿಸಿದರು.
ನಿವೃತ್ತ ಶಿಕ್ಷಕರಿಂದ ದೇಣಿಗೆ : ಅಖಿಲ ಭಾರತ ವೀರಶೈವ ವಿದ್ಯಾರ್ಥಿನಿಲಯ ಕಟ್ಟಡಕ್ಕೆ ನಿವೃತ್ತ ಶಿಕ್ಷಕರಾದ ಸೋಮಶೇಖರ ಹಿರೇಮಠ್ ಮತ್ತು ಸುಧಾಕರ್ ಗುಡಿ ಅವರು ತಮ್ಮ ಒಂದು ತಿಂಗಳ ನಿವೃತ್ತಿ ವೇತನ ನೀಡಿ ಇತರರಿಗೆ ಮಾದರಿಯಾಗಿದ್ದಾರೆ.ಅವರಂತೆ ದಾನಿಗಳು ಕಾಣಿಕೆಯನ್ನು ಕೊಡಲು ಮುಂದೆ ಬಂದಾಗ ಸಮಾಜದಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ಅಧಿಕಾರ ಹಸ್ತಾಂತರ. : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ತಾಲೂಕು ಘಟಕದ ನೂತನ ಅಧ್ಯಕ್ಷ, ಕಾರ್ಯಕಾರಿಣಿ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷ ಸಿದ್ದಣ್ಣ ಸಾಹು ಆರಬೋಳ ಅವರಿಗೆ ಷಟಸ್ಥಲ ಧ್ವಜವನ್ನು ಮಹಾಸಭೆ ರಾಷ್ಟ್ರೀಯ ಕಾರ್ಯಕಾರಿಣಿ ನೂತನ ಸದಸ್ಯ, ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹಾಗೂ ಪೂಜ್ಯರು ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಮಹಾಸಭೆ ಪದಾಧಿಕಾರಿಗಳಿಂದ ಸಚಿವರಿಗೆ ಸಮುದಾಯದ ವಿವಿಧ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಯಿತು.
