ಮಾತೃವಂದನಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಅಂಗನವಾಡಿ ಕೇಂದ್ರಗಳಲ್ಲಿ ನೀಡುವ ಪೌಷ್ಠಿಕ ಆಹಾರವನ್ನು ಕಡ್ಡಾಯವಾಗಿ ಗರ್ಭಿಣಿಯರು ಸೇವನೆ ಮಾಡಬೇಕು ಜೊತೆಗೆ ಮಗುವಿನ ಆರೈಕೆ ಮತ್ತು ಮಗುವಿನ ಆಹಾರ ಸೇವನೆ ಮಾಡಿಸುವಾಗ ಸ್ವಚ್ಛತೆಗೆ ಆದ್ಯತೆ ನೀಡಬೇಕು  ಎಂದು ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಅವರು ನಿರ್ದೇಶಿಸಿದರು.

ನಗರದ ಸರಕಾರಿ ಪದವಿ ಪೂರ್ವ ಕಾಲೆಜಿನಲ್ಲಿ ಸೋಮವಾರದಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ ಪೋಷಣ್‌ ಅಭಿಯಾನ ಯೋಜನೆಯಡಿ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು “ ತಾಯಿಯ ಹೆಸರಲ್ಲಿ ಒಂದು ಗಿಡ ಅಭಿಯಾನದ ಅಂಗವಾಗಿ” ಗಿಡ ನೇಡುವ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳು ಡಾ.ಸುಶೀಲ ಬಿ. ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮತ್ತು ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರು ಕೂಡ ರಕ್ತ ಹೀನತೆಯ ಬಗ್ಗೆ ಹೆಚ್ಚಾಗಿ ಅರಿವು ಮೂಡಿಸುವ ಕಾರ್ಯವನ್ನು ಮಾಡುವುದು ಮತ್ತು ಸ್ಥಳಿಯವಾಗಿ ಲಭ್ಯವಿರುವ ಪೌಷ್ಠಿಕ ಆಹಾರ ಪದಾರ್ಥಗಳನ್ನು ಸೇವಿಸುವುದರ ಕುರಿತು ಪ್ರತಿ ಅಂಗನವಾಡಿಯಲ್ಲಿ ಗರ್ಭಿಣಿ, ಬಾಣಂತಿಯರ ಸಭೆಯನ್ನು ಏರ್ಪಡಿಸಿ ಅದರ ಪ್ರಾಮುಖ್ಯತೆ ತಿಳಿಸುವ ಕೆಲಸ ಮಾಡಬೇಕು

ಅಂಗನವಾಡಿ ಕಾರ್ಯಕರ್ತೆಯರು ತಯಾರಿಸಿದ ಪೌಷ್ಠಿಕ ಆಹಾರವನ್ನು ವಿಕ್ಷಿಸಿ , ಈ ತರಹದ ಆಹಾರವನ್ನು ನಮ್ಮ ಅಂಗನವಾಡಿ ಮಕ್ಕಳಿಗೂ ಸಹ ನೀಡಿ ಪೌಷ್ಠಿಕರನ್ನಾಗಿ ಮಾಡಿ ಎಂದು ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ  ಜಿಲ್ಲಾಧಿಕಾರಿ ತಿಳಿಸಿದರು.

ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಸದರಿ ಯೋಜನೆಯಡಿ ಪ್ರತಿ ವರ್ಷ ಸೆಪ್ಟೆಂಬರ್‌ 1-30ರವರೆಗೆ ಪೊಷಣ್‌ ಮಾಸಾಚರಣೆಯೆಂದು ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಮತ್ತು ಗ್ರಾಮ ಪಂಚಾಯತಿಗಳಲ್ಲಿ ಆಚರಿಸುತ್ತಾರೆ.

ಈ ಬಾರಿ 7 ನೇ ರಾಷ್ಟ್ರೀಯ ಪೋಶನ್ ಮಾಹೆಯು ಈ ಪ್ರಮುಖ ವಿಷಯಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ರಕ್ತಹೀನತೆ, ಬೆಳವಣಿಗೆಯ ಮಾನಿಟರಿಂಗ್, ಪೂರಕ ಆಹಾರ, .ಪೋಶನ್ ಭಿ ಪಢಾಯಿ ಭಿ, ಉತ್ತಮ ಆಡಳಿತಕ್ಕಾಗಿ ತಂತ್ರಜ್ಞಾನ, ಮತ್ತು . ಏಕ್ ಪೆಡ್ ಮಾ ಕೆ ನಾಮ್ ಸೇರಿದಂತೆ ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದು ತೀಳಿಸಿದರು. ಮಿಷನ್ ಪೋಶನ್ 2.0 ಮೂಲಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ದೇಶಾದ್ಯಂತ ಮಕ್ಕಳು, ಹದಿಹರೆಯದ ಹುಡುಗಿಯರು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಲ್ಲಿ ಅಪೌಷ್ಟಿಕತೆಯನ್ನು ಎದುರಿಸಲು ಸಮರ್ಪಿಸಲಾಗಿದೆ. ಸೆಪ್ಟೆಂಬರ್-2024 ತಿಂಗಳ ಅವಧಿಯ ಅಭಿಯಾನವು ಅಪೌಷ್ಟಿಕತೆಯ ವಿರುದ್ಧದ ಪ್ರಯತ್ನಗಳನ್ನು ಹೆಚ್ಚಿಸಲು ಮತ್ತು ರಾಷ್ಟ್ರದಾದ್ಯಂತ ಸಮಗ್ರ ಯೋಗಕ್ಷೇಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದರು

