ಮಾಜಿ ಶಾಸಕ ವೆಂಕಟರಡ್ಡಿ ಮುದ್ನಾಳ ನಿಧನ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಯಾದಗಿರಿ : ಯಾದಗಿರಿಯ ಮಾಜಿ ಶಾಸಕರಾಗಿದ್ದ ವೆಂಕಟರಡ್ಡಿ ಮುದ್ನಾಳ(೭೧) ಅನಾರೋಗ್ಯದಿಂದ ಮಂಗಳವಾರ ಮದ್ಯಾಹ್ನ ೧೨:೩೦ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ,
ಕಳೆದ ೫-೬ ತಿಂಗಳಿನಿAದ ಅನಾರೋಗ್ಯಕ್ಕೆ ತುತ್ತಾಗಿದ್ದ ಮುದ್ನಾಳ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲ ಚಿಕಿತ್ಸೆ ಪಡೆಯುತ್ತಿದ್ದರು,
ಮೃತರು ಪತ್ನಿ, ಸಹೋದರ, ಸಹೋದರಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂದು-ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ,
ಕಲ್ಯಾಣ ಕರ್ನಾಟಕದಲ್ಲಿಯೇ ಹೆಸರಾಂತ ರಾಜಕೀಯ ಮನೆತನಗಳಲ್ಲಿ ಒಂದಾಗಿದ್ದ ಮುದ್ನಾಳ ಮನೆತನದ ಮಾಜಿ ಸಚಿವ ದಿ. ವಿಶ್ವನಾಥರಡ್ಡಿ ಮುದ್ನಾಳ ಅವರ ಪುತ್ರರಾಗಿದ್ದ ವೆಂಕಟರಡ್ಡಿ ಮುದ್ನಾಳ ನೇರ, ದಿಟ್ಟ ವ್ಯಕ್ತಿಯಾಗಿ ಜನತಾ ಪರಿವಾರದ ಮೂಲಕ ರಾಜಕೀಯ ಪ್ರವೇಶಿಸಿ ಮೊದಲ ಬಾರಿಗೆ ಪುರಸಭೆಗೆ ಆಯ್ಕೆಯಾಗಿ ಅಧ್ಯಕ್ಷರಾಗಿ ಕೆಲಸ ಮಾಡಿದರು,
೨೦೦೮ರಲ್ಲಿ ಗುರಮಿಠಕಲ್ ಮತಕ್ಷೇತ್ರ ಸಾಮಾನ್ಯಕ್ಷೇತ್ರವಾಗಿ ಬದಲಾವಣೆಯಾದ ನಂತರ ಅನಿವಾರ್ಯವಾಗಿ ಅವರು ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದರು, ಟಿಕೇಟ್ ಸಿಗದ ಪರಿಣಾಮ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪರಾಜಯಗೊಂಡರು, ನಂತರ ಬಿಜೆಪಿ ಸೇರ್ಪಡೆಗೊಂಡರು,
ಬಿಜೆಪಿಯಲ್ಲಿ ಅಸಮಧಾನಗೊಂಡ ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಕೆಜೆಪಿ ಪಕ್ಷವನ್ನು ಕಟ್ಟಿದರು, ಅವರ ಆಪ್ತರಲ್ಲಿ ಗುರುತಿಸಿಕೊಂಡಿದ್ದ ಮುದ್ನಾಳ ೨೦೧೩ರ ಚುನಾವಣೆ ಪೂರ್ವದಲ್ಲಿ ಕೆಜೆಪಿ ಪಕ್ಷ ಸೇರ್ಪಡೆಗೊಂಡು ೨ನೇ ಭಾರಿ ಕಣಕ್ಕಿಳಿದು ಕಾಂಗ್ರೆಸ್‌ನ ಬಾಬುರಾವ ಚಿಂಚನಸೂರಗೆ ಪ್ರಬಲ ಪೈಪೋಟಿ ನೀಡಿ ಕಡಿಮೆ ಮತಗಳ ಅಂತರದಿAದ ಪರಾಭವಗೊಂಡರು,
೨೦೧೮ರ ಚುನಾವಣಾ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಸಲಹೆ ಮೇರೆಗೆ ಗುರುಮಿಠಕಲ್ ಕ್ಷೇತ್ರ ಬಿಟ್ಟು ಯಾದಗಿರಿ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಕಾಂಗ್ರೆಸ್‌ನ ಮಾಜಿ ಸಚಿವ ಡಾ. ಮಾಲಕರಡ್ಡಿ ಅವರನ್ನು ೧೨ ಸಾವಿರಕ್ಕೂ ಹೆಚ್ಚು ಮತಗಳ ಅಂತರದಿAದ ಪರಾಜಯಗೊಳಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.
ರಾಜ್ಯದಲ್ಲಿ ಬಿಎಸ್‌ವೈ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಳ್ಳುತ್ತಿದ್ದಂತೆ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ಸರ್ಕಾರಿ ಮೆಡಿಕಲ್ ಕಾಲೇಜ್ ಮಂಜೂರಿ ಮಾಡಿಸಿದರು, ನಂತರ ಕಾಮಗಾರಿ ಪೂರ್ಣಗೊಳಿಸಿ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಅನುಕೂಲತೆ ಮಾಡಿಕೊಡುವಲ್ಲಿ ಮುದ್ನಾಳ ಪರಿಶ್ರಮ ಅಗಾದವಾದದ್ದು.

