
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ದೇಶದಲ್ಲಿ ಸಾವಿರಾರು ವರ್ಷಗಳಿಂದ ಪರಂಪರಾಗತವಾಗಿ ನಡೆದುಕೊಂಡು ಬಂದ ಮಣ್ಣಿನ ಗಣೇಶನನ್ನು ಪೂಜಿಸುವ ಮಹತ್ವ, ಉದ್ದೇಶ ಹಾಗೂ ಹಿನ್ನೆಲೆಯನ್ನು ತಿಳಿಸುವ ಉದ್ದೇಶದಿಂದ ಪರಿಸರ ಸ್ನೇಹಿ ಗಣೇಶನ ಉಚಿತವಾಗಿ ವಿತರಿಸುವ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಶಿ ಸೂಪರ್ ಬಜಾರ್ ನ ಮಾಲೀಕರಾದ ಮಲ್ಲಿಕಾರ್ಜುಜ ಶಿರಗೋಳ ಪ್ರಕಟಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪರಂಪರಾಗತವಾಗಿ ಮಣ್ಣಿನಿಂದ ಮಾಡಿದ ಗಣೇಶನನ್ನೂ ಪೂಜೆಸಿದರೆ ಫಲ ಪ್ರಾಪ್ತಿಯಾಗುತ್ತದೆ ಎಂಬ ಧರ್ಮ ನೀತಿ ಇದ್ದರೂ ಸಹ ಆಧುನಿಕತೆಯ ಸೋಗು ಪಾಶ್ಚಾತ್ಯೀಕರಣದ ಪ್ರಭಾವದಿಂದಾಗಿ ನಮ್ಮ ಹಬ್ಬ ಹರಿದಿನಗಳು ಸಂಪೂರ್ಣ ಧರ್ಮ ಮಾರ್ಗದರ್ಶನದಿಂದ ಹೊರತಾಗಿ ಹಾದಿ ತಪ್ಪಿರುವುದನ್ನು ಮನಗಂಡು ಮತ್ತೆ ಮಣ್ಣಿನ ಗಣೇಶನ ಪೂಜೆ ಮಾಡುವುದೇ ಶ್ರೇಷ್ಠ ಎಂಬುದನ್ನು ತಿಳಿಸುವ ಉದ್ದೇಶದಿಂದ ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಳೆದ 4 ವರ್ಷಗಳಿಂದ ಮಣ್ಣಿನ ಗಣೇಶ ನ ಉಚಿತ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.
ಈ ಕಾರ್ಯವನ್ನು ಮೊದಲಿಗೆ ವಿಜಯ ವಿಠಲ ಸೇವಾ ಸಂಸ್ಥೆಯವರು ಆರಂಭಿಸಿದರು ಇವರೊಂದಿಗೆ ನಮ್ಮ ಶಶಿ ಚಾರಿಟೆಬಲ್ ಮತ್ತು ಶಿಕ್ಷಣ ಸಂಸ್ಥೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕ, ಪಾರ್ಲಿಮೆಂಟ್ ಗೆಳೆಯರ ಬಳಗ ಹಾಗೂ ಶ್ರೀ ಲಕ್ಷಿö್ಮÃ ದೇವಸ್ಥಾನ ಸಮಿತಿಯವರು ಜೊತೆಗೂಡಿ ಈ ಬಾರಿ ವಿಶೇಷವಾಗಿ ಮಣ್ಣಿನ ಗಣಪನನ್ನು ವಿತರಿಸುವ ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಬಾರಿ 750 ಮಣ್ಣಿನ ಗಣೇಶ ಪ್ರತಿಮೆಗಳನ್ನು ವಿತರಣೆ ಮಾಡುವ ಉದ್ದೇಶ ಹೊಂದಲಾಗಿದೆ ಇದಕ್ಕಾಗಿ ಈಗಾಗಲೇ ಉಚಿತವಾಗಿ ಪಡೆಯಬೇಕೆನ್ನುವವರು ಮೊಬೈಲ್ ಸಂಖ್ಯೆ 9739519803 ನೋಂದಣಿ ಮಾಡಿಸಿಕೊಳ್ಳಬೇಕು ವಾಟ್ಸಪ್ ಮುಖಾಂತರ ನೋಂದಣಿ ಮಾಡಿಕೊಳ್ಳಬಹುದು ಎಂದರು. ವಿತರಣೆ ಮಾಡುವ ಪ್ರತಿ ಗಣೇಶನ ಒಡಲಲ್ಲಿ ಬೀಜಗಳನ್ನು ಇಟ್ಟು ತಯಾರಿಸಲಾಗಿದ್ದು ಭಕ್ತಾದಿಗಳು ತಮ್ಮ ಮನೆಯ ಮುಂದೆ ಪಾಟ್ ಗಳಲ್ಲಿಯೂ ಗಣೇಶನನ್ನು ವಿಸರ್ಜಿಸುವ ಮೂಲಕ ಹಬ್ಬ ಪೂರ್ಣಗೊಳಿಸಬೇಕು ತದನಂತರ 15 ದಿನಗಳಲ್ಲಿ ಗಣೇಶನಿಂದ ಒಂದು ಸಸಿ ಹುಟ್ಟಲಿದ್ದು ಆ ಮೂಲಕ ಪರಿಸರಕ್ಕೆ ಸಸಿಯೊಂದರ ಕೊಡುಗೆಯೂ ಆಗಲಿದೆ ಎಂದು ಅವರು ತಿಳಿಸಿದರು.
