ಬಿಜೆಪಿ ಜಿಲ್ಲಾ ಕಾರ್ಯದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನಾಚರಣೆ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ, ಮಹಾಮಾನವತಾವಾದಿ ಹಾಗೂ ಸಮಾನತೆಯ ಹರಿಕಾರರಾದ ಭಾರತ ರತ್ನ ಬಾಬಾಸಾಹೇಬ್‌ ಡಾ ಬಿ.ಆರ್‌.ಅಂಬೇಡ್ಕರ್‌ ಅವರ ಮಹಾಪರಿನಿರ್ವಾಣ ದಿನಾಚರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ಮಾತನಾಡಿದ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಅವರು ಅಸ್ಪೃಶ್ಯತೆ ನಿವಾರಿಸಿ ಸಮ ಸಮಾಜ ನಿರ್ಮಾಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟವರು, ‘ಜಗತ್ತಿನ ಆತಿದೊಡ್ಡ ಪ್ರಜಾಪ್ರಭುತ್ವವುಳ್ಳ ಭಾರತದ “ಸಂವಿಧಾನವನ್ನು ರಚಿಸಿದವರು, ಮಹಾನ್‌ ಮಾನವತಾವಾದಿ ಅಂಬೇಡ್ಕರ್‌ ಅವರ ಸಮಾನತೆ, ಶಾಂತಿ, ಸೌಹಾರ್ದತೆ,ಸಾಮರಸ್ಯತೆಯ ತಳಹದಿಯ ಮೇಲೆ ನಿಂತಿರುವ ಮಹಾನ ನಾಯಕರಾಗಿದ್ದರು ಮತ್ತು ಸಂವಿಧಾನವನ್ನು ರಕ್ಷಣೆ ಮಾಡಿಕೊಳ್ಳುವುದೇ ನಾವು ಬಾಬಾ ಸಾಹೇಬರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಕ್ತಾರ ಹಾಗೂ ನಗರಸಭೆ ಸದಸ್ಯ ಹಣಮಂತ ಇಟಗಿ ಮಾತನಾಡಿದ ಅವರು ಜಗತ್ತಿನ ಮಹಾನ್‌ ಸಂವಿಧಾನವನ್ನು ರಚಿಸಿ ಶೋಷಿತರು, ಜಮನಿತರ ದನಿಯಾದವರು ಹಾಗೂ ಅನನ್ಯ ಮಾನವತಾವಾದಿ, ನಮ್ಮೆಲ್ಲರ ಬೆಳಕು ಡಾ.ಬಿ.ಆರ್‌ ಅಂಬೇಡ್ಕರ್‌ ಅವರ ‘ಮಹಾ ಪರಿನಿರ್ವಾಣ ದಿನದಂದು ಅವರಿಗೆ ಗೌರವಪೂರ್ವಕ ಪ್ರಣಾಮಗಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಸ್ವಾಮೀದೇವ ದಾಸನಕೇರಿ, ವಿಜಯಲಕ್ಷ್ಮಿ ನಾನೆಕ,ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಹೋನಿಗೆರ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶ್ರೀಧರ ರಾಯಚೂರು, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ್ ಕಾಡಮನೋರ, ಮೊನೇಶ ಬೆಳಿಗೇರ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ರಮೇಶ ದೊಡ್ಡಮನಿ ಮತ್ತು ಮಲ್ಲಿಕಾರ್ಜುನ ಕಟ್ಟಿಮನಿ, ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿ ನಾಗರಡ್ಡಿ ಇಬ್ರಾಹಿಂಪುರ, ಮಲ್ಲು ಕೋಲಿವಾಡ, ಜಿಲ್ಲಾ ಮಾಧ್ಯಮ ಸಹ ಸಂಚಾಲಕರಾದ ಚಂದ್ರಶೇಖರ ಕಡೆಸುರ, ನಾಗಪ್ಪ ಗಚ್ಚಿನಮನಿ, ಶ್ರೀಕಾಂತ‌ ಸುಂಗುಲಕರ, ತಿರುಪತಿ, ಚಂದ್ರಕಲಾ ಮಲೆಮಠ, ಶಕುಂತಲಾ ಗುಜ್ಜಲೂರ, ನಗರ ರೈತ ಮೋರ್ಚಾ ಅಧ್ಯಕ್ಷ ಶಿವಣ್ಣ ವಿಶ್ವಕರ್ಮ, ಪ್ರಜ್ವಲ್ ಸೇರಿದಂತೆ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.