
K. S. R. T. C ಬಸ್ ಮತ್ತು ಲೋಯಲ್ ಶಾಲೆಯ ವಾಹನ ಮುಖಮುಖಿ ಡಿಕ್ಕಿ ಸ್ಥಳದಲ್ಲಿ ಎರಡು ವಿದ್ಯಾರ್ಥಿಗಳ ಸಾವು ಚಾಲಕರ ನಿರ್ಲಕ್ಷ್ಯ.
ಸೆಕ್ಯುಲರ್ ವಾಯ್ಸ್ ನ್ಯೂಸ್ ಮಾನ್ವಿ
ತಾಲೂಕಿನ ಕಪಗಲ್ ಸಮೀಪದ ಹಳ್ಳದ ಪಕ್ಕದಲ್ಲಿ K. S. R. T. C ಬಸ್ ಮತ್ತು ಲೋಯಲ್ ಶಾಲೆಯ ವಾಹನ ಮುಖಮುಖಿ ಡಿಕ್ಕಿಯಾಗಿದ್ದು ಸ್ಥಳದಲ್ಲಿ ಎರಡು ವಿದ್ಯಾರ್ಥಿಗಳ ಸಾವು ಸಂಭವಿಸಿದ ಘಟನೆ ನಡೆದಿದೆ.
ಇನ್ನು ಹಲವಾರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ವಿದ್ಯಾರ್ಥಿಗಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಹಾಗೂ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ನಂತರ ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಕೆ. ನಿತೀಶ್ ಹಾಗೂ ರಾಯಚೂರು ಪೊಲೀಸ್ ವರಿಷ್ಠ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆ ನಡೆದ ಸ್ಥಳದಲ್ಲಿ ಹೋರಾಟಗಾರರು, ಗ್ರಾಮಸ್ಥರು, ವಿವಿಧ ಸಂಘಟನೆಯ ಮುಖಂಡರು ಕೆಲ ಕಾಲ ಅಧಿಕಾರಿಗಳು, ವಿರುದ್ಧ ಆಕ್ರೋಶ ಹೊರ ಹಾಕಿ ಪ್ರತಿಭಟನೆ ಮಾಡಿದರು.
ಮೃತ ಮಕ್ಕಳ ಪಾಲಕರ ಆಕ್ರಂದನ ಮಾತುಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ನಂತರ ಮಾತನಾಡಿದ ಅ ವರು, ಇಂದು ಈ ಘಟನೆ ಮನಕಲುಕುವಂತಾಗಿದೆ ಮುಂಜಾನೆ ನಡೆಬಾರದ ಘಟನೆ ನಡೆದು ಹೋಗಿದೆ, ಇದಕ್ಕೆ ಚಾಲಕರ ನಿರ್ಲಕ್ಷವೆ ಕಾರಣ ಎದ್ದು ತೋರುತ್ತದೆ, ಈಗಾಗಲೇ ಅಪಘಾತಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಇನ್ನು ಗಂಭೀರ ಗಾಯಗಳಾದ ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ರಿಮ್ಸ್ಅ ಆಸ್ಪತ್ರೆಗೆ ಸೇರಿಸಲಾಗಿದೆ ಅಲ್ಲದೆ ಗಂಭೀರ ಗಾಯಗಳಾದ ಮಕ್ಕಳಿಗೆ ಅವರ ಪಾಲಕರು ಯಾವ ಆಸ್ಪತ್ರೆಗೆ ಸೇರಿಸಲಿಚ್ಚಿಸುತ್ತಾರೆ ಆ ಆಸ್ಪತ್ರೆಗೆ ಮಕ್ಕಳನ್ನು ಕಳಿಸಿಕೊಡುತ್ತೇವೆ ಮಕ್ಕಳ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಅವರು ಗುಣಮುಖರಾಗುವರೆಗೂ ಹಣವನ್ನು ಸರ್ಕಾರವೇ ಬೆರಿಸಲಿದೆ ಎಂದರು.
ಈ ಘಟನೆಯಲ್ಲಿ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ಕೆ ಎಸ್ ಆರ್ ಟಿ ಸಿ ವತಿಯಿಂದ 5 ಲಕ್ಷ ರೂಪಾಯಿಗಳನ್ನು ಇವತ್ತೇ ನೀಡಲಾಗುತ್ತದೆ, ಮತ್ತು ಗಂಭೀರ ಗಾಯಗಳಾಗಿರುವ ಮಕ್ಕಳಿಗೆ 3 ಲಕ್ಷ ರೂಪಾಯಿಗಳನ್ನು ಒದಗಿಸಲಾಗುತ್ತದೆ, ಅಲ್ಲದೆ ಸರ್ಕಾರದ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣವನ್ನು ಬಿಡುಗಡೆ ಮಾಡುವ ಭರವಸೆಯನ್ನು ನೀಡಿದರು.
