ಬೀದಿ ಬದಿ ವ್ಯಾಪಾರಸ್ಥರಿಗೆ ಛತ್ರಿಗಳ ವಿತರಣೆ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಯುವ ಘಟಕದ ಅಧ್ಯಕ್ಷ ಸುರೇಶ್ ಜಾಕಾ ಅವರ ನೇತೃತ್ವದಲ್ಲಿ ಬುಧವಾರ ಬೀದಿ ಬದಿ ವ್ಯಾಪಾರಸ್ಥರಿಗೆ ಛತ್ರಿಗಳ ವಿತರಣೆ ಮಾಡಲಾಯಿತು.

ಬೀದಿ ಬದಿ ವ್ಯಾಪಾರಸ್ಥ ಮಹಿಳೆಯರು,ವೃದ್ಧರು ಬಿಸಿಲಿನಲ್ಲಿ ವ್ಯಾಪಾರ ಮಾಡುವದನ್ನು ಅರಿತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಚನ್ನಪ್ಪಗೌಡ ಮೋಸಂಬಿ ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಯುವ ಘಟಕದಿಂದ ಬೀದಿ ವ್ಯಾಪಾರಸ್ಥರಿಗೆ ಛತ್ರಿಗಳನ್ನು ಕೊಡಲಾಯಿತು.

ಯಾದಗಿರಿ ನಗರದ ಗಾಂಧಿ ವೃತ್ತ,ಸುಭಾಷ್ ವೃತ್ತ ಮೊದಲಾದ ಕಡೆ ವ್ಯಾಪಾರಸ್ಥರಿಗೆ ಛತ್ರಿಗಳನ್ನು ವಿತರಣೆ ಮಾಡಿ ಮಾನವೀಯ ಕಾಳಜಿ ತೊರಲಾಗಿದೆ.

ಈ ವೇಳೆ ಸುಭಾಷ್ ದೇವದುರ್ಗ, ಸಿದ್ದು ಪಾಟೀಲ, ಸಂಗಮೇಶ ಕೆಂಭಾವಿ, ಅರವಿಂದ ಕೆಂಭಾವಿ, ವಿಶ್ವ ಗಣಪುರ, ವಿನಯ ರ್ಯಾಕಾ,ನವೀನ್ ಗದಗಿ, ನಿಂಗಪ್ಪ ಕುಂಬಾರ, ನಾಗರಾಜ ಸಜ್ಜನ್, ವಿಶ್ವನಾಥ ಕಾಜಗಾರ, ಭರತ ಬುರನೂರು, ಸುರೇಶ್ ಸೇರಿದಂತೆ ಅನೇಕರು ಇದ್ದರು