ಗೌರವಯುತ ಬದುಕು ಕಟ್ಟಿಕೊಳ್ಳಲು ಅವಕಾಶ ಕೊಡಿ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಎಲ್ಲೋ ಕೆಲವಿಷ್ಟು ಹೆಚ್ಚಿನ ವಿದ್ಯಾಭ್ಯಾಸ ಪಡೆದ ಲಿಂಗತ್ವ ಅಲ್ಪಸಂಖ್ಯಾತರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದು, ಇನ್ನುಳಿದ ಬಹುಪಾಲು ಲಿಂಗತ್ವ ಅಲ್ಪಸಂಖ್ಯಾತರು ಕಷ್ಟ ಕಾರ್ಪಣ್ಣಗಳಲ್ಲಿ ತಮ್ಮ ದಿನಗಳನ್ನು ಕಳೆಯುತ್ತಾ ಬರುತ್ತಿದ್ದಾರೆ. ತಮ್ಮದಲ್ಲದ ತಪ್ಪಿಗೆ ಲಿಂಗತ್ವ ಅಲ್ಪಸಂಖ್ಯಾತರು ಇಂದಿನ ಸುಶಿಕ್ಷಿತ ಸಮಾಜದಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪರದಾಡುತ್ತಿದ್ದಾರೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಸಮಾಜ ತಾತ್ಸಾರ ಮನೋಭಾವನೆಯಿಂದ ಕಾಣುವುದನ್ನು ಬಿಟ್ಟು ಅವರೂ ಸಹ ಗೌರವಯುತವಾಗಿ ಬದುಕಲು ಮತ್ತು ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಬೇಕಾಗಿದೆ ಎಂದು ಗೌರವಾನ್ವಿತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಮರಿಯಪ್ಪ ಅವರು ಹೇಳಿದರು.

ಯಾದಗಿರಿ ನಗರದ ಸ್ತಿçà ಶಕ್ತಿ ಭವನದಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಸಮುದಾಯದ ಸದಸ್ಯರ ಹಕ್ಕುಗಳು ಹಾಗೂ ಅವರು ಎದುರಿಸುತ್ತಿರುವ ಸವಾಲುಗಳು, ಕುರಿತು ವಿಶೇಷ ಕಾನೂನು ಅರಿವು ತರಬೇತಿ, ಹಾಗೂ ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಯಾದಗಿರಿ ಜಿಲ್ಲಾ ವಕೀಲರು ಸಂಘ, ಯಾದಗಿರಿ ಆಶಾ ಕಿರಣ ಸಾಮಾಜಿಕ ಸೇವಾ ಸಂಸ್ಥೆ ಮೈತ್ರಿ ಸಂಸ್ಥೆಯಿAದ 2024ರ ನವೆಂಬರ್ ಮಾಹೆಯ ಇತ್ತೀಚಿನ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಸಮಾಜವು