ನಗರದ ಗಾಂಧಿ ಚೌಕ್ ನಲ್ಲಿರುವ ಮಳಿಗೆಗಳಿಗೆ ನಗರಸಭೆ ಅಧ್ಯಕ್ಷರು, ಪೌರಾಯಕ್ತರು ಖದ್ದು ಭೇಟಿಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ನಗರದಲ್ಲಿನ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರು ಸಕಾಲದಲ್ಲಿ ತೆರಿಗೆ ಪಾವತಿ ಮಾಡಿ ನಗರದ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಬೇಕು ಎಂದು ನಗರಸಭೆ ಅಧ್ಯಕ್ಷೆ ಕು.ಲಲಿತಾ ಅನಪೂರ ಹಾಗೂ ಪೌರಾಯುಕ್ತ ರಜನಿಕಾಂತ್ ಶೃಂಗೇರಿ ಅವರು ಮನವಿ ಮಾಡಿದರು.
ನಗರದ ಗಾಂಧಿ ಚೌಕ್‌ನಲ್ಲಿನ ವ್ಯಾಪಾರದ ಮಳಿಗೆಗಳಿಗೆ ನಗರಸಭೆ ಅಧ್ಯಕ್ಷರು, ಪೌರಾಯಕ್ತರು ಹಾಗೂ ಸಿಬ್ಬಂದಿ ಖುದ್ದಾಗಿ ಭೇಟಿ ನೀಡಿ, ಅಂಗಡಿ ಬಾಡಿಗೆ ಹಾಗೂ ಉದ್ದಿಮೆ ಪರವಾನಿಗೆಗೆ ನಗರಸಭೆ ನಿಗಧಿಪಡಿಸಿದ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಿ ನಗರಾಭಿವೃದ್ಧಿಗೆ ಸಹಕರಿಸುವಂತೆ ಅವರು ಮನವಿ ಮಾಡಿದರು
