ಜಿಲ್ಲಾ ನ್ಯಾಯಾಲಯ ಕಂಪೌಡ್ ಕಾಮಗಾರಿಗೆ ವಿಳಂಬ ನೀತಿಯ ನಿಲುವೇಕೆ: ಕರವೇ ಆಕ್ರೋಶ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಜಿಲ್ಲಾ ನ್ಯಾಯಾಲಯ ಪೂರ್ಣ ಸಿದ್ದಗೊಂಡಿದ್ದು ಕಂಪೌAಡ್ ಕಾಮಗಾರಿ ಉದ್ದೇಶಪೂರ್ವಕವಾಗಿ ವಿಳಂಬ ನೀತಿ ಅನುಸರಿಸುತ್ತಾ ಕಾಲಹರಣ ಮಾಡಲಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿಎನ್. ಭೀಮುನಾಯಕ ಆರೋಪಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಈಗಾಗಲೇ ಜಿಲ್ಲಾ ನ್ಯಾಯಾಲಯದಲ್ಲಿ ೩೦೦೦ಕ್ಕೂ ಅಧಿಕ ಪ್ರಕರಣಗಳು ಬಾಕಿ ಇದ್ದು, ಕೇವಲ ಹೊಸ ಕೇಸ್ ಗಳನ್ನು ವಿಲೇ ಮಾಡಲಾಗುತ್ತಿದೆ. ಕಾರಣ ವೆಂದರೆ ಸೂಕ್ತ ಮೂಲಸೌಕರ್ಯ ಇಲ್ಲದೇ ಇರುವುದು ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ.

ಆದರೆ ನೂತನ ನ್ಯಾಯಾಲಯ ಸಂಕೀರ್ಣ ಶೀಘ್ರ ಕಾರ್ಯಾರಂಭ ಮಾಡಿದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕಿ ಜನತೆಗೆ ಶೀಘ್ರ ನ್ಯಾಯ ದಾನವಾಗುತ್ತದೆ ಆದರೆ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬAತೆ ಕೆಲವು ಜನಪ್ರತನಿಧಿಗಳು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಉದ್ದೇಶಪೂರ್ವಕವಾಗಿ ಕಾಮಗಾರಿ ವಿಳಂಬಕ್ಕೆ ಕಾರಣಕರ್ತರಾಗಿದ್ದು, ಇದು ಅಕ್ಷಮ್ಯವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಪೂರ್ಣ ಕಟ್ಟಡ ಶೀಘ್ರ ಪೂರ್ಣಗೊಂಡಿದ್ದರೂ ಕಂಪೌAಡ್ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ ಇದಕ್ಕೆ ಸಂಬAಧಪಟ್ಟವರ ದಿವ್ಯ ನಿರ್ಲಕ್ಷö್ಯ ಕಾರಣವಾಗಿದ್ದು, ಕೂಡಲೇ ಕಾಮಗಾರಿ ಗೆ ಚುರುಕು ಮುಟ್ಟಿಸಿ ತಕ್ಷಣ ಕೆಲಸ ಪೂರ್ಣಗೊಳಿಸಿ ನ್ಯಾಯಾಲಯ ಸಂಕೀಣ್ ಪ್ರಾರಂಭೋತ್ಸವ ನಡೆಸಬೇಕು.

ಹೊಸ ಸಂಕೀರ್ಣ ಆರಂಭವಾದಲ್ಲಿ ಮಹಿಳಾ ನ್ಯಾಯಾಲಯ, ಪೊಕ್ಸೊ ಮುಂದಾದ ಘಟಕಗಳು ಕಾರ್ಯಾರಂಭ ಮಾಡುವ ಮೂಲಕ ಶೀಘ್ರ ನ್ಯಾಯದಾನಕ್ಕೆ ಅನುವಾಗುತ್ತದೆ ಆದ್ದರಿಂದ ತಕ್ಷಣ ಸಂಬAಧಪಟ್ಟವರು ಎಚ್ಚೆತ್ತು ವಿಳಂಬಕ್ಕೆ ಅಡ್ಡಿಯಾಗಿರುವ ಅಡೆತಡೆಗಳನ್ನು ನಿವಾರಿಸಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು.

ಅಭಿವೃದ್ಧಿ ಮಾಡಬೇಕಾದ ಶಾಸಕರು ಈ ನಿಟ್ಟಿನಲ್ಲಿ ಕೆಲಸ ಮಾಡದೇ ಇನ್ನಾವ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ ಎಂದು ಅವರು ಪ್ರಶ್ನಿಸಿದ್ದು, ತಕ್ಷಣ ಕ್ರಮ ಕೈಗೊಂಡು ಕಾಮಗಾರಿ ಪೂರ್ಣಗೊಳಿಸದೇ ಇದ್ದರೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಕರವೇ ಮುಖಂಡರಾದ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ವಿಶ್ವಾರಾಧ್ಯ ದಿಮ್ಮೆ, ಅಂಬ್ರೇಷ್ ಹತ್ತಿಮನಿ, ಸಂತೋಷ ನಿರ್ಮಲಕರ್, ಸುರೇಶ ಬೆಳಗುಂದಿ, ಅಜುನ ಪವಾರ, ಭೀಮರಾಯ ರಾಮಸಮುದ್ರ, ಸಿದ್ದಪ್ಪ ಕ್ಯಾಸಪನಳ್ಳಿ ಕಾಶಿನಾಥ ನಾನೇಕ ಇನ್ನಿತರರು ಎಚ್ಚರಿಕೆ ನೀಡಿದ್ದಾರೆ.