
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಬೂದು ನೀರು ನಿರ್ವಹಣೆ ಮಾಡಲು ಜಿಲ್ಲೆಯ ಯಾದಗಿರಿ ತಾಲೂಕಿನ ಬಂದಳ್ಳಿ, ಹಳಿಗೇರಾ ಹಾಗೂ ಗುರುಮಟಕಲ್ ತಾಲೂಕಿನ ಂiÀಲ್ಹೇರಿ, ಅನಪೂರ ಗ್ರಾಮಗಳಲ್ಲಿ ಅನುಷ್ಟಾನ ಮಾಡುತ್ತಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯ ಭೌತಿಕ ಸ್ಥಿತಿ ಹಾಗೂ ಕಾಮಗಾರಿಯ ಅಂದಾಜು ಪತ್ರಿಕೆ (ಡಿಪಿಆರ್) ಪರಿಶೀಲಿಸಿ, ಮಾತನಾಡಿದರು.
ಗ್ರಾಮದಲ್ಲಿ ಸ್ವಚ್ಛ ನೈರ್ಮಲ್ಯ ಕಾಪಾಡಲು ಗ್ರಾಮೀಣ ಜನರು ದಿನನಿತ್ಯ ಬಟ್ಟೆ, ಪಾತ್ರೆ ತೊಳೆದ ನೀರು, ಗೃಹ ಬಳಕೆ ನೀರು, ಸ್ನಾನ ಮಾಡಿದ ನೀರನ್ನು ಯೋಜಿತವಾಗಿ ಸಂಸ್ಕರಿಸಿ ನಿರ್ವಹಿಸುವ ಮೂಲಕ ಹಳ್ಳ-ಕೊಳ್ಳ ಹಾಗೂ ನದಿಯಂತಹ ಜಲಮೂಲ ಸೇರುವಂತೆ ನಿಗಾವಹಿಸಬೇಕು ಎಂದರು.
ಪ್ರತಿ ಮನೆಗೂ ಚರಂಡಿಯ ಸಂಪರ್ಕ ಕಲ್ಪಿಸುವ ಮೂಲಕ ಬೂದು ನೀರು ಎಲ್ಲೂ ನಿಲ್ಲದಂತೆ ಎಚ್ಚರವಹಿಸಿ, ಬೂದು ನೀರಿನ ಪ್ರತ್ಯೇಕ ಸಂಸ್ಕರಣೆ ಮೂಲ ಬೇರ್ಪಡಿಕೆ ಪರಿಕಲ್ಪನೆಯಡಿ ಬರುತ್ತದೆ. ಇದು ಪರಿಸರ ನೈರ್ಮಲ್ಯ ವಿಧಾನಗಳಲ್ಲಿ ಸಾಮಾನ್ಯವಾಗಿ ಅನ್ವಯಿಸುವ ತತ್ವ. ಬೂದುನೀರನ್ನು ಶೌಚಾಲಯದ ತ್ಯಾಜ್ಯನೀರಿನಿಂದ ಪ್ರತ್ಯೇಕವಾಗಿ ಇಟ್ಟುಕೊಳ್ಳುವುದರ ಮುಖ್ಯ ಪ್ರಯೋಜನ ರೋಗಕಾರಕಗಳ ಹೊರೆ ಕಡಿಮೆಯಾಗಿ, ಉWಒ ಅನ್ನು ಸಂಸ್ಕರಿಸಲು ಮತ್ತು ಮರುಬಳಕೆ ಮಾಡಲು ಸುಲಭವಾಗಿದೆ ಎಂದು ಹೇಳಿದರು.

ತಂಡದ ಇನ್ನಿಬ್ಬರು ಸದಸ್ಯರಾದ ಪ್ರಾಜೆಕ್ಟ್ ಇಂಜಿನಿಯರ್ ಶ್ರೀ ಅಭಿರಾಮ್ ಹಾಗೂ ಜಿಐಎಸ್ ಸಂಯೋಜಕ ಆದರ್ಶ ರವರು ಅನುಷ್ಟಾನ ಮಾಡಿದ ಹಾಗೂ ಗುರುತಿಸಿದ ಗ್ರೇವಾಟರ್ ಕಾಮಗಾರಿ ಸ್ಥಳದ ಲಭ್ಯತೆಗೆ ಅನುಸಾರ ಯೋಜನಾ ವಿಸ್ತೃತ ವರದಿಯ ಕ್ರಮ ಬದ್ದತೆ ಪರಿಶೀಲಿಸಿದರು.
ಇದಕ್ಕೂ ಮುನ್ನ ನವೆಂಬರ್ 20 ರಂದು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆ ಅನುಷ್ಟಾನದ ಕುರಿತು ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನ ಸಭೆ ನಡೆಸಿದ ಅವರು, ಮಾನವ ದಿನಗಳ ಸೃಜನೆ, ಕಾಮಗಾರಿ ಪೂರ್ಣಗೊಳಿಸುವಿಕೆ, ಸಾಮಾಜಿಕ ಲೆಕ್ಕ ಪರಿಶೋಧನೆ, ಆಧಾರ ನೋಂದಣಿ, ಜಿರೊ ಎಕ್ಸ್ಪೆಂಡಿಚರ್ ಕಾಮಗಾರಿ, ಜಿಯೋ ಮನರೇಗಾ, ರಿಜೆಕ್ಟ್ ಟ್ರಾನಜೆಕ್ಷನ್, ನರೇಗಾ ಕಾರ್ಮಿಕರ ಆನ್‌ಲೈನ್ ಹಾಜರಾತಿ ಸೇರಿದಂತೆ ಇತರೆ ವಿಷಯಗಳಲ್ಲಿ ನಿಗದಿತ ಗುರಿಗೆ ಅನುಸಾರ ಪ್ರಗತಿ ಸಾಧಿಸಿ ಎಂದು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಯಾದಗಿರಿ ಜಿಪಂ ಯೋಜನಾ ನಿರ್ದೇಶಕರಾದ ಶ್ರೀ ಸಿಬಿ ದೇವರಮನಿ, ಯಾದಗಿರಿ, ಗುರುಮಠಕಲ್ ವಡಿಗೇರಾ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಮಹಾದೇವ ಬಾಬಲಗಿ, ಶ್ರೀ ಅಮರೇಶ ಪಾಟೀಲ, ಮಲ್ಲಿಕಾರ್ಜುನ ಸಂಗ್ವಾರ, ಸಹಾಯಕ ನಿರ್ದೇಶಕರಾದ ರಾಮಚಂದ್ರ ಬಸೂದೆ, ಎಡಿಪಿಸಿ ಶ್ರೀ ಬನ್ನಪ್ಪ ಬೈಟಪುಲ್ಲಿ, ಜಿಲ್ಲಾ ಐಇಸಿ ಸಂಯೋಜಕ ಶ್ರೀ ಪರಶುರಾವi ಬಾವೂರ, ಜಿಲ್ಲೆಯ ಎಲ್ಲಾ ಪಿಡಿಒ, ತಾಂತ್ರಿಕ ಸಂಯೋಜಕರು, ಸಹಾಯಕರು, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
