
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೇವರಾಜ ಅರಸುರವರ ನಂತರ ಸತತ ಐದು ರ‍್ಷಗಳ ಕಾಲ ಒಳ್ಳೆಯ ಆಡಳಿತ ಕೊಟ್ಟು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿದ್ದಾರೆ. ಸಿದ್ದರಾಮಯ್ಯನವರ ಬಗ್ಗೆ ರಾಜ್ಯಪಾಲರು ಪ್ರಾಸಿಕ್ಯೂಷನ್
ಅನುಮತಿ ನೀಡಿರುವುದು ರಾಜಕೀಯ ಪ್ರೇರಿತ ಎಂದು ಸಚಿವರಾದ ಶರಣಬಸಪ್ಪಗೌಡ ರ‍್ಶನಪುರ ಆರೋಪಿಸಿದರು. ನಗರದ ಗೃಹ ಕಚೇರಿಯಲ್ಲಿ ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿದ ಅವರು ರಾಜ್ಯಪಾಲರ ಭವನವು ಬಿಜೆಪಿಯ ಕೇಂದ್ರ ಕಛೇರಿಯಾಗಿದೆ. ರಾಜ್ಯದಲ್ಲಿ ಹೇಗಾದರೂ ಮಾಡಿ ರ‍್ಕಾರವನ್ನು ಬಿಳಿಸುವಂತೆ ಕೇಂದ್ರ ರ‍್ಕಾರ ರಾಜ್ಯಪಾಲರನ್ನು ಬಳಸಿಕೊಂಡಿದೆ ಎಂದು ಪ್ರಧಾನಮಂತ್ರಿಯ ವಿರುದ್ಧ ಕಿಡಿಕಾರಿದರು. ಬಿಜೆಪಿಯೇತರ ರಾಜ್ಯಗಳ ಮೇಲೆ ಇಡಿ ಸಿಬಿಐನಿಂದ ಅಧಿಕಾರ ದರ‍್ಬಳಕೆ ಮಾಡಿಕೊಳ್ಳುತ್ತಿದೆ.ದೆಹಲಿಯ ಮುಖ್ಯಮಂತ್ರಿ ಕೆಜ್ರಿವಾಲ್, ಜರ‍್ಖಂಡ್ ಮುಖ್ಯಮಂತ್ರಿ ಸೀಬು ಸೊರೇನ್ ಸೇರಿದಂತೆ ಹಲವು ವ್ಯಕ್ತಿಗಳ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳಿಂದ ಅಧಿಕಾರ ದರ‍್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕೇಂದ್ರ ರ‍್ಕಾರವನ್ನು ಆರೋಪಿಸಿದರು.
ಕುಮಾರಸ್ವಾಮಿಯವರು ತಮ್ಮ ಅಧಿಕಾರದ ಅವಧಿಯಲ್ಲಿ ಹಲವು ದುರುಪಯೋಗ ಮಾಡಿಕೊಂಡ ಪ್ರಕರಣಗಳು ರಾಜ್ಯಪಾಲರ ಭವನದಲ್ಲಿವೆ. ಅದೇ ರೀತಿಯಾಗಿ ನಿರಾಣಿ, ಜೊಲ್ಲೆ ಸೇರಿದಂತೆ ಇತರ ವ್ಯಕ್ತಿಗಳ ಪ್ರಕರಣಗಳು ಕೂಡ ಕಳೆದ ಮೂರು ರ‍್ಷದಿಂದ ರಾಜ್ಯಪಾಲರ ಭವನದಲ್ಲಿ ಕೊಳೆಯುತ್ತಿವೆ. ಅವುಗಳೆಲ್ಲವನ್ನು ಬದಿಗೊತ್ತಿ ಒಂದೇ ದಿನದಲ್ಲಿ ಮುಖ್ಯಮಂತ್ರಿಗಳಿಗೆ ರಾಜ್ಯಪಾಲರು ಮೂಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೋಟಿಸ್ ನೀಡಿರುವುದು ರಾಜಕೀಯ ಪ್ರೇರಿತ ಎಂದರು.ಎಚ್ ಡಿ ರೇವಣ್ಣನ ಮಕ್ಕಳು ಪ್ರಜ್ವಲ್ ರೇವಣ್ಣ ಸೂರಜ್ ರೇವಣ್ಣನ ಪ್ರಕರಣಗಳು ಅತ್ಯಂತ ಗಂಭೀರವಾದ ಪ್ರಕರಣಗಳಾಗಿವೆ. ಬಿಜೆಪಿಯವರು ಇವುಗಳನ್ನು ಸಿಬಿಐಗೆ ಕೊಡಿ ಎಂದು ಯಾಕೆ ಹೇಳುವುದಿಲ್ಲ. ಕಾಂಗ್ರೆಸ್ ಪ್ರಕರಣಗಳನ್ನು ಮಾತ್ರ ಸಿಬಿಐಗೆ ಕೊಡಿ ಎಂದು ಹೇಳುತ್ತಾರೆ ಹಾಗಾದರೆ ರಾಜ್ಯದಲ್ಲಿರುವ ಎಲ್ಲಾ ಪ್ರಕರಣಗಳನ್ನು ಸಿಬಿಐಗೆ ಕೊಡುವಂತೆ ಬರೆದು ಕೊಡಲಿ ಎಂದರು.
