ದೇವಾನು ದೇವತೆಗಳಿಂದ ಗೌರವಿಸಲ್ಪಟ್ಟವರು ವಿಶ್ವಕರ್ಮ ಜನಾಂಗ : ಸುಭಾಶ್ಚಂದ್ರ ಕೌಲಗಿ

By admin

ಜಿಲ್ಲಾಡಳಿತ ವತಿಯಿಂದ ನಗರದ ಪದವಿ ಕಾಲೇಜು ಆಡಿಟೋರಿಯಂ ಸಭಾಂಗಣದಲ್ಲಿ ನಡೆದ  ಶ್ರೀ ವಿಶ್ವಕರ್ಮ ಜಯಂತ್ಯೋತ್ಸವ

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಶ್ರೀ ವಿಶ್ವಕರ್ಮರು ಅತ್ಯುತ್ತಮ ಕುಶಲಕರ್ಮಿ ಮತ್ತು ಅಪಾರ ಜ್ಞಾನವನ್ನು ಹೊಂದಿದ್ದರು. ದೇವರುಗಳಿಗೆ ಅರಮನೆಗಳನ್ನು, ಶಸ್ತಾçಸ್ತçಗಳನ್ನು ತಯಾರಿಸಿ ಕೊಟ್ಟಿದ್ದರಿಂದ ವಿಶ್ವಕರ್ಮ ಜನಾಂಗವು ದೇವಾನು ದೇವತೆಗಳಿಂದ ಗೌರವಿಸಲ್ಪಟ್ಟಿದೆ ಎಂದು ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಭಾಶ್ಚಂದ್ರ ಕೌಲಗಿ ಅವರು ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ಶ್ರೀ ವಿಶ್ವಕರ್ಮ ಜಯಂತ್ಯೋತ್ಸವ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಪದವಿ ಕಾಲೇಜು ಆಡಿಟೋರಿಯಂ ಸಭಾಂಗಣದಲ್ಲಿ ನಡೆದ ಶ್ರೀ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಶ್ರೀ ವಿಶ್ವಕರ್ಮರ ಕುರಿತು ಪ್ರಾಚೀನ ಭಾರತೀಯ ಬರಹಗಳು ಮತ್ತು ಧರ್ಮಗ್ರಂಥಗಳಲ್ಲಿ ಆಳವಾದ ಐತಿಹಾಸಿಕ ಬೇರುಗಳನ್ನು ಹೊಂದಿದೆ. ಅತ್ಯಂತ ಹಳೆಯ ಹಿಂದೂ ಧರ್ಮಗ್ರಂಥಗಳಲ್ಲಿ ಒಂದಾದ ಋಗೈದವು ವಿಶ್ವಕರ್ಮ ಕುರಿತು ಆರಂಭಿಕ ಉಲ್ಲೇಖಗಳನ್ನು ಒಳಗೊಂಡಿದೆ. ಹಿಂದೂ ಪುರಾಣಗಳಲ್ಲಿ, ವಿಶ್ವಕರ್ಮನನ್ನು ಬ್ರಹ್ಮಾಂಡದ ಆಕಾಶ ವಾಸ್ತುಶಿಲ್ಪಿ ಎಂದು ಪೂಜಿಸಲಾಗುತ್ತದೆ. ಶಿವನ ತ್ರಿಶೂಲ, ವಿಷ್ಣುವಿನ ಸುದರ್ಶನ ಚಕ್ರ, ರಾಜ ರಾವಣನ ಪುಷ್ಪಕ ವಿಮಾನ ಮತ್ತು ಇಂದ್ರನ ವಜ್ರ ಸೇರಿದಂತೆ ದೇವತೆಗಳಿಗೆ ವಿವಿಧ ಆಯುಧಗಳನ್ನು ರಚಿಸಲು ಮತ್ತು ಬಂಗಾರದ ಅರಮನೆಗಳನ್ನು ನಿರ್ಮಿಸಿ ಕೊಟ್ಟು ಅವರು ಹೆಸರುವಾಸಿಯಾಗಿದ್ದಾರೆ. ಭಗವಾನ್ ಕೃಷ್ಣನ ರಾಜ್ಯವಾದ ದ್ವಾರಕಾ ಮತ್ತು ಪಾಂಡವರಿಗಾಗಿ ಭವ್ಯವಾದ ಮಾಯಾ ಸಭಾವನ್ನು ನಿರ್ಮಿಸಿದ ಕೀರ್ತಿಯೂ ವಿಶ್ವಕರ್ಮನಿಗೆ ಸಲ್ಲುತ್ತದೆ. ಅವರು ಎಲ್ಲಾ ನಾಲ್ಕು ಯುಗಗಳು ಅಥವಾ ಕಾಸ್ಮಿಕ್ ಯುಗಗಳಲ್ಲಿ ದೇವತೆಗಳಿಗಾಗಿ ಹಲವಾರು ಅರಮನೆಗಳನ್ನು ವಿನ್ಯಾಸಗೊಳಿಸಿದ್ದಾರೆ ಎಂದು ತಿಳಿದುಬಂದಿದೆ ಎಂದು ಅವರು ನುಡಿದರು.
ದಿವ್ಯ ಸಾನಿಧ್ಯ ವಹಿಸಿದ ಯಾದಗಿರಿ ಏಕದಂಡಗಿ ಮಠದ ಕುಮಾರ ಮಹಾಸ್ವಾಮಿ ವಿಶ್ವಕರ್ಮ, ಅವರು ಮಾತನಾಡಿ ವಿಶ್ವಕರ್ಮ ಜನಾಂಗಕ್ಕೆ ಯಾವುದೇ ಜಾತಿಯಿಲ್ಲ, ಮತವಿಲ್ಲ, ಪಂಥವಿಲ್ಲ. ವಿಶ್ವಕ್ಕೆ ಯಾರು ಜೀವವನ್ನು, ಸೌಂದರ್ಯ, ಚೈತನ್ಯ, ಸ್ಪೂರ್ತಿಯನ್ನು ತುಂಬುತ್ತಾರೋ ಅವರೇ ವಿಶ್ವಕರ್ಮರು ಎಂದರು.