ಹೆಣ್ಣು ಮಕ್ಕಳು ಹದಿನಾಲ್ಕು ವರ್ಷ ಆದ ನಂತರ ಋತುಮತಿಯಾದಾಗಿನಿಂದ ಅವಳ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸಬೇಕಾಗುತ್ತದೆ ಅವರಲ್ಲಿ ರಕ್ತ ಹೀನತೆಗೆ ಬಲಿಯಾಗುತ್ತಾರೆ ಅದನ್ನು ತಡೆಗಟ್ಟಬೇಕಾದರೆ ಪೌಷ್ಠಿಕಾ ಆಹಾರದ ಬಗ್ಗೆ ತಿಳಿದುಕೊಳ್ಳುವುದು ಅನಿವಾರ್ಯ ಮತ್ತು  ಅಂಗನವಾಡಿ ಕಾರ್ಯಕರ್ತೆಯರು ಮನೆ ಭೇಟಿ ಮಾಡಿ ಸ್ಥಳಾವರಕಾಶ ಇರುವ ಗರ್ಭಿಣಿ ,ಬಾಣಂತಿ ಮನೆಗಳ ಹತ್ತಿರ ಪೌಷ್ಠಿಕ ಕೈತೋಟ ನಿರ್ಮಾಣ ಮಾಡಿ ತಿಳುವಳಿಕೆ ನೀಡಿ ಅಪೌಷ್ಠಿಕತೆ ನಿರ್ಮೂಲನೆ ಮಾಡಲು ಶ್ರಮಿಸಬೇಕು.
ಅಪೌಷ್ಟಿಕತೆ ಮಕ್ಕಳನ್ನು ಪೋಷಣೆ ಮಾಡುವುದು ಇದರ ಮುಖ್ಯ ಉದ್ದೇಶ.ಜಿಲ್ಲೆಯ ಎಲ್ಲಾ ಪಂಚಾಯಿತಿ ಮಟ್ಟದಲ್ಲಿ ಮಾಡುತ್ತಿದ್ದು, ಗ್ರಾಮ ಮಟ್ಟದಲ್ಲಿನ ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಅವರಿಗೆ ಸರಿಯಾದ ಚಿಕಿತ್ಸೆ ನೀಡುವುದಾಗಿದೆ. ಅವರನ್ನು ಪೌಷ್ಟಿಕಯುಕ್ತರನ್ನಾಗಿ ಮಾಡುವ ಗುರಿ ಸಾಧೀಸಲು ಎಲ್ಲರೂ ಸಹಕರಿಸಬೇಕು ಎಂದರು.

ಇದೇ ವೇಳೆ ಅಂಗನವಾಡಿ ಕೇಂದ್ರದ ಫಲಾನುಭವಿಗಳಾದ 05-ಜನ ಗರ್ಭಿಣಿಯರಿಗೆ ಸಮುದಾಯ ಆಧಾರಿತ ಚಟುವಟಿಕೆಯ ಭಾಗವಾದ ಸೀಮಂತ ಕಾರ್ಯಕ್ರಮ ಮತ್ತು 06 ತಿಂಗಳು ಪೂರೈಸಿದ ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. “ ತಾಯಿಯ ಹೆಸರಲ್ಲಿ ಒಂದು ಗಿಡ ಅಭಿಯಾನಕ್ಕೆ ಚಾಲನೆ”
ಅನೇಮಿಯಾ ಮುಕ್ತ ಯಾದಗಿರಿಯನ್ನಾಗಿ ಮಾಡಲು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಲಾಯಿತು.

ಸಂದರ್ಭದಲ್ಲಿ ಶ್ರೀ ಮರಿಯಪ್ಪ, ಗೌರವಾನ್ವಿತ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು  ವಿರನಗೌಡ ಪಾಟೀಲ್‌, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ  ಹೆಚ್.ಟಿ ಮಂಜುನಾಥ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳು ಡಾ. ಎಂ.ಎಸ್‌ ಪಾಟೀಲ್‌, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರೇಮಮೂರ್ತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಶ್ರೀಮತಿ ವನಜಾಕ್ಷಿ ಬೆಂಡಿಗೇರಿ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದಿಂದ ಡಾ. ರಾಜಕುಮಾರ್‌ ಎಂ ಮತ್ತು ಡಾ. ಶಶಿಕಲಾ ಎಸ್.ರುಳಿ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಜಿಲ್ಲಾ ಸಂಯೋಜಕರು ಯಲ್ಲಪ್ಪ ಕೆ., ಪೋಷಣ್ ಅಭಿಯಾನ್ ಯೋಜನೆಯ ಜಿಲ್ಲಾ ಸಂಯೋಜಕರು ಮನಿಷ್, ಹಾಗೂ, ಶಿಶು ಅಭಿವೃದ್ಧಿ ಯೋಜನೆ ಯಾದಗಿರಿಯ ಮೇಲ್ವಿಚಾರಕಿಯರು ಮತ್ತು ಸಿಬ್ಬಂದಿಗಳು ಹಾಜರಿದ್ದರು.