ಒಂದು ಸಮುದಾಯವನ್ನು ಗೌರವಯುತವಾಗಿ ನಡೆಸಿಕೊಳ್ಳದೆ ಹಾಗೂ ವಿಚಿತ್ರ ಮನೋಭಾವದಿಂದ ವ್ಯಯವಹರಿಸುತ್ತಿರುವುದು ಕಂಡು ಬರುತ್ತಿದ್ದು, ಈ ಸಮಾಜದಲ್ಲಿ ಗೌಣ್ಯವಾಗಿ ನೋಡಲುಪಡುವ ಸಮೂದಯವೇ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮೂದಾಯವಾಗಿದೆ. ಈ ಸಮೂದಾಯದ ಸದಸ್ಯರು ಮೂಲತ ತಮ್ಮ ಸ್ವ ಕುಟುಂಬದ ಸದಸ್ಯರಿಂದಲೇ ಕೀಳರಿಮೆಯಿಂದ ನೋಡಲ್ಪಡುತ್ತಿದ್ದಾರೆ. ಕುಟುಂಬದ ಇತರೆ ಸದಸ್ಯರು ತಮ್ಮ ಮಗನ ಅಥವಾ ತಮ್ಮನ ಸ್ತಿçà ಹಾವಭಾವಗಳನ್ನು ಕಂಡು ಸಮಾಜದಲ್ಲಿ ತಮ್ಮ ಕುಟುಂಬಕ್ಕೆ ಆತನು ಕಳಂಕವಾಗುತ್ತಾನೆ ಎಂದರಿತು ಆತನ ಭಾವನೆಗಳನ್ನು ವ್ಯವಸ್ಥಿತವಾಗಿ ಹತ್ತಿಡಲು ಪ್ರಯತ್ನಿಸುತ್ತಾರೆ. ಆತನು ತನ್ನ ಸ್ತಿçà ಹಾವಭಾವಗಳನ್ನು ಮುಂದುವರಿಸಿದಲ್ಲಿ ಕುಟುಂಬ ಸದಸ್ಯರ ಅವಕೃಪೆಗೆ ಪಾತ್ರನಾಗಬೇಕಾಗುತ್ತದೆ. ಅದು ಎಷ್ಟರ ಮಟ್ಟಿಗೆ ಎಂದರೆ ಆತನನ್ನು ಮನೆಯಿಂದ ಹೊರತಳ್ಳುವಿಕೆಯಿಂದ ಹಿಡಿದು ಹೊಡೆಯುವುದು ಬಡೆಯುವುದು ಕೆಲವೊಮ್ಮೆ ಜೀವ ಹಾನಿಗೊಳಗಾಗಬೇಕಾಗುತ್ತದೆ. ಮನೆಯಿಂದ ಹೊರತಳ್ಳಲ್ಪಟ್ಟ ವ್ಯಕ್ತಿ ತನ್ನ ಸಮೂದಯವನ್ನು ಅರಸುತ್ತ ಕುಟುಂಬದಿAದ ಮತ್ತು ಸಮಾಜದಿಂದಲೂ ಅವಕೃಪೆಗೊಳಗಾಗುತ್ತಾನೆ ಮತ್ತು ಬೀದಿಪಾಲಾಗುತ್ತಾನೆ ಈ ವ್ಯಕ್ತಿಯು ತನ್ನ ಭಾವನೆಗಳಿಗನುಗುಣವಾಗಿ ಬದುಕದೇ ಸಮಾಜದ ಕೆಂಗಣ್ಣಿಗೆ ಗುರಿಯಾಗುತ್ತಲೇ ಬರುತ್ತಿದ್ದಾನೆ. ಎಲ್ಲೋ ಕೆಲವಿಷ್ಟು ಹೆಚ್ಚಿನ ವಿದ್ಯಾಭ್ಯಾಸ ಪಡೆದ ಲಿಂಗತ್ವ ಅಲ್ಪಸಂಖ್ಯಾತರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದು, ಇನ್ನುಳಿದ ಬಹುಪಾಲು ಲಿಂಗತ್ವ ಅಲ್ಪಸಂಖ್ಯಾತರು ಕಷ್ಟ ಕಾರ್ಪಣ್ಣಗಳಲ್ಲಿ ತಮ್ಮ ದಿನಗಳನ್ನು ಕಳೆಯುತ್ತಾ ಬರುತ್ತಿದ್ದಾರೆ.

