ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಕಳೆದ ೪೯ ವರ್ಷಗಳಿಂದ ನಿಷ್ಠೆ ಹಾಗೂ ಪ್ರಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಹಾಗೂ ಸಹಾಯಕಿಯರನ್ನು ಖಾಯಂಗೊಳಿಸಬೇಕೆಂದು ಒತ್ತಾಯಿಸಿ ಅಂಗನವಾಡಿ ನೌಕರರ ಸಂಘ ತಾಲೂಕ ಸಮಿತಿ ವತಿಯಿಂದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಲ್ಲಣ್ಣ ದೇಸಾಯಿ ಅವರ ಮೂಲಕ ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಂಗನವಾಡಿ ನೌಕರ ಸಂಘದ ತಾಲೂಕ ಅಧ್ಯಕ್ಷೆ ಬಸಲಿಂಗಮ್ಮ ನಾಟೇಕಾರ್ ಅವರು, ೫೦ ವರ್ಷಗಳು ತುಂಬುತ್ತಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಅಂಗನವಾಡಿಗಳು ಅತ್ಯಂತ ಜವಾಬ್ದಾರಿಯಿಂದ ಅತ್ಯುತ್ತಮ ಕೆಲಸ ನಿರ್ವಹಿಸಿವೆ. ತಾಯಂದಿರ ಮಕ್ಕಳ ಭವಿಷ್ಯವನ್ನು ನಿರ್ಧರಿಸುವಲ್ಲಿ ಅಂಗನವಾಡಿ ಕೇಂದ್ರಗಳು ಪ್ರಮುಖ ಪಾತ್ರ ವಹಿಸಿದ್ದು ಐಸಿಡಿಎಸ್ ಮತ್ತು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕರು ಎಂದರೆ ಅತಿಶಯೋಕ್ತಿಯಲ್ಲ. ಅಂಗನವಾಡಿ ನೌಕರರು ಕಳೆದ ಐದು ದಶಕಗಳ ಸಮರ್ಪಕ ಕೆಲಸ ಮಾಡಿದ ನಂತರ ವಿವಿಧ ಸಮಿತಿಗಳು ಶಿಫಾರಸ್ಸು ಮಾಡಿದ ನಂತರವೂ ಅವರನ್ನು ಇನ್ನು ಕಾರ್ಮಿಕರೆಂದು ಗುರುತಿಸಲಾಗಿಲ್ಲ. ಸ್ವಾತಂತ್ರ‍್ಯ ಬಂದ ೭೫ ವರ್ಷಗಳ ನಂತರವೂ ನಮ್ಮ ದೇಶದ ಮಕ್ಕಳಿಗೆ ಬಾಲ್ಯದ ಆರೈಕೆ ಶಿಕ್ಷಣ ಮತ್ತು ಅಭಿವೃದ್ಧಿಗೆ (ಇ ಸಿ ಸಿ ಡಿ)ಗೆ ಕಾನೂನು ಬಂತ ಅರ್ಹತೆ ದೊರಕಿಲ್ಲ ಎಂಬುದು ಗಂಭೀರವಾದ ವಿಷಯವಾಗಿದೆ. ಗುಜರಾತ್ ಗೌರವನೇತ ಉಚ್ಚ ನ್ಯಾಯಾಲಯವು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಾಯಕ್ಕಯರನ್ನು ವರ್ಗ III ಮತ್ತು ವರ್ಗ Iಗಿ ರಲ್ಲಿ ನೌಕರನಾಗಿ ಕಾಯಂಗೊಳಿಸಲು ಆದೇಶ ನೀಡಿದೆ. ಅದರ ಪ್ರಕಾರ ಎಲ್ಲಾ ಅಂಗನವಾಡಿ ನೌಕರರನ್ನು ಸಹಾಯಕಿಯರನ್ನು ಕೂಡಲೇ ಖಾಯಂಗೊಳಿಸಬೇಕೆಂದು ಒತ್ತಾಯಿಸಿದರು.
ಇದೆ ವೇಳೆ ಮಾತನಾಡಿದ ವಡೆಗೇರ ತಾಲೂಕ ಅಧ್ಯಕ್ಷೆ ಇಂದಿರಾ ದೇವಿ ಕೊಂಕಲ್ ಅವರು ಮಾತನಾಡಿ, ಕಳೆದ ಆರು ವರ್ಷಗಳಿಂದ ಸಂಭಾವನೆ ಹೆಚ್ಚಿಸಿಲ್ಲ ಯಾವುದೇ ನಿವೃತ್ತಿ ಸೌಲಭ್ಯಗಳು ಇಲ್ಲವಾಗಿವೆ. ಯೋಜನೆಗಳನ್ನು ಖಾಸಗಿಕರಣ ಗೊಳಿಸಲು ಹಲವು ಪ್ರಯತ್ನಗಳು ನಡೆದಿವೆ. ಹೊಸ ಶಿಕ್ಷಣ ನೀತಿ ೨೦೨೦ (ಎನ್ ಇ ಪಿ)ರ ಅಡಿಯಲ್ಲಿ ಐಸಿಡಿಎಸ್ ನ ಶಾಲಾಪೂರ್ವ ಘಟಕವನ್ನು ಶಾಲಾ ಶಿಕ್ಷಣ ವ್ಯವಸ್ಥೆಗೆ ತೆಗೆದುಕೊಳ್ಳಲಾಗಿದೆ. ಇದೊಂದು ಅವೈಜ್ಞಾನಿಕ ಕ್ರಮವಾಗಿದೆ. ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು ಸಂಭಾವನೆ ಬಾಡಿಗೆ ಟಿಎ ಡಿಎ ಸಮವಸ್ತ್ರ ಅಂಗನವಾಡಿ ಕೇಂದ್ರಗಳಲ್ಲಿನ ಸೌಲಭ್ಯಗಳ ಮೊತ್ತ ಇಲ್ಲದೇ ಐಸಿಡಿಎಸ್ ಅಲ್ಲದ ಹೆಚ್ಚುವರಿ ಕೆಲಸ ಇತ್ಯಾದಿ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೆಚ್ಚುವರಿ ಕೆಲಸವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.
ತಾಲೂಕ ಕಾರ್ಯದರ್ಶಿ ಯಮನಮ್ಮ ದೋರನಹಳ್ಳಿ,ತಾಲೂಕ ಖಜಾಂಚಿ ಲಕ್ಷ್ಮೀ ಶಹಾಪುರ, ಶಾರದಾದೇವಿ ನಂದಿಹಳ್ಳಿ, ಯಲ್ಲಮ್ಮ ಸಗರ್, ಮಡಿವಾಳಮ್ಮ ಶಹಾಪುರ, ಗುರುಬಾಯಿ ಸಗರ್ ಅಶ್ವಿನಿ, ರೇಣುಕಾ, ಸುಮಂಗಲಾ, ಸಿಐಟಿಯು ತಾಲೂಕ ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ ಸೇರಿದಂತೆ ಅನೇಕ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ಇದ್ದರು.
