ನ್ಯಾಯಾಂಗದ ಬಗ್ಗೆ ಅಪಾರ ಗೌರವ: ಕರವೇ ಅಧ್ಯಕ್ಷ ಭೀಮುನಾಯಕ ಸ್ಪಷ್ಟನೆ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಜಿಲ್ಲಾ ನ್ಯಾಯಾಲಯ ಪೂರ್ಣ ಸಿದ್ದಗೊಂಡಿದ್ದು ಕಂಪೌಂಡ್ ಕಾಮಗಾರಿ ಉದ್ದೇಶಪೂರ್ವಕವಾಗಿ ವಿಳಂಬ ನೀತಿ ಅನುಸರಿಸುತ್ತಾ ಸರ್ಕಾರ ಹಾಗೂ ಗುತ್ತಿಗೆದಾರರು ಕಾಲಹರಣ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದು ಮಾನ್ಯ ನ್ಯಾಯಾಲಯದ ಕಾರ್ಯವೈಖರಿ ಬಗ್ಗೆ ಯಾವುದೇ ಟಿಪ್ಪಣಿ ಮಾಡಿರುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿಎನ್. ಭೀಮುನಾಯಕ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ನ್ಯಾಯಾಲಯ ಕಟ್ಟಡ ಕಾಮಗಾರಿ ದಾಖಲೆಯ ವೇಗದಲ್ಲಿ ಪೂರ್ಣಗೊಂಡಿದೆ. ಹಾಗೂ ನ್ಯಾಯಾಲಯ ಕಾರ್ಯಕಲಾಪಗಳು ಇತಿಮಿತಿಯಲ್ಲಿ ಸಾಗುತ್ತಿವೆ ಆದರೆ ಕಂಪೌಂಡ್ ಕಾಮಗಾರಿ ವಿಳಂಬದ ತೊಂದರೆಯಾಗಿದೆ ಎಂಬುದನ್ನು ಕರವೇ ಬಿಂಬಿಸಿದೆ ಎಂದು ಅವರು ತಿಳಿಸಿದ್ದಾರೆ.

ಗುತ್ತಿಗೆದಾರರು ಯಾವುದೇ ನೆಪ ಹೇಳದೇ ತಕ್ಷಣ ಕಾಂಪೌಂಡ್ ಕಾಮಗಾರಿ ಪೂರ್ಣಗೊಳಿಸಬೆಕು ಇಲ್ಲದಿದ್ದರೆ ಅವರ ಏಜೆನ್ಸಿಯನ್ನು ರದ್ದುಪಡಿಸಿ ಬೇರೆಯವರಿಗೆ ವಹಿಸಿಕೊಟ್ಟು ಶೀಘ್ರವೇ ಕಾಮಗಾರಿಯನ್ನು ಆರಂಭಿಸಿಬೇಕೆಂದು ಅವರು ಆಗ್ರಹಿಸಿದ್ದಾರೆ.

ಮಾನ್ಯ ನ್ಯಾಯಾಲಯ ಹಾಗೂ ಕಾನೂನು ಪರವಾಗಿ ಕರವೇ ಕಾರ್ಯನಿರ್ವಹಿಸುತ್ತದೆ ಕಾನೂನನ್ನು ಗೌರವಿಸಿ ಅದರಂತೆ ನಡೆಯುವುದು ಮತ್ತು ಕಾನೂನು ಚೌಕಟ್ಟಿನೊಳಗೆ ಕೆಲಸ ಮಾಡುವ ಶಿಸ್ತುಬದ್ಧ ಸಂಘಟನೆಯಾಗಿದೆ ಎಂದು ತಿಳಿಸಿರುವ ಅವರು ಮಾನ್ಯ ಜಿಲ್ಲಾ ನ್ಯಾಯಾಲಯ ಆಡಳಿತ, ಹಾಗೂ ಕಾರ್ಯವೈಖರಿ ಅತ್ಯುತ್ತಮವಾಗಿದ್ದು, ಇದರ ಬಗ್ಗೆ ತಾವು ಯಾವುದೇ ಟಿಪ್ಪಣಿ ಮಾಡಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಆದರೆ ಹೊಸ ನ್ಯಾಯಾಲಯಕ್ಕಾಗಿ ವಕೀಲರು ನಡೆಸಿದ ಹೋರಾಟಕ್ಕೆ ಬೆಂಬಲಿಸಿ ನ್ಯಾಯಾಲಯಕ್ಕೆ ಜಮೀನು ನೀಡದ ಸರ್ಕಾರದ ವಿರುದ್ಧ ನ್ಯಾಯಾಂಗ ಇಲಾಖೆ ಪರವಾಗಿ ಹೋರಾಟ ಮಾಡಿದ್ದೇವೆ ಎಂದು ಕರವೇ ಮುಖಂಡರಾದ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ವಿಶ್ವಾರಾಧ್ಯ ದಿಮ್ಮೆ, ಅಂಬ್ರೇಷ್ ಹತ್ತಿಮನಿ, ಸಂತೋಷ ನಿರ್ಮಲಕರ್, ಸುರೇಶ ಬೆಳಗುಂದಿ, ಅಜುನ ಪವಾರ, ಭೀಮರಾಯ ರಾಮಸಮುದ್ರ, ಸಿದ್ದಪ್ಪ ಕ್ಯಾಸಪನಳ್ಳಿ ಕಾಶಿನಾಥ ನಾನೇಕ ಇನ್ನಿತರರು ಹೇಳಿದ್ದಾರೆ.