ತಮ್ಮದಲ್ಲದ ತಪ್ಪಿಗೆ ಲಿಂಗತ್ವ ಅಲ್ಪಸಂಖ್ಯಾತರು ಇಂದಿನ ಸುಶಿಕ್ಷಿತ ಸಮಾಜದಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪರದಾಡುತ್ತಿದ್ದಾರೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಸಮಾಜ ತಾತ್ಸಾರ ಮನೋಭಾವನೆಯಿಂದ ಕಾಣುವುದನ್ನು ಬಿಟ್ಟು ಅವರೂ ಸಹ ಗೌರವಯುತವಾಗಿ ಬದುಕಲು ಮತ್ತು ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಬೇಕಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಾಗೂ ಪ್ಯಾನೇಲ್ ವಕೀಲರು ಎಲ್‌ಎಡಿಸಿ ವಕೀಲರು ಮತ್ತು ಪ್ಯಾರಾಲೀಗಲ್ ವಾಲೇಂಟಿಯರ್ಸ್ ಹಾಗೂ ಸಿಬ್ಬಂದಿಗಳು ಲಿಂಗತ್ವ ಅಲ್ಪಸಂಖ್ಯಾತರ ಸಮೂದಾಯದೊಂದಿಗೆ ವ್ಯವಹರಿಸುವಾಗ ಅಂದ ಶ್ರದ್ಧೆಗಳನ್ನು ಮತ್ತು ಸಮಾಜದ ತಾತ್ಸಾರ ಮನೋಭಾವನೆಯನ್ನು ಕೈಬಿಡಬೇಕಾಗಿದೆ. ಲಿಂಗತ್ವ ಅಲ್ಪಸಂಖ್ಯಾತರೂ ಸಹ ಘನತೆಯುತ ಬದುಕು ಪಡೆಯಲು ಅರ್ಹರಾಗಿರುತ್ತಾರೆ ಮತ್ತು ಅವರಿಗೆ ಅವರ ಹಕ್ಕುಗಳನ್ನು ಪಡೆಯಲು ಕಾನೂನಿನ ಅರಿವು ಮತ್ತು ನೆರವು ನೀಡುವುದು ಎಲ್ಲರ ಕರ್ತವ್ಯವಾಗಿರುತ್ತದೆ. ಪ್ಯಾನೇಲ್ ವಕೀಲರು, ಎಲ್‌ಎಡಿಸಿ ವಕೀಲರು ಮತ್ತು ಪ್ಯಾರಾಲೀಗಲ್ ವಾಲೇಂಟಿಯರ್ಸ್ ಹಾಗೂ ಸಿಬ್ಬಂದಿಗಳು ಲಿಂಗತ್ವ ಅಲ್ಪಸಂಖ್ಯಾತರ ಸಮೂದಾಯದ ಪ್ರಕರಣಗಳನ್ನು ನಡೆಸುವಾಗ ಮತ್ತು ಅವರೊಂದಿಗೆ ವ್ಯವಹರಿಸುವಾಗ ಲಿಂಗತ್ವ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳನ್ನು  ಗಮನದಲ್ಲಿಟ್ಟುಕೊಳ್ಳಬೇಕಾಗಿದೆ ಎಂದು ಹೇಳಿದರು. ಅಲ್ಲದೇ ಲಿಂಗತ್ವ ಅಲ್ಪಸಂಖ್ಯಾತರು ತಮ್ಮ ಕಾನೂನು ಬದ್ಧ ಹಕ್ಕುಗಳ ರಕ್ಷಣೆಗಾಗಿ ಪ್ರಾಧಿಕಾರದ ನೆರವು ಪಡೆಯಲು ವಿನಂತಿಸಿದರು.