ಮುಖ್ಯಮಂತ್ರಿ ಅವರಿಗೆ ಕೆಟ್ಟ ಹೆಸರು ತರಲು ಮೂಡಾ ಹಗರಣ ಬಿಜೆಪಿ ಮತ್ತು ಜೆಡಿಎಸ್ ನವರು ಬಳಕೆ ಮಾಡಿಕೊಂಡಿದ್ದಾರೆ. 1935 ರಲ್ಲಿ ಧಲಿತ ಕುಟುಂಬಕ್ಕೆ ಸೇರಿದ 3 ಎಕರೆ 16 ಗುಂಟೆ ಜಮೀನನ್ನು. 1997ರಲ್ಲಿ ಆ ಭೂಮಿಯನ್ನು ಡಿ ನೋಟಿಫಿಕೇಷನ್ ಮಾಡಲಾಗಿದ್ದು 2004ರಲ್ಲಿ ಮುಖ್ಯಮಂತ್ರಿ ಸಹೋದರ ಖರೀದಿ ಮಾಡಿ 2005 ತನ್ನ ಸಹೋದರಿಗೆ ದೇಣಿಗೆಯಾಗಿ ನೀಡಿದ್ದಾನೆ. 2022 ರಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಮೂಡಾ ಅಧ್ಯಕ್ಷರು ಬಿಜೆಪಿಯವರೇ ಆಗಿದ್ದರು. ಅದನ್ನು ಆಗಲೇ ತನಿಖೆ ಮಾಡಬಹು.ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೂಢಾ ಹಗರಣದಲ್ಲಿ ನಿವೇಶನಕ್ಕೆ ಸಂಬಂಧಪಟ್ಟಂತೆ ಯಾವುದೇ ಪ್ರಭಾವ ಬೀರಿಲ್ಲ. ಅಪರಾಧಿಗಳು ಹೇಗಾಗುತ್ತಾರೆ ಎಂದರು.
ದೇಶದಲ್ಲಿಯೇ ಕೇಂದ್ರ ರ‍್ಕಾರಕ್ಕೆ ಅತ್ಯಂತ ಜಿಎಸ್‌ಟಿ ಹಣವನ್ನು ನಮ್ಮ ರಾಜ್ಯದಿಂದ ಕೊಡಲಾಗುತ್ತಿದೆ. ಆದರೆ ನಮ್ಮ ಪಾಲಿನ ಹಣವನ್ನು ಕೇಂದ್ರ ರ‍್ಕಾರ ಮಹಾರಾಷ್ಟ್ರ ಉತ್ತರಪ್ರದೇಶ ಹರಿಯಾಣ ರಾಜ್ಯಗಳಿಗೆ ಹೆಚ್ಚುವರಿ ಆಗಿ ಕೊಡುತ್ತಿದ್ದಾರೆ.ಕೇಂದ್ರ ಹಣಕಾಸು ಮುಖ್ಯ ಸಚಿವರು ಇದರ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂದು ಕಿಡಿಕಾರಿದರು. ಬಿಜೆಪಿಯವರು ಒಂದೇ ಒಂದು ಜನಪರ ಕೆಲಸವನ್ನು ತೋರಿಸಲಿ ನೋಡೋಣ. ಬಂಡವಾಳ ಶಾಹಿ ಪರ ಇರುವ ಕೇಂದ್ರ ರ‍್ಕಾರ ಕರೋನ ಸಂರ‍್ಭದಲ್ಲಿ 20 ಸಾವಿರ ಕೋಟಿ ರೂಪಾಯಿಗಳನ್ನು ಮನ್ನಾ ಮಾಡಿತು. ರೈತರ ಪರ ಯಾವತ್ತೂ ಸಾಲ ಮನ್ನಾ ಮಾಡಲಿಲ್ಲ ಎಂದರು.ರೈತರಿಗೆ ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ ರ‍್ವೋಚ್ಚ ನ್ಯಾಲಯದ ಮೊರೆ ಹೋಗಬೇಕಾಯಿತು. ನ್ಯಾಯಾಲಯ ತರ‍್ಪಿನಂತೆ ಕೇಂದ್ರ ರ‍್ಕಾರ ರೈತರಿಗೆ ಪರಿಹಾರ ಧನ ನೀಡಿತು. ಆಶ್ರಯ ಸಮಿತಿ ಅಧ್ಯಕ್ಷರಾದ ವಸಂತ್ ಕುಮಾರ್ ಸುರಪುರಕರ್ ಅಖಿಲ ಭಾರತ ವೀರಶೈವ ಸಮಾಜದ ತಾಲೂಕು ಅಧ್ಯಕ್ಷರು ಪೌರಾಯುಕ್ತರಾದ ರಮೇಶ್ ಬಡಿಗೇರ್ ಸೇರಿದಂತೆ ಇತರರು ಇದ್ದರು.
ಗ್ಯಾರಂಟಿಗಳನ್ನು ಯಾವುದೇ ಕಾಲಕ್ಕೆ ನಿಲ್ಲಿಸುವುದಿಲ್ಲ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಒಂದು ರ‍್ಷದಲ್ಲಿ ಉಚಿತ ಗ್ಯಾರಂಟಿಗಳನ್ನು ಜನರಿಗೆ ಕೊಟ್ಟಿದ್ದೇವೆ. 60 ಸಾವಿರ ಕೋಟಿ ರೂಪಾಯಿ ಹಣವನ್ನು ಬಡವರ ಖಾತೆಗೆ ಯಾವುದೇ ದಲ್ಲಾಳಿಗಳಿಲ್ಲದೆ ನೇರ ಖಾತೆಗೆ ಜಮಾ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಗ್ಯಾರಂಟಿಗಳನ್ನು ನಿಲ್ಲಿಸುವದಿಲ್ಲ. ಇದನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಡೆದುಕೊಳ್ಳಲಾಗುತ್ತಿಲ್ಲ.
-ಸಚಿವ ಶರಣಬಸಪ್ಪಗೌಡ ದರ್ಶನಪುರ.
