
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಬೀರನೂರು ಕ್ರಾಸ್ನಿಂದ ಮದರಕಲ್ ಗ್ರಾಮಕ್ಕೆ ಕೂಡುವ ಸಂಪರ್ಕ ರಸ್ತೆ ಹಾಳಾಗಿ ಗುಂಡಿ ಬಿದ್ದು ಸಂಪೂರ್ಣ ಹದಗೆಟ್ಟಿದೆ.ಈ ರಸ್ತೆ ದುರಸ್ತಿ ಮಾಡಬೇಕೆಂದು ಸಾಮಾಜಿಕ ಹೋರಾಟಗಾರ ನಿಂಗಣ್ಣ ಕರಡಿ ಆಗ್ರಹಿಸಿದ್ದಾರೆ.
ಸುಮಾರು 1 ಕಿಲೋಮೀಟರ್ ವರೆಗೂ ಹದಗೆಟ್ಟಿರುವ ಈ ರಸ್ತೆಯ ಕುರಿತು ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನಕ್ಕೆ ತಂದರು ಪ್ರಯೋಜನೆಯಾಗಿಲ್ಲ,ಅಲ್ಲದೆ 2022 – 23 ನೇ ಸಾಲಿನಲ್ಲಿ ಮದರಕಲ್ ಗ್ರಾಮದಿಂದ ಬೀರೂರು ಕ್ರಾಸ್ ವರೆಗೆ 1 ಕಿಲೋಮೀಟರ್ ಬಿಟ್ಟು 3 ಕಿಲೋಮೀಟರ್ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿದ್ದಾರೆ,ಇನ್ನುಳಿದ 1 ಕಿಲೋಮೀಟರ್ ರಸ್ತೆ ಸಂಪೂರ್ಣ ಹಾಳಾಗಿ,ಹಲವು ಬಾರಿ ಅಪಘಾತಗಳು ಸಂಭವಿಸಿವೆ, ಮುಂದೆ ಸಂಭವಿಸುವ ದುರ್ಘಟನೆಗಳಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೇ ನೇರ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ, ಗುಂಡಿಗಳು ದಾಟುವಾಗ ಆಯಾ ತಪ್ಪಿದರೆ ಮರಣ ಗ್ಯಾರಂಟಿ,ಮುಂದೆ ಆಗುವ ಅನಾಹುತಗಳು ತಪ್ಪಿಸಬೇಕೆಂದರೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆಮೇಲಿರುವ ಗುಂಡಿಗಳು ಮುಚ್ಚಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡರು.
