ಗುಂಡು ಮತ್ತು ಭರ್ಚಿ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ:ರಾಜ್ಯ ಮಟ್ಟಕ್ಕೆ ಆಯ್ಕೆ
ಲಿಂಗಸಗೂರು:ತಾಲೂಕಿನ ಕ್ರೀಡಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ವೈಯಕ್ತಿಕ ಕ್ರೀಡೆ ಗುಂಡು ಎಸೆತ ಹಾಗೂ ಭರ್ಚಿ ಎಸೆತ ಸ್ಪರ್ಧೆಯಲ್ಲಿ ಗೆಜ್ಜಲಗಟ್ಟಾ ಟ್ಯಾಗೋರ ಸ್ಮಾರಕ ಪ್ರೌಢ ಶಾಲೆಯ ವಿದ್ಯಾರ್ಥಿ ಮಂಜುನಾಥ ತಂದೆ ದುರುಗಪ್ಪ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ತಾಲೂಕಿಗೆ ಹಾಗೂ ಶಾಲೆಗೆ ಕೀರ್ತಿ ತಂದಿದ್ದಾನೆ.ವಿದ್ಯಾರ್ಥಿಯ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಆರ್. ಕೆ. ಅಮರೇಶ, ಗಳಾದ ಬಸ
ವರಾಜ ಪಾಟೀಲ್, ಶಾಂತಪ್ಪ, ಅಶೋಕ ಕುಮಾರ ಭೋಜರಾಜ, ದೈಹಿಕ ಶಿಕ್ಷಕರಾದ ಶಿವಪುತ್ರ ಬೀದರ, ಶಾಲೆಯ ಮುಖ್ಯಪಾಧ್ಯಾಯರು ಶಿಕ್ಷಕ ವರ್ಗ, ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