ಸಂಪನ್ಮೂಲ ವ್ಯಕ್ತಿ ಹಾಗೂ ಲಿಂಗತ್ವ ಅಲ್ಪ ಸಂಖ್ಯಾತರ ಸಮೂದಾಯದ ಸದಸ್ಯರಾದ ಶ್ರೀಮತಿ ಮಾಯಾ ಎಸ್.ಆರ್.ನಾಯಕ್ ಅವರು ಮಾತನಾಡಿದರು. ಲಿಂಗತ್ವದ ಕುರಿತು ವಿವರವಾಗಿ ತಿಳಿಸಿಕೊಟ್ಟರು ಅಲ್ಲದೇ ಆ ಬಗ್ಗೆ ಸಭೆಯಲ್ಲಿ ಭಾಗವಹಿಸಿದವರೊಂದಿಗೆ ಸಂವಾದ ನಡೆಸಿದರು. ಸದರಿಯವರು ಮುಂದುವರೆದು ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಂಕಷ್ಟಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಸಂಪನ್ಮೂಲ ವ್ಯಕ್ತಿ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಸಮೂದಾಯದ ಸದಸ್ಯರಾದ ಶ್ರೀಮತಿ ಮಾಳವಿಕ ಅವರು ಮಾತನಾಡಿ, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ ಸಂಬAಧಿಸಿದAತೆ ಇರುವ ಕಾಯ್ದೆಗಳ ಬಗ್ಗೆ ವಿವರಿಸಿದರು. ಅಲ್ಲದೇ ಸಮೂದಾಯದವರು ದೌರ್ಜನ್ಯಕ್ಕೊಳಗಾಗಿ ದೂರು ನೀಡಲು ಹೋದಾಗ ಸಂಬAಧಪಟ್ಟ ಅಧಿಕಾರಿಗಳು ಸಮುದಾಯದ ಬಗ್ಗೆ ತೋರುವ ನಿರ್ಲಕ್ಷತೆ ಮತ್ತು ಅಸಂಬದ್ಧವಾಗಿ ಕೇಳಲಾಗುವ ಪ್ರಶ್ನೆಗಳ ಕುರಿತು ಸಹ ವಿವರಿಸಿದರು, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಾಗೂ ಆ ಸಂಬAಧಿತ ಸಮೂದಾಯಗಳ ಕುರಿತು ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯವು 2014ರಲ್ಲಿ ರಾಷ್ಟಿçÃಯ ಕಾನೂನು ಸೇವೆಗಳ ಪ್ರಾಧಿಕಾರ ವಿರುದ್ಧ ಯುನಿಯನ್ ಆಫ್ ಇಂಡಿಯಾ ಪ್ರಕರಣವು ಬಹು ಮುಖ್ಯವಾದ ಪ್ರಕರಣವಾಗಿದ್ದು, ಮಹತ್ತರವಾದ ಬದಲಾವಣಿಗಳಿಗೆ ಕಾರಣವಾಗಿದೆ ಎಂದರು.

ಅಲ್ಲದೇ ಇಲ್ಲಿಯವರೆಗೆ ಸಮೂದಾಯದ ಸದಸ್ಯರು ಪಡೆದುಕೊಂಡಿರುವ ಹಕ್ಕುಗಳು ಏನಾದರೂ ಇದ್ದರೆ ಅದು ಗೌರವಾನ್ವಿತ  ನ್ಯಾಯಾಲಯಗಳಿಂದ ಪಡೆದುಕೊಂಡ ಹಕ್ಕುಗಳು ಎಂದು ಅಭಿಪ್ರಾಯಪಟ್ಟರು. ಗೌರವಾನ್ವಿತ ನ್ಯಾಯಾಲಯಗಳು ವಿವಿಧ ತೀರ್ಪುಗಳಲ್ಲಿ ಲಿಂಗತ್ವ ಮತ್ತು ಲೈಗಿಂಕ ಅಲ್ಪ ಸಂಖ್ಯಾತರ ಹಕ್ಕುಗಳ ಕುರಿತು ವಿವರಿಸಿರುವುದನ್ನು ತಿಳಿಸಿದರು.