ಹಿಂದುಳಿದ ಯಾದಗಿರಿ ಜಿಲ್ಲಾ ಕೇಂದ್ರ ಹಾಗೂ ವಡಗೇರಾ ನೂತನ ತಾಲ್ಲೂಕಾ ಕೇಂದ್ರ ಸೇರದಂತೆ ಕ್ಷೇತ್ರದ ಅಭಿವೃದ್ದಿಗೆ ಸರ್ಕಾರದಿಂದ ಸಾಕಷ್ಟು ಅನುದಾನ ತರುವ ಮೂಲಕ ಬದಲಾವಣೆಗೆ ಯತ್ನಿಸಿ, ಕ್ಷೇತ್ರದಲ್ಲಿ ಶಾಂತಿ, ಸಾಮರಸ್ಯ ಅಭಿವೃದ್ಧಿಗೆ ಒತ್ತು ನೀಡಿ ಯಶಸ್ವಿಯಾಗಿ ಜನಮಾನಸದಲ್ಲಿ ಉಳಿದರು, ದುರಾದೃಷ್ಟ ೨೦೨೩ರ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಿAದ ಪರಾಜಯಗೊಂಡರು.
ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷರಾಗಿ ಎಲ್ಲರೊಂದಿಗೆ ಸಾಮರಸ್ಯದಿಂದ ಸಂಘಟನೆಗೆ ಶಕ್ತಿ ತುಂಬಿದ್ದರು.
ಕೆಲ ದಿನಗಳ ಹಿಂದೆ ಅವರ ಸಹೋದರ ಮಾಜಿ ಶಾಸಕ ಡಾ. ವೀರಬಸವಂತರಡ್ಡಿ ಮುದ್ನಾಳ ನಿಧನರಾಗಿದ್ದರು, ಅದೇ ನೋವಿನಲ್ಲಿದ್ದ ಮುದ್ನಾಳ ಪರಿವಾರ ವೆಂಕಟರಡ್ಡಿ ನಿಧನದಿಂದ ತೀವ್ರ ಆಘಾತಕ್ಕೆ ಒಳಗಾಗಿದೆ.

ಅವರ ನಿಧನಕ್ಕೆ ಅಬ್ಬೆತುಮಕೂರ ವಿಶ್ವಾರಾಧ್ಯ ಸಿದ್ದ ಸಂಸ್ಥಾನ ಮಠದ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮಿಜಿ, ಗುರುಮಿಠಕಲ್ ಖಾಸಾಮಠದ ಪೀಠಾಧಿಪತಿ ಶಾಂತವೀರ ಮಹಾಸ್ವಾಮಿಜಿ, ಹೆಡಗಿಮದ್ರಾದ ಶ್ರೀ ಶಾಂತ ಶಿವಯೋಗಿ ಮಠದ ಪೀಠಾಧಿಪತಿ ಶ್ರೀ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ, ಕೊಡಲಾದ ಪಂಚಮಸಿದ್ದಲಿಗ ಸ್ವಾಮಿಜಿ, ಸಂಗಮದ ಕರುಣೇಶ್ವರ ಮಹಾಸ್ವಾಮಿಜಿ, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ, ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಎಂ.ಬಿ.ಮಾಲಕರಡ್ಡಿ, ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಶಾಸಕರಾದ ಚನ್ನಾರಡ್ಡಿ ಪಾಟೀಲ್ ತುನ್ನೂರ, ಶರಣಗೌಡ ಕಂದಕೂರ, ಡಾ. ಶಿವರಾಜ ಪಾಟೀಲ್, ಬಿ.ಜಿ ಪಾಟೀಲ್, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಚನ್ನಪ್ಪಗೌಡ ಮೋಸಂಬಿ, ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ, ಡಾ.ಶರಣಭೂಪಾಲರಡ್ಡಿ, ಜಿಲ್ಲಾ ವಕ್ತಾರ ಹಣಮಂತ ಇಟ್ಟಗಿ, ಶರುಣುಗೌಡ ಬಾಡಿಯಾಳ, ರುದ್ರಗೌಡ ಪಾಟೀಲ್, ರಾಜು ಸ್ವಾಮಿ, ಲಿಂಗಪ್ಪ ಹತ್ತಿಮನಿ, ಶಂಕ್ರು ಸಾಹುಕಾರ ವಡಿಗೆರೆ, ಮಂಜುನಾಥ ಜಡಿ, ಶರಣು ಗೌಡ ಅಲಿಪುರ, ಮಹೇಶ್ ಕುರುಕಂಬಳ, ರಾಮರಡ್ಡಿ ಅಣಬಿ, ದೆವಿಂದ್ರನಾಥ ನಾದ, ವೆಂಕಟರಡ್ಡಿ ಅಬ್ಬೆತುಮಕೂರು, ಗುರು ಕಾಮ, ಪರುಶುರಾಮ ಕುರಕುಂದಿ, ಹೆಚ್.ಸಿ ಪಾಟೀಲ್ ರಾಜನಕೋಳುರ, ಬಸವರಾಜ ಸೋನ್ನದ, ಸೇರಿದಂತೆ ಹಲವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರ ಅಂತ್ಯಕ್ರೀಯೆ ಬುದವಾರ ಸಂಜೆ ೪ ಗಂಟೆಗೆ ನಗರಕ್ಕೆ ಹತ್ತಿರವಿರುವ ಅವರ ತೋಟದಲ್ಲಿ ಜರುಗಲಿದೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.