
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಜಿಲ್ಲೆಗೆ ನೂತನವಾಗಿ ಆಗಮಿಸಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಗಳು ಡಾ.ಮಹೇಶ ಬಿರದಾರ ಅವರು ಅಧಿಕಾರ ಸ್ವಿಕರಿಸಿದ್ದಾರೆ ಎಂದು ಯಾದಗಿರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.
2024ರ ನವೆಂಬರ್ 19ರ ಮಂಗಳವಾರ ರಂದು ಯಾದಗಿರಿ ಜಿಲ್ಲೆಗೆ ನೂತನವಾಗಿ ಆಗಮಿಸಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಅಧಿಕಾರಿಗಳು ಡಾ.ಮಹೇಶ ಬಿರದಾರ ಅವರು ಅಧಿಕಾರ ಸ್ವಿಕರಿಸಿದರು. ಇವರು ಆಡಳಿತ ವೈದ್ಯಾಧಿಕಾರಿಗಳಾಗಿ ಪ್ರಾ.ಆ ಕೇಂದ್ರ ಲಖನಗಾಂವ ತಾ.ಭಾಲ್ಕಿ ಜಿ.ಬೀದರ, ವೈದ್ಯಾಧಿಕಾರಿಗಳಾಗಿ ಸಮುದಾಯ ಆರೋಗ್ಯ ಕೇಂದ್ರ ಸಂತಪೂರ, ತಾ.ಔರಾದ್, ಜಿ.ಬೀದರ್, ಹಾಗೂ ತಾಲ್ಲೂಕ ಆರೋಗ್ಯ ಅಧಿಕಾರಿಗಳಾಗಿ ಔರಾದ್, ಜಿ.ಬೀದರ್, ಹಿರಿಯ ವೈದ್ಯಾಧಿಕಾರಿಗಳಾಗಿ ಸಮುದಾಯ ಆರೋಗ್ಯ ಕೇಂದ್ರ ಸಂತಪೂರ, ತಾ.ಔರಾದ್ ಜಿ.ಬೀದರ್, ಮತ್ತು ಜಿಲ್ಲಾ ಕುಷ್ಟರೋಗ ನಿಯಂತ್ರಣ ಅಧಿಕಾರಿಗಳಾಗಿ ಬೀದರ ಜಿಲ್ಲೆ, ಮತ್ತು ಜಿಲ್ಲಾ ಶಸ್ತç ಚಿಕಿತ್ಸಕರು (ಬ್ರೀಮ್ಸ) ಜಿಲ್ಲಾ ಆಸ್ಪತ್ರೆ ಬೀದರ್, ವಿವಿಧ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
