ಕಗ್ಗತ್ತಲೆಯಲ್ಲಿ ಪೋಲಿಸ್ ಕ್ವಾಟ್ರಸ್ ರೋಡ

By admin

ಕಗ್ಗತ್ತಲೆಯಲ್ಲಿ ಪೋಲಿಸ್ ಕ್ವಾಟ್ರಸ್ ರೋಡ

ಕ್ಯಾರೆ ಅನ್ನದ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು
ಹೌದು
ರಾಯಚೂರು ನಗರವು ಭತ್ತದ ನಾಡು ಮತ್ತು ಶಾಕೋತ್ಪನ್ನ ಕೇಂದ್ರ ಬಿಂದು ಆಗಿದ್ದು ರಾಯಚೂರಿನಿಂದ ಸರಿಸುಮಾರು 20 ರಿಂದ 22 ಕಿಲೋಮೀಟರ್ ಅಂತರದಲ್ಲಿರುವ ಶಕ್ತಿನಗರ ದಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿದ್ದು ಹೊರ ರಾಜ್ಯಗಳಿಗೆ ಮಾತ್ರ ಸೀಮಿತವಾಗಿದೆ ಆದರೆ ರಾಯಚೂರು ನಗರಕ್ಕೆ ವಿದ್ಯುತ್ ತುಂಬಾ ಬೇಡಿಕೆಯಾಗಿದೆ
ಚುನಾವಣೆಯಲ್ಲಿ ಜನರ ಹತ್ತಿರ ಹೋಗಿ ನಿಮ್ಮ ಓಣಿಗಳಲ್ಲಿ ರಸ್ತೆ ನೀರು ಮತ್ತು ಬೀದಿ ದೀಪಗಳು ಹಾಕಿಸಿ ಕೊಡುತ್ತೇವೆ ಎಂದು ವಾಗ್ದಾನ ಮಾಡಿ ಆರಿಸಿ ಬಂದು ಅತ್ತಕಡೆ ವಾರ್ಡ್ ಗಳಲ್ಲಿ ಸಂಚರಿಸದೆ ಜನರ ಸಮಸ್ಯೆಗಳು ವಿಚಾರಿಸದೆ ಬೇಕು ಬೇಡವಂತೆ ವರ್ತಿಸುತ್ತಿದ್ದಾರೆ ರಾಯಚೂರು ನಗರದ ಎಲ್ ಬಿ ಎಸ್ ನಗರದಿಂದ ಪೊಲೀಸ್ ಕ್ವಾರ್ಟರ್ಸ್ ಪಕ್ಕದಲ್ಲಿ ಹಾದು ಹೋಗುವ ದಾರಿ ಸಂಪೂರ್ಣ ಹದಗೆಟ್ಟಿದ್ದು ನಾಮಕೆ ವಾಸ್ತೆ ವಿದ್ಯುತ್ ಕಂಬಗಳು ಕಾಣಿಸುತ್ತವೆ ಈ ಕಂಬಗಳಿಗೆ ಸರಿಯಾದ ಸ್ಟ್ರೀಟ್ ಲೈಟ್ ಗಳು ಮತ್ತು ಟ್ಯೂಬ್ ಲೈಟ್ ಗಳು ಇರುವುದಿಲ್ಲ ರಾತ್ರಿ ಏಳು ಗಂಟೆ ಆದರೆ ಸಂಪೂರ್ಣ ಕತ್ತಲಲ್ಲಿ ಈ ರಸ್ತೆ ಮುಳುಗಿರುತ್ತದೆ ರಸ್ತೆ ಬದಿ ಬೆಳೆದಿರುವ ಮುಳ್ಳು ಕಂಟೆ ಗಿಡಗಳು ತುಂಬಾ ಬೆಳೆದಿರುತ್ತವೆ ಮತ್ತು ಈ ರಸ್ತೆಯು ಅತಿ ಮುಖ್ಯವಾಗಿ ಬಡವರು ರಿಮ್ಸ್ ಆಸ್ಪತ್ರೆ ಮತ್ತು ಒಪೆಕ್ ಆಸ್ಪತ್ರೆ ಹೋಗಬೇಕಾದರೆ ಈ ರಸ್ತೆ ಅತಿ ಮುಖ್ಯವಾಗಿರುತ್ತದೆ ವಾರ್ಡ್ ನಂಬರ್ 28 29 ಮತ್ತು 30 ವಾರ್ಡಿನ ಜನಪ್ರತಿನಿಧಿಗಳಿಗೆ ಕೇಳಲು ಹೋದರೆ ನಮಗೆ ಈ ರೋಡು ನಮಗೆ ಸಂಬಂಧಪಡುವುದಿಲ್ಲ ಎಂದು ನೇರ ಉತ್ತರ ಕೊಟ್ಟು ಜಾರಿಕೊಳ್ಳುತ್ತಿದ್ದಾರೆ ಆದರೆ ಈ ರೋಡು ಯಾರಿಗೆ ಯಾವ ಜನಪ್ರತಿನಿಧಿಗೆ ಸಂಬಂಧಪಟ್ಟದ್ದು ಇರುತ್ತದೆ ಎಂದು ಯಾಕ್ಷಪ್ರಶ್ನೆಯಾಗಿದೆ.