ವಿಶ್ವ ಮಧುಮೇಹ ದಿನಾಚರಣೆ, ಸ್ತನ ಕ್ಯಾನ್ಸರ್ ಅರಿವು ಕಾರ್ಯಕ್ರಮ : ಉತ್ತಮ  ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಲು ಕರೆ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಜೀವನ ಶೈಲಿಯಲ್ಲಿ  ಬದಲಾವಣೆ, ವ್ಯಾಯಾಮ ಮಾಡದೇ ಇರುವುದು, ತಂಬಾಕು ಹಾಗೂ ಸರಾಯಿ ಕುಡಿತದ ಚಟ, ಅಪೌಷ್ಠಿಕಾಂಶಯುಕ್ತ ಆಹಾರ ಸೇವನೆಗಳಿಂದ ಮಧುಮೇಹ ಬರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಎಮ್,ಎಸ್, ಪಾಟೀಲ್ ಅವರು ಹೇಳಿದರು.

ರಾಷ್ಟಿçÃಯ ಆರೋಗ್ಯ ಅಭಿಯಾನದಡಿಯಲ್ಲಿ ಎನ್,ಪಿ, ಎನ್,ಸಿ,ಡಿ ಕಾರ್ಯಕ್ರಮ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಕಲಬುರ್ಗಿ ವಿಭಾಗ ಹಾಗೂ ಎಲ್ ಮತ್ತು ಟಿ ತಂತ್ರಜ್ಞಾನ ಸೇವೆಗಳ ಸಂಯುಕ್ತಾಶ್ರಯದಲ್ಲಿ “ವಿಶ್ವ ಮಧುಮೇಹ ದಿನಾಚರಣೆ ಮತ್ತು ಸ್ತನ ಕ್ಯಾನ್ಸರ್ ಅರಿವು ಕಾರ್ಯಕ್ರಮವನ್ನು ಇಂದು ನವೆಂಬರ್ 16ರ ಶನಿವಾರದಂದು  ಮಧುಮೇಹ ಮತ್ತು ಯೋಗ ಕ್ಷೇಮ ಎಂಬ ಘೋಷವಾಕ್ಯದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿಯಿಂದ  ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 30 ವರ್ಷದ ಮೇಲ್ಪಟ್ಟ ಎಲ್ಲ ಸಾರ್ವಜನಿಕರ ತಪಾಸಣೆಗಾಗಿ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಸೌಲಭ್ಯ ಇದ್ದು, ಸಾರ್ವಜನಿಕರು ತಮ್ಮ ಆರೋಗ್ಯದ ಕುರಿತು ಹೆಚ್ಚಿನ  ಕಾಳಜಿವಹಿಸುವ  ಕುರಿತು ಅವಶ್ಯಕ ಮಾಹಿತಿ ನೀಡಿದರು.

ಯಾದಗಿರಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಹಣಮಂತರೆಡ್ಡಿ ಅವರು ಮಾತನಾಡಿ, ಮಧುಮೆಹ ಹೇಗೆ ಬರುವುದು ಮತ್ತು ಅದನ್ನು ಹೇಗೆ ತಡೆಗಟ್ಟುವುದು ಹಾಗೂ ಚಿಕಿತ್ಸಾ ವಿಧಾನಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿ,

ಯಾವುದೇ ರೋಗದ ಲಕ್ಷಣಗಳು ಕಂಡು ಬಂದಲ್ಲಿ  ತಕ್ಷಣ  ತಪಾಸಣೆ ಮಾಡಿಸಿಕೊಂಡು ರೋಗ ಬರದಂತೆ ತಡೆಗಟ್ಟುವಂತೆ ಸಲಹೆ  ನೀಡಿದರು.

ಕಲಬುರ್ಗಿ ವಿಭಾಗ ಇಂಡಿಯನ್ ಕ್ಯಾನ್ಸರ್ ಸೋಸೈಟಿ ಹಾಗೂ ಎಲ್.ಟಿ ತಂತ್ರಜ್ಞಾನ ಸೇವೆಗಳ, ವಿಭಾಗಿಯ ವ್ಯವಸ್ಥಾಪಕರು ಡಾ.ಗುರುರಾಜ ಕುಲಕರ್ಣಿ ಅವರು ಕ್ಯಾನ್ಸರ್ ಎಂದರೆ ದೇಹದ ಒಂದು ಭಾಗದ ಅಸಹಜ ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆಯಿಂದ ಉಂಟಾಗುವ ಒಂದು ರೋಗವಾಗಿದ್ದು, ಅದನ್ನು ಬೇಗನೆ ಪತ್ತೆ ಹಚ್ಚುವುದರಿಂದ ಖಂಡಿತವಾಗಿಯು ಗುಣಮುಖರಾಗುತ್ತಾರೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳು ಡಾ.ಪದ್ಮಾನಂದ ಗಾಯಕವಾಡ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು ಡಾ.ಮಲ್ಲಪ್ಪ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ.ಜ್ಯೋತಿ ಕಟ್ಟಿಮನಿ, ಜಿಲ್ಲಾ ಮಲೇರಿಯಾ ಅಧಿಕಾರಿಗಳಾದ ಡಾ.ಮುಬಾಶೀರ್ ಅಹ್ಮದ್ ಸಾಜೀದ್, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳಾದ ಡಾ.ಸಂಜೀವ್ ಕುಮಾರ್ ರಾಯಚೂರ್‌ಕರ್, ಯಾದಗಿರಿ ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳು,ಎನ್.ಸಿ.ಡಿ. ಕೋಶದ ಡಾ.ರಶೀದ್, ಶ್ರೀ ಯಾದವ್ ಕುಲಕರ್ಣಿ, ಡಾ.ಗೋವಿಂದ, ಡಾ.ಅರುಣ, ಆರ್.ಸಿ.ಹೆಚ್ ವಿಭಾಗದ ಶ್ರೀ ಮನೋಹರ ಪಾಟೀಲ್, ಶ್ರೀಮತಿ ಸಹನಾ, ಶ್ರೀಮತಿ ಮಹಾಲಕ್ಷಿö್ಮÃ, ಶ್ರೀ ವಿಜಯ ಕುಮಾರ, ಶ್ರೀ ವೆಂಕಟೇಶ ಜಿ, ಮತ್ತು ಎನ್.ಸಿ.ಡಿ, ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.