
ಅಗ್ನಿ ಸಂಭವಿಸಿದಾಗ ಮುನ್ನೆಚ್ಚರಿಕೆ ಅಗತ್ಯ: ವೀರೇಶ್
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಯಾದಗಿರಿ: ಬೆಂಕಿ ಅವಘಡ ಸಂಭವಿಸಿದಾಗ ಗಾಬರಿಯಾಗದೇ ಮುನ್ನೆಚ್ಚರಿಕೆಯಿಂದ ಅದನ್ನು ನಂದಿಸಬೇಕೆಂದು ಆಗ್ನಿ ಶಾಮಕ ದಳದ ಮುಖ್ಯಸ್ಥ ವೀರೇಶ ಹೇಳಿದರು.
ನಗರದ ಶಶಿ ಸೂಪರ ಬಹಾರ್‌ನ ಅಮರ್ ಲೇಔಟ್ ನಲ್ಲಿ ಭಾನುವಾರ ಶಶಿ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಗ್ನಿಶಾಮಕ ದಳದಿಂದ ಬೆಂಕಿ ಆರಿಸುವ ಕುರಿತು ಅಗ್ನಿ ಶಾಮಕ ದಳದಿಂದ ನಡೆದ ಅಣಕು ಪ್ರದರ್ಶನದಲ್ಲಿ ಸೇರಿದ್ದ ಜನರಿಗೆ ಮತ್ತು ಮಕ್ಕಳಿಗೆ ಈ ಕುರಿತು ಅವರು ಮಾಹಿತಿ ನೀಡಿದರು.
ಮನೆ, ವಾಣಿಜ್ಯ ಮಳಿಗೆ ಮತ್ತು ಇತರೇ ಕಟ್ಟಡಕ್ಕೆ ಬೆಂಕಿ ತಗುಲಿದಾಗ ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಬೇಕು, ಅವರು ಬರುವವರೆಗೂ ಪ್ರಥಮ ಹಂತದಲ್ಲಿ ನಂದಿಸುವಾಗ ಎಚ್ಚರಿಕೆ ವಹಿಸಬೇಕು ಎಂದ ಅವರು
ಬೆಂಕಿ ಆರಿಸುವಾಗ ಕೈಕೊಳ್ಳಬೇಕಾದ ಮುನ್ನೇಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಬೆಂಕಿ ಯಾವ ರೀತಿಯಲ್ಲಿ ನಂದಿಸಬೇಕೆಂಬ ಕುರಿತು ಸಿಬ್ಬಂದಿಗಳಿಂದ ಪ್ರಾತ್ಯಕ್ಷಿಕೆ ನೀಡಲಾಯಿತು. ಈ ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿ ಕೆಲವು ಅಣಕು ಪ್ರದರ್ಶನ ಮಾಡಿ ತೊರಿಸಿದರು. ಶಶಿ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಹನುಮಂತಪ್ಪ ಶಿರಗೋಳ, ಉದ್ಯಮಿ ಮಲ್ಲಿಕಾರ್ಜುನ ಶಿರಗೋಳ, ಶಶಿಧರ ಶಿರಗೋಳ, ಶರಣಪ್ಪ ಖ್ಯಾತನಾಳ, ಜಮೀರ, ಸಂತೋಷ, ವಿರುಪಾಕ್ಷಿ ಸ್ವಾಮಿ ಇತರರಿದ್ದರು. ನೂರಾರು ಜನರು ಈ ಬಗ್ಗೆ ಪ್ರತ್ಯಕ್ಷವಾಗಿ ನೋಡುವ ಮೂಲಕ ಮಾಹಿತಿ ಪಡೆದರು.