ಸೆ. 5 ರಂದು ಬೆಳಗ್ಗೆ 11 ಗಂಟೆಗೆ ಇಲ್ಲಿನ ಹಿಂದಿ ಪ್ರಚಾರ ಸಭಾ (ಓಲ್ಡ್ ಬಿಸಿಎಂ ಹಾಸ್ಟಲ್) ಆವರಣದಲ್ಲಿ ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ. ಕಾರ್ಯಕ್ರಮಕ್ಕೆ ಚಾಲನೆ ನಿಡುವರು.
ಅಂದು ಸಂಜೆ ಲಕ್ಷಿö್ಮÃನಗರ ಲಕ್ಷಿö್ಮÃ ಗುಡಿಯಲ್ಲಿ 6.30ಕ್ಕೆ ಉಚಿತ ಮಣ್ಣಿನ ಗಣೇಶ ವಿತರಣೆಯನ್ನು ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಚಾಲನೆ ನಿಡುವರು ಎಂದು ತಿಳಿಸಿದರು.
ವಿಜಯ ವಿಠಲ್ ಸೇವಾ ಸಂಸ್ಥೆ ಅಧ್ಯಕ್ಷ ವಿಠಲ್ ಕುಲಕರ್ಣಿ ಮಾತನಾಡಿ, ಕಳೆದ ವರ್ಷ 750 ಅದಕ್ಕೂ ಮುನ್ನ 600 ಅದಕ್ಕೂ ಮುನ್ನ 160 ಮಣ್ಣಿನ ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸುತ್ತಾ ಬರಲಾಗುತ್ತಿದೆ ಎಂದರು.
ಸ್ವತಃ ಗಣೇಶ ಜನಿಸಿದ್ದೇ ಮಣ್ಣಿನಿಂದ ಎಂಬ ಧರ್ಮ ಗ್ರಂಥಗಳ ಉಲ್ಲೇಖವನ್ನು ಜನರಿಗೆ ತಿಳಿಸಿಕೊಡುವ ಉದ್ದೇಶದಿಂದ ಈ ಕಾರ್ಯವನ್ನು ಆರಂಭಿಸಿದ್ದು ಈದೀಗ ನಮ್ಮ ಪ್ರಯತ್ನ ಫಲ ಕೊಡುತ್ತಿದೆ. ಇನ್ನು ಮುಂದುವರೆದು ಈ ಬಾರಿ ಲಕ್ಷಿö್ಮÃನಗರ ವನ್ನು ಪಿಓಪಿ ಮುಕ್ತ ಗಣೇಶ ಮಾಡಲು ಉದ್ದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ಯಾದಗಿರಿಯ ಎಲ್ಲ ವಾರ್ಡುಗಳನ್ನು ಪಿಓಪಿ ಮುಕ್ತ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶÀವಾಗಿದೆ ಎಂದು ಅವರು ಹೇಳಿದರು.
ಈಗಾಗಲೇ ಉಚಿತ ಸಸಿ ವಿತರಣೆ ಯಂತಹ ಪರಿಸರ ಸಂರಕ್ಷಣೆಯೊAದಿಗೆ ಧರ್ಮ, ಪರಂಪರಾಗತ ಆಚರಣೆಗಳನ್ನು ಮಾಡುವ ನಿಟ್ಟಿನಲ್ಲಿ ಸಂಸ್ಥೆಗಳು ಕೆಲಸ ಮಾಡುತ್ತಿವೆ ಎಂದು ಹೇಳಿದ ಅವರು, ಈ ನಿಟ್ಟಿನಲ್ಲಿ ನಾಗರಿಕರು ಸಹ ಪ್ರಜ್ಞಾವಂತರಾಗುವ ಮೂಲಕ ಮೂಲ ಮಣ್ಣಿನಿಂದ ಹುಟ್ಟಿದ ಗಣೇಶನಿಗೆ ಮಣ್ಣಿನಿಂದ ಮಾಡಿದ ಮೂರ್ತಿಗಳನ್ನೇ ಪೂಜಿಸುವ ಜಾಗೃತಿ ಮೂಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಲಕ್ಷಿö್ಮÃ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ಶರಣಪ್ಪ ಬೆನಕನಹಳ್ಳಿ ಉಪಸ್ಥಿತರಿದ್ದರು. ನಂತರ ಪತ್ರಕರ್ತರಿಗೆ ಮಣ್ಣಿನ ಗಣೇಶನ ಮೂರ್ತಿಗಳು ವಿತರಿಸಲಾಯಿತು.