ಲಿಂಗತ್ವ ಅಲ್ಪಸಂಖ್ಯಾತರ ಸಮೂದಾಯದ ಸದಸ್ಯರು ಹಾಗೂ ಯಾದಗಿರಿ ಆಶಾ ಕಿರಣ ಸಾಮಾಜಿಕ ಸೇವಾ ಸಂಸ್ಥೆ ಉಪಾಧ್ಯಕ್ಷರು ಶ್ರೀಮತಿ ಅಂಕಿತಾ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿ, ಸ್ವತಃ ಲಿಂಗತ್ವ ಅಲ್ಪಸಂಖ್ಯಾತರ ತಮ್ಮ ಜೀವನದ ಘಟನಾವಳಿಗಳನ್ನು ಸಭಿಕರಿಗೆ ವಿವರಿಸಿದರು. ಅಲ್ಲದೇ ಎಷ್ಟುಲ್ಲಾ ನೋವುಗಳನ್ನು ಅನುಭವಿಸಿದರೂ ಸಹ ತಾಯಿ ಅಂದುಕೊAಡAತೆ ಬದುಕುತ್ತಿರುವ ಬಗ್ಗೆ ಹೆಮ್ಮೆಯಿಂದ

ಹೇಳಿದರು. ಸಮೂದಾಯದ ಸದಸ್ಯರು ತಮ್ಮ ಹೊಟ್ಟಪಾಡಿಗಾಗಿ ಯಾವುದೇ ಗೌರವಯುತ ದುಡಿಮೆಗೆ ಸಿದ್ದರಿದ್ದರೂ ಸಹ ಕೆಲಸಗಳು ಸಿಗುತ್ತಿಲ್ಲ ಸಮೂದಾಯದ ಸದಸ್ಯರು ಹಲವಾರು ಸಂಕಷ್ಟಗಳಿಗೆ ಒಳಗಾಗುತ್ತಿದ್ದಾರೆ ಎಂದು ತಿಳಿಸಿದರು.

ಅಲ್ಪ ಸಂಖ್ಯಾತರ ಸಮೂದಾಯದ ಸದಸ್ಯರು ಹಾಗೂ ಯಾದಗಿರಿ ಮೈತ್ರಿ ಸಂಸ್ಥೆ ಅಧ್ಯಕ್ಷರು ಶ್ರೀಮತಿ ಚಿನ್ನು ಪಿ.ಎಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲಿಂಗತ್ವ ಮತ್ತು ಲೈಂಗಿಕ ಅಲ್ಪ ಸಂಖ್ಯಾತರ ಸಮೂದಾಯದ ಸದಸ್ಯರ ಬಗ್ಗೆ ಕನಿಕರ ಬೇಡ ಬೆಂಬಲಬೇಕು ಎಂದು ವಿನಂತಿಸಿದರು. ಅಲ್ಲದೇ ಸಮೂದಾಯದ ಸದಸ್ಯರು ಗೌರವಯುತ ಬದುಕು ಸಾಗಿಸಲು ಸಮಾಜದ ಎಲ್ಲರೂ ಸಹಕಾರ ನೀಡುವಂತೆ ಕೋರಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನೇಲ್ ವಕೀಲರು, ಎಲ್‌ಎಡಿಸಿ ವಕೀಲರು, ಪ್ಯಾರಾಲೀಗಲ್ ವಾಲೇಂಟಿಯರ್ಸ್, ಇನ್ನಿತರರು ಉಪಸ್ಥಿತರಿದ್ದರು. ಪ್ಯಾನೇಲ್ ವಕೀಲರಾದ ಶ್ರೀ ಕೆ.ಬಿ ಅಂಗಡಿ ಕಾರ್ಯಕ್ರಮದ ನಿರೂಪಣೆ ಮಾಡಿದರು ಹಾಗೂ ಪ್ಯಾನೇಲ್ ವಕೀಲರಾದ ಶ್ರೀ ಭೀಮಾಶಂಕರ ಆಶನಾಳ್ ಗಣ್ಯರನ್ನು ಸ್ವಾಗತಿಸಿದರು. ಮತ್ತು ವಕೀಲರಾದ ಬಿ.ಜಿ. ಪಾಟೀಲ್ ವಂದಿಸಿದರು.