ವಿಶ್ವ ಮಣ್ಣು ದಿನಾಚರಣೆ, ಮಣ್ಣು ಚೀಟಿ ವಿತರಣೆ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಮಣ್ಣಿನ  ಆರೈಕೆ, ಮಾಪನ, ಮೇಲ್ವಚಾರಣೆ ಮತ್ತು ಮಣ್ಣಿನ ನಿರ್ವಹಣೆ ಎಂಬ ದ್ಯೇಯದೊಂದಿಗೆ ಆಚರಿಸಲಾಗುತ್ತಿದೆ. ರೈತರು ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು ಎಂದು ಯಾದಗಿರಿ ಜಂಟಿ ಕೃಷಿ ನಿರ್ದೇಶಕರ ಕಛೇರಿಯ ಸಹಾಯಕ ಕೃಷಿ ನಿರ್ದೇಶಕರು (ವಿಷಯ ತಜ್ಞ) ರಾಜಕುಮಾರ ಅವರು ಸಲಹೆ ನೀಡಿದರು

ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರ ಗೋಗಿ ಮತ್ತು ಜವಾಹರ ನವೋದಯ ವಿದ್ಯಾಲಯ ಹೋತಪೇಟ ತಾಲೂಕ ಶಹಾಪೂರರವರ ಸಂಯುಕ್ತಾಶ್ರಯದಲ್ಲಿ ಹೋತಪೇಟ ತಾಂಡದಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಮತ್ತು ರೈತರಿಗೆ ಮಣ್ಣು ಆರೋಗ್ಯ ಚೀಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಸಂಸ್ಥೆಯು ಡಿಸೆಂಬರ್ 5 2013 ರಂದು ವಿಶ್ವ ಮಣ್ಣಿನ ದಿನಾಚರಣೆಗೆ ಸಮ್ಮತಿ ಸೂಚಿಸಿತು. ಡಿಸೆಂಬರ್ 5 2014 ರಿಂದ ವಿಶ್ವ ಮಣ್ಣು ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ವರ್ಷವು ಮಣ್ಣಿನ  ಆರೈಕೆ, ಮಾಪನ, ಮೇಲ್ವಚಾರಣೆ ಮತ್ತು ಮಣ್ಣಿನ ನಿರ್ವಹಣೆ ಎಂಬ ದ್ಯೇಯದೊಂದಿಗೆ ಆಚರಿಸಲಾಗುತ್ತಿದೆ. ರೈತರು ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳು ಸಲಹೆಯನ್ನು ನೀಡಿದರು ಮತ್ತು  ಜವಾಹರ ನವೋದಯ ವಿದ್ಯಾಲಯದ ವಿದ್ಯಾರ್ಥಿ ಗಳಿಂದ ಮಣ್ಣು ಪರೀಕ್ಷೆ ಮಾಡಿದ ಫಲಿತಾಂಶ ಮಣ್ಣು ಆರೋಗ್ಯ ಚೀಟಿಗಳನ್ನು ರೈತರಿಗೆ ವಿತರಿಸಲಾಯಿತು.
ಕೃಷಿ ವಿಸ್ತರಣಾ ಘಟಕದ ಮುಂದಾಳು ಡಾ.ರವಿ ಪೂಜಾರಿ ಮಾತನಾಡಿ, ಮಣ್ಣು ಮಾದರಿಗಳ ಸಂಗ್ರಹಣೆ ಮತ್ತು ಮಣ್ಣು ಪರೀಕ್ಷೆ ಮಹತ್ವದ ಕುರಿತು ತಿಳಿಸಿದರು.
ಕೃಷಿ ಅಧಿಕಾರಿ ಪರಶುರಾಮ ನಡುಮನಿ ಅವರು ಮಾತನಾಡಿ, ರೈತರು ಬೆಳೆ ಪದ್ಧತಿಗಳನ್ನು ಬದಲಾಯಿಸಿ ಶಿಫಾರಸ್ಸು ಮಾಡಿದ ಪ್ರಮಾಣ ರಸಗೊಬ್ಬರಗಳನ್ನು ಬಳಸಲು ತಿಳಿಸಿದರು. ಮತ್ತು ಕೃಷಿ ಇಲಾಖೆ ಯೋಜನೆಯ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಉಮೇಶ, ಸಂತೋಷ ಅವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಗದಿಶ, ಸಹ ಶಿಕ್ಷಕರಾದ ಅರವಿಂದಕುಮಾರ, ಶ್ರೀಮತಿ ಮೋನಾಲಿ ನಾದೇವತೆ ಮತ್ತು ಶರಣು ಹೊಸಕರಾ ಹಾಗೂ ಕೃಷಿ ಸಖಿ ಮತ್ತು ಪಶು ಸಖಿಯರು ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಆತ್ಮ ತಾಂತ್ರಿಕ ವ್ಯವಸ್ಥಾಪಕ ಜಗದಿಶ ನಿರೂಪಿಸಿ ವಂದಿಸಿದರು.