
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಪ್ರತಿ ಮಾಹೆ 1000 ರೂ.ಗಳ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ ಎಂದು ಯಾದಗಿರಿ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳಾದ ಶರಣಪ್ಪ ಪಾಟೀಲ್ ಅವರು ಹೇಳಿದರು.
2024ರ ಅಕ್ಟೋಬರ್ 29ರ ಮಂಗಳವಾರ ರಂದು ಯಾದಗಿರಿ ನಗರದ ಸಾಯಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ವಿಶ್ವ ಆರೈಕೆದಾರರ ದಿನಾಚರಣೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯಾದಗಿರಿ ಶ್ರೀ ಸಾಯಿ ಎ.ಪಿ.ಡಿ ಸಂಸ್ಥೆ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
2024-25 ನೇ ಸಾಲಿನ Cerebral Palsy, Muscular Dystrophy, Parkinson Multiple Scelerosis ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ಮಾಹೆ 1000 ರೂ.ಗಳ ಪ್ರೋತ್ಸಾಹಧನÀವನ್ನು ಯೋಜನೆಯ ನೀಡಲಾಗುವುತ್ತಿದೆ.
ಈ ಸಂದರ್ಭದಲ್ಲಿ ಎ.ಪಿ.ಡಿ ಸಂಸ್ಥೆಯ ಸಂಯೋಜಕರಾದ ನಾಗಪ್ಪ ಜಿ ಆವಟಿ, ಶ್ರೀ ಸಾಯಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಅಜಿತ್ ಧೋಖಾ, ವಿಶ್ವಜ್ಯೋತಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಸುಭಾಷ್‌ಚಂದ್ರ ರಾಂಪೂರಕರ್, ಮಾತಾ ಮಾಣಿಕೇಶ್ವರಿ ಮಹಿಳಾ ಸಂಘದ ಶ್ರೀಮತಿ ಮಮತಾ ಜಾಧವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ಹಾಗೂ ಇನ್ನಿತರು ಉಪಸ್ಥಿತರಿದ್ದರು.