ವಿಶ್ವಕರ್ಮ ಸಮಾಜದ ಜನರು ಸಂಘಟಿತರಾಗುವುದರ ಜೊತೆಗೆ ಶೈಕ್ಷಣಿಕವಾಗಿ ಮುಂದೆ ಬರಬೇಕಿದೆ. ವಿಶ್ವಕರ್ಮ ಸಮಾಜದ ಅಭಿವೃದ್ಧಿಗಾಗಿ ಸರ್ಕಾರ ರಚಿಸಿರುವ ನಿಗಮ, ಮಂಡಳಿಗಳಿAದ ಸೌಲಭ್ಯ, ಸವಲತ್ತು ಪಡೆದು ಸಮಾಜದ ಜನರು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗುವಂತೆ ಮುಖಂಡರು ಶ್ರಮಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಅವರು ಕಾರ್ಯಕ್ರಮಕ್ಕೆ ದೀಪಬೇಳಗಿಸಿ ವಿಶ್ವಕರ್ಮ ಅವರ  ಭಾವಚಿತ್ರಕ್ಕೆ ಹಾಗೂ ಮೂರ್ತಿಗೆ ಪುಷ್ಪಾರ್ಚನೆಗೈದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನಾಯಕ ಮಾಲಿ ಪಾಟೀಲ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಜಿಲ್ಲಾಧ್ಯಕ್ಷ ಮಹೇಶ ಎಂ.ತಡಿಬಿಡಿ, ತಾಲೂಕು ಅಧ್ಯಕ್ಷ ಬನ್ನಪ್ಪ ವಿಶ್ವಕರ್ಮ ಕಾಳೆಬೆಳಗುಂದಿ, ವಿಶ್ವಕರ್ಮ ಸಮಾಜದ ಹಿರಿಯ ಮುಖಂಡ ಬಸವರಾಜ ಪಾಂಚಾಳ ಸೇರಿದಂತೆ ಇನ್ನಿತರ ಸಮಾಜದ ಮುಖಂಡರು, ಮಹಿಳೆಯರು ಉಪಸ್ಥಿತರಿದ್ದರು.