
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಭವಿಷ್ಯತ್ತಿನ ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತಿ ಮುಖ್ಯವಾಗಿದೆ ಎಂದು ಶಿಕ್ಷಕ ಅಬಿನ್ ಥಾಮಸ್ ಅಭಿಪ್ರಾಯ ಪಟ್ಟರು.
ಸಮೀಪದ ಬದ್ದೇಪಲ್ಲಿ ಗ್ರಾಮದ ನೋಬಲ್ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಬುಧವಾರ ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಮಣ್ಣಿನ ಮುದ್ದೆಯಂತಿರುವ ಮಗುವಿಗೆ ಅಕ್ಷರ ಜ್ಞಾನ ನೀಡಿ ಭವಿಷ್ಯತ್ತನ್ನು ಕಟ್ಟಿಕೊಡುವ ಶಿಕ್ಷಕನ ಕಾರ್ಯ ಸಾಧನೆ ಶ್ಲಾಘನೀಯವಾಗಿದೆ. ಒಬ್ಬ ಸಾಮಾನ್ಯ ಸೇವಕನಿಂದ ಹಿಡಿದ ರಾಷ್ಟçಪತಿಯವರೆಗೆ ಪ್ರತಿಯೊಬ್ಬರು ಶಿಕ್ಷಕನಿಂದ ಕಲಿತಿರುತ್ತಾರೆ ಈ ಕಾರಣಕ್ಕಾಗಿ ಸಮಾಜದಲ್ಲಿ ಶಿಕ್ಷಕನಿಗೆ ಅತ್ಯಮೂಲ್ಯ ಸ್ಥಾನವನ್ನು ನೀಡಲಾಗಿದೆ ಎಂದರು
ನಂತರ ಮುಖ್ಯಗುರು ನರಸಪ್ಪ ನಾರಾಯಣೋರ ಮಾತನಾಡಿ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಸಂಕಲ್ಪದೊAದಿಗೆ ಗಡಿ ಅಂಚಿನ ಬದ್ದೇಪಲ್ಲಿ ಗ್ರಾಮದಲ್ಲಿ ನೋಬಲ್ ಪಬ್ಲಿಕ್ ಶಾಲೆಯನ್ನು ಆರಂಭಿಸಲಾಗಿದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಾದ ಕಲೆ, ಸಂಗೀತ, ನೃತ್ಯ, ವಾಕ್ ಚಾತುರ್ಯ ಹೀಗೆ ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಇದಕ್ಕೆ ಪೋಷಕರ ಸಹಕಾರವು ಅತ್ಯವಶ್ಯವಾಗಿದೆ ಎಂದರು.
ಈ ವೇಳೆ ಶಾಲಾ ಶಿಕ್ಷಕರಾದ ಸನೀಶ್, ಮಾಳಪ್ಪ, ಕವಿತಾ, ಸುರೇಖಾ, ಸಾವಿತ್ರಿ, ಅದಿರಾ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರಣಯ ಕಾರ್ಯಕ್ರಮವನ್ನು ನಿರೂಪಿಸಿದರು.