ಅಲ್ಲದೆ ಪಿಡಬ್ಲ್ಡಿ ಇಲಾಖೆ ಅಧಿಕಾರಿಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು, ಇನ್ನು ಮುಂದೆ ಯಾವುದೇ ಖಾಸಗಿ ಶಾಲೆಯಲ್ಲಿ ಸಾಮರ್ಥ್ಯ ಇಲ್ಲದ ವಾಹನಗಳನ್ನು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ವಾಹನದಲ್ಲಿ ಮಕ್ಕಳನ್ನು ಕರೆದುಕೊಂಡು ಹೋದಲ್ಲಿ ಆ ಸಂಸ್ಥೆ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದರು.
ಬಸ್ ಮತ್ತು ಖಾಸಗಿ ಶಾಲೆಯ ಲೋಯಲ್ ಶಾಲೆಯ ವಾಹನಗಳು ಅತಿ ವೇಗದಿಂದ ಮತ್ತು ಚಾಲಕರ ನಿರ್ಲಕ್ಷದಿಂದಾಗಿ ಎರಡು ವಾಹನಗಳು ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಸ್ಥಳದಲ್ಲಿ ಎರಡು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಇನ್ನು ಹಲವಾರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ವಿದ್ಯಾರ್ಥಿಗಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಹಾಗೂ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ನಂತರ ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಹಾಗೂ ರಾಯಚೂರು ಪೊಲೀಸ್ ವರಿಷ್ಠ ಅಧಿಕಾರಿಗಳು ಪರಿಶೀಲನೆ ಮಾಡಿದರು, ಸ್ಥಳದಲ್ಲಿ ನಡೆದಿದ್ದ ಹೋರಾಟಗಾರರು ಪಾಲಕರ ಆಕ್ರಂದನ ಮಾತುಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ನಂತರ ಮಾತನಾಡಿದವರು, ಇವತ್ತು ಶಿಕ್ಷಕರ ದಿನಾಚರಣೆ ಇದ್ದು ಈ ಘಟನೆ ಮನಕಲುಕುವಂತಾಗಿದೆ ಇಂದು ಮುಂಜಾನೆ ನಡೆಬಾರದ ಘಟನೆ ನಡೆದು ಹೋಗಿದೆ, ಇದಕ್ಕೆ ಚಾಲಕರ ನಿರ್ಲಕ್ಷವೆ ಕಾರಣ ಎದ್ದು ತೋರುತ್ತದೆ, ಈಗಾಗಲೇ ಅಪಘಾತಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಇನ್ನು ಉಳಿದ ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಅವರು ಪಾಲಕರು ಯಾವ ಆಸ್ಪತ್ರೆಗೆ ಸೇರಿಸಲಿಚ್ಚಿಸುತ್ತಾರೆ ಆಸ್ಪತ್ರೆಗೆ ಮಕ್ಕಳನ್ನು ಕಳಿಸಿಕೊಡುತ್ತೇವೆ ಮಕ್ಕಳ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಗುಣಮುಖ ಗುಣಮುಖರಾಗುವರೆಗೂ ಹಣವನ್ನು ಸರ್ಕಾರವೇ ಬರಿಸಲಿದೆ ಎಂದರು.
ಈಗಾಗಲೇ ಈ ರಸ್ತೆಯ ಬಗ್ಗೆ ಹಲವಾರು ದೂರು ಬಂದಿರುವ ಹಿನ್ನೆಲೆಯಲ್ಲಿ ಸಂಬಂದಿಸಿದ PWD ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಲಾಗುತ್ತದೆ, ಅಲ್ಲದೆ ಇನ್ನು ಮುಂದೆ ಯಾವುದೆ ಖಾಸಗಿ ಶಾಲೆಯ ಆಡಳಿತ ಯವರು ಸಾಮರ್ಥ್ಯ ವಿಲ್ಲದ ವಾಹನಗಳಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಿದ್ದೆ ಆದಲ್ಲಿ ಅಂತ ಸಂಸ್ಥೆಯ ಮಾನ್ಯತೆಯನ್ನು ರದ್ದು ಮಾಡಲಾಗುವುದು ಇಂದು ಹೇಳಿದರು.
