ಮುದ್ನಾಳ ಗ್ರಾಮಕ್ಕೆ ಕೇಂದ್ರೀಯ ವಿದ್ಯಾಲಯ. ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರಗೆ ಅಭಿನಂದನೆಗಳು: ಮಹೇಶರಡ್ಡಿ ಮುದ್ನಾಳ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ನಿನ್ನೆ ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಯಾದಗಿರಿಯ ಮುದ್ನಾಳ ಗ್ರಾಮದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪಿಸುವುದಕ್ಕೆ ಅನುಮೋದನೆ ನೀಡಿದ್ದಕ್ಕಾಗಿ ನರೇಂದ್ರ ಮೋದಿ ಅವರಗೆ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಅವರು ಅಭಿನಯಿಸಿದರು ಹಾಗೂ ಯಾದಗಿರಿ ಮಾಜಿ ಶಾಸಕ ವೆಂಕಟರಡ್ಡಿ ಮುದ್ನಾಳ ರವರು ಅಧಿಕಾರದಲ್ಲಿದ್ದಾಗ ಯಾದಗಿರಿ ಮತ್ತು ರಾಯಚೂರ ಲೋಕಸಭಾ ಮಾಜಿ ಸದಸ್ಯ ರಾಜಾ ಅಮರೇಶ್ವರ ನಾಯಕ ಅವರಿಗೆ ಆರೋಗ್ಯ ಮತ್ತು ಶಿಕ್ಷಣಕ್ಕೆ ಕೇಂದ್ರದ ಯೋಜನೆಗಳು ಜಾರಿ ಆಗಬೇಕು. ಮತ್ತು ಈ ಭಾಗದ ಯುವಕರು ಶಿಕ್ಷಣ ಪಡೆದು ರಾಜ್ಯದಲ್ಲಿ ಮಾತ್ರವಲ್ಲ ದೇಶದೆಲ್ಲೆಡೆ ಅವರು ಸೇವೆ ಸಲ್ಲಿಸಿದಾಗ ಮಾತ್ರ ನನ್ನ ಕನಸು ಸಾರ್ಥಕವಾಗಲಿದೆ ಎಂದು ಮನವಿ ಮಾಡಿಕೊಂಡಿದರು ಆ ಮನವಿ ಇವಾಗ ಪುರಸ್ಕಾರ ವಾಗಿದೆ ಎಂದರು.

ಈ ಬೆಳವಣಿಗೆ ಕಾರಣರಾದ ಹೆಮ್ಮೆಯ ಪ್ರಧಾನಿ ಮಂತ್ರಿ ನರೇಂದ್ರ ಮೋದಿಅವರು ಮತ್ತು ಕೇಂದ್ರ ಸಚಿವ ಅಶ್ವಿನಿ ವೈಷ್ಣವ ಅವರಿಗೂ, ಮಾಜಿ ಸಂಸದ ಅಮರೇಶ್ವರ ನಾಯಕ ಅವರಿಗೂ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಸೇರಿದಂತೆ ಈ ಯೋಜನೆಯ ಕಾರಣೀಭೂತರಾದ ಪ್ರತಿಯೊಬ್ಬ ಕೇಂದ್ರದ ನಾಯಕರಿಗೂ ಅಭಿನಂದನೆಗಳ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರು.