ಪಂಚಭೂತಗಳಲ್ಲಿ ಲೀನರಾದ ಮಾಜಿ ಶಾಸಕ ಮುದ್ನಾಳ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದ ಮಾಜಿ ಶಾಸಕ ವೆಂಕಟರಡ್ಡಿ ಮುದ್ನಾಳ ಅವರ ಅಂತ್ಯಕ್ರೀಯೆ ಬುಧವಾರ ಸಂಜೆ ೬ ಗಂಟೆಗೆ ನಗರಕ್ಕೆ ಹತ್ತಿರವಿರುವ ಅವರ ತೋಟದಲ್ಲಿ ವೀರಶೈವ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಹಾಗೂ ಸರ್ಕಾರಿ ಗೌರವಗಳೊಂದಿಗೆ ಜರುಗಿತು.
ತಡರಾತ್ರಿ ಅವರ ಪಾರ್ಥೀವ ಶರೀರ ನಗರದ ಅವರ ನಿವಾಸಕ್ಕೆ ತರಲಾಯಿತು, ಬೆಳಿಗ್ಗೆ ಧಾರ್ಮಿಕ ವಿಧಿ-ವಿಧಾನಗಳು ಜರುಗಿದ ನಂತರ ಸಾರ್ವಜನಿಕರ ದರ್ಶನಕ್ಕೆ ಅನುಕೂಲತೆ ಮಾಡಿಕೊಡಲಾಯಿತು.
ಬೆಳಿಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ರಾಜ್ಯ ಸಣ್ಣ ಕೈಗಾರಿಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಆಗಮಿಸಿ, ಅಗಲಿದ ಮುದ್ನಾಳಗೆ ಅಂತಿಮ ನಮನ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ನಂತರ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ಶಾಸಕರಾದ ಡಾ. ಶಿವರಾಜ ಪಾಟೀಲ್, ಬಿ.ಜಿ ಪಾಟೀಲ್, ಶಶೀಲ್ ನಮೋಶಿ, ರಾಜಾ ವೇಣುಗೋಪಾಲ ನಾಯಕ, ಹಂಪಣ್ಣಗೌಡ ಬಾದರ್ಲಿ, ಡಾ.ಅವಿನಾಶ ಜಾದವ್, ಚನ್ನಾರಡ್ಡಿ ಪಾಟೀಲ್ ತುನ್ನೂರ, ಮಾಜಿ ಸಚಿವರಾದ ಡಾ. ಎ.ಬಿ ಮಾಲಕರಡ್ಡಿ, ಅಮರೇಗೌಡ ಪಾಟೀಲ್ ಬಯ್ಯಾಪೂರ, ಹಾಲಪ್ಪ ಆಚಾರ, ಮಾಜಿ ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ, ಅಮರನಾಥ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರಡ್ಡಿ ಪಾಟೀಲ್ ಅನಪೂರ, ರಾಜುಗೌಡ ಕಂದಕೂರ, ಸುರೇಶ ಸಜ್ಜನ್, ರಾಜಶೇಖರ ಪಾಟೀಲ್ ವಜ್ಜಲ್, ಬಸನಗೌಡ ಪಾಟೀಲ್ ಯಡಿಯಾಪೂರ ಸೇರಿದಂತೆ ಹಲವು ಮುಖಂಡರು, ಜಿಲ್ಲಾಧಿಕಾರಿ ಡಾ. ಸುಶೀಲಾ.ಬಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ. ಸಂಗೀತಾ ಅಂತಿಮ ದರ್ಶನ ಪಡೆದರು.
ಅಬ್ಬೆ ತುಮಕೂರಿನ ವಿಶ್ವಾರಾಧ್ಯ ಸಿದ್ದ ಸಂಸ್ಥಾನ ಮಠದ ಪೀಠಾಧಿಪತಿ ಡಾ, ಗಂಗಾಧರ ಮಹಾಸ್ವಾಮಿಜಿ, ದೇವಾಪೂರದ ಶಿವಮೂರ್ತಿ ಸ್ವಾಮಿಜಿ, ಗುರುಮಿಠಕಲ್‌ನ ಖಾಸಾ ಮಠದ ಪೀಠಾಧಿಪತಿ ಶಾಂತವೀರ ಮಹಾಸ್ವಾಮಿಜಿ, ಹೆಡಗಿಮದ್ರಾದ ಶಾಂತಮಲ್ಲಿಕಾರ್ಜುನ ಸ್ವಾಮಿಜಿ, ಕೋಡಾಲದ ಪಂಚಮ ಸಿದ್ದಲಿಂಗ ಸ್ವಾಮಿಜಿ, ಸಂಗಮದ ಕರುಣೇಶ್ವರ ಮಹಾಸ್ವಾಮಿಜಿ, ಶ್ರೀಶೈಲಂನ ಗುರುಪಾದ ಸ್ವಾಮಿಜಿ, ದೋರನಹಳ್ಳಿಯ ಚಿಕ್ಕವೀರರಾಜೇಂದ್ರ ಸ್ವಾಮಿಜಿ, ವಿರೇಶ್ವರ ಸ್ವಾಮಿಜಿ ಸೇರದಂತೆ ಹಲವು ಮಠಾಧೀಶರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

ಮದ್ಯಾಹ್ನ ೨ ಗಂಟೆಗೆ ಪಾರ್ಥಿವ ಶರೀರ ಮೆರವಣಿಗೆ ಆರಂಭವಾಗಿ ಹೊಸಳ್ಳಿ ಕ್ರಾಸ್, ಗಂಜ್, ಮೈಲಾಪೂರ ಅಗಸಿ, ಗಾಂಧಿಚೌಕ್, ವೀರಶೈವ ಕಲ್ಯಾಣ ಮಂಟಪ, ಕನಕ ವೃತ್ತ, ಅಂಬೇಡ್ಕರ ಚೌಕ್, ಶಾಸ್ತಿçà ಚೌಕ್, ನೇತಾಜಿ ಚೌಕ್, ಪದವಿ ಕಾಲೇಜ್ ಮಾರ್ಗವಾಗಿ ಸಂಜೆ ೬ ಗಂಟೆಗೆ ಅವರ ತೋಟ ತಲುಪಿತು.
ನಂತರ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಸಹಸ್ರಾರು ಜನರ ಮದ್ಯೆ ಅಂತ್ಯಕ್ರೀಯೆ ಜರುಗಿತು.