
ಸೆಕ್ಯುಲರ್ ವಾಯ್ಸ್ ನ್ಯೂಸ್ ಗುರುಮಠಕಲ್
ನ್ಯಾಯಾಲಯ ಕಟ್ಟಡ ಆರಂಭ ಮಾಡುವಂತೆ ಹಾಗೂ ತಾಲೂಕಾ ಕೇಂದ್ರಕ್ಕೆ ಅಗತ್ಯವಿರುವ ಎಲ್ಲಾ ಕಚೇರಿಗಳನ್ನು ರಾಜ್ಯ ಸರಕಾರ ಆರಂಭ ಮಾಡುವಂತೆ ಒತ್ತಾಯಿಸಿ ಸೋಮವಾರ ಪಟ್ಟಣದಲ್ಲಿ ಖಾಸಾಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿ ಅವರ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ಮೂಲಕ ಹೋರಾಟ ನಡೆಸಲಾಯಿತು.
ಗುರುಮಠಕಲ್ ತಾಲೂಕಾ ಅಭಿವೃದ್ಧಿ ಹೋರಾಟ ಸಮಿತಿ , ದಲಿತಪರ ಸಂಘಟನೆ,ಜಿಲ್ಲಾ ಹಾಗೂ ತಾಲೂಕಾ ವಕೀಲರ ಸಂಘ,ಸರಕಾರಿ ನಿವೃತ್ತ ನೌಕರರ ಸಂಘದ,ಕನ್ನಡಪರ ಸಂಘಟನೆಗಳ ಬೆಂಬಲದೊಂದಿಗೆ ಹೋರಾಟ ನಡೆಸಲಾಯಿತು. ಪ್ರತಿಭಟನೆಯಲ್ಲಿ ಕಿರಣಾ ವ್ಯಾಪಾರಸ್ಥರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗಿಯಾಗಿ ಹೋರಾಟಕ್ಕೆ ಭಾರಿ ಬೆಂಬಲ ಸೂಚಿಸಿದರು.
ಗುರುಮಠಕಲ್ ಪಟ್ಟಣದ ಗಾಂಧಿ ಮೈದಾನದಿಂದ ಶ್ರೀ ಬಸವೇಶ್ವರ ವೃತ್ತದವರಗೆ ಗುರುಮಠಕಲ್ ನ ಖಾಸಾಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿ ಪ್ರತಿಭಟನೆ ನಿರತರು ಸರಕಾರದ ವಿರುದ್ಧ ಘೋಷಣೆ ಕೂಗಿದರು.ನಂತರ ಬಸವೇಶ್ವರ ವೃತ್ತದಲ್ಲಿ ಸೇರಿ ಪ್ರತಿಭಟನೆ ನಿರತರು ಗುರುಮಠಕಲ್ ಪಟ್ಟಣದಲ್ಲಿ ನ್ಯಾಯಾಲಯ ಕಟ್ಟಡ ಸ್ಥಾಪಿಸಬೇಕು ಹಾಗೂ ತಾಲೂಕಾ ಕಚೇರಿಗೆ ಅವಶ್ಯಕತೆವಿರುವ ಎಲ್ಲಾ ಕಚೇರಿ ಸ್ಥಾಪನೆ ಮಾಡಿ ಸರ‍್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಸರಕಾರಕ್ಕೆ ಒತ್ತಾಯ ಮಾಡಿದರು.
ಪ್ರತಿಭಟನೆಯ ನೇತೃತ್ವ ವಹಿಸಿ ಖಾಸಾಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿ ಅವರು ಮಾತನಾಡಿ, ಗುರುಮಠಕಲ್ ತಾಲೂಕಾ ರಚನೆಯಾಗಿ ಆರು ರ‍್ಷ ಕಳೆದರು ತಾಲೂಕಾ ಕೇಂದ್ರದಲ್ಲಿ ಎಲ್ಲಾ ಅಗತ್ಯ ಕಚೇರಿ ಆರಂಭ ಮಾಡಿಲ್ಲ.ಇದರಿಂದ ಸರ‍್ವಜನಿಕರು ಯಾದಗಿರಿ ಜಿಲ್ಲಾಕೇಂದ್ರಕ್ಕೆ ಅಲೆದಾಡುವ ದುಸ್ಥಿತಿ ತಲೆದೊರಿದೆ.ಗುರುಮಠಕಲ್ ತಾಲೂಕಾ ಸಮಗ್ರ ಅಭಿವೃದ್ಧಿಗಾಗಿ ನಾವು ಹೋರಾಟ ಮಾಡುತ್ತಿದ್ದೆವೆ.ನಾವು ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದೆವೆ.ನ್ಯಾಯಾಲಯ ಕಟ್ಟಡದ ಅವಶ್ಯಕತೆ ಇದೆ.ಎಲ್ಲರಿಗೂ ನ್ಯಾಯ ಕಲ್ಪಿಸುವ ನ್ಯಾಯಾಲಯ ಕಟ್ಟಡ ಇಲ್ಲಿ ಇಲ್ಲ ನ್ಯಾಯಾಲಯ ಕಟ್ಟಡಕ್ಕಾಗಿ ನಾವು ಹೋರಾಟ ಮಾಡುವಂತಾಗಿದೆ. ಸರಕಾರ ಬಹುಬೇಗನೇ ನ್ಯಾಯಾಲಯ ಕಟ್ಟಡ ಸೇರಿ ಅಗತ್ಯವಿರುವ ಕಚೇರಿಗಳನ್ನು ಸ್ಥಾಪಿಸಬೇಕು.ಸರಕಾರಕ್ಕೆ ನಾವು ಗಡುವು ಕೋಡುತ್ತೆವೆ ಗಡುವಿನೊಳಗೆ ಕಚೇರಿ ಸ್ಥಾಪನೆ ಮಾಡದಿದ್ದರೆ ಹೋರಾಟ ತೀವ್ರಗೊಳಿಸಲಾಗುತ್ತೆಂದು ಶ್ರೀಗಳು ಒತ್ತಾಯಿಸಿದರು.
ನಂತರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಜಿಲ್ಲಾ ಧ್ಯಕ್ಷ ಸಿ.ಎಸ್.ಮಾಲಿಪಾಟೀಲ ಅವರು ಮಾತನಾಡಿ,ಗುರುಮಠಕಲ್ ತಾಲೂಕು ಅಭಿವೃದ್ಧಿಯಲ್ಲಿ ಹಿಂದೆ ಇದೆ.ತಾಲೂಕಾ ರಚನೆಯಾಗಿ ಆರು ರ‍್ಷವಾದರು ಸರಕಾರ ಅಭಿವೃದ್ಧಿ ಮಾಡಿಲ್ಲ.ಸಮಗ್ರ ತಾಲೂಕಾ ಅಭಿವೃದ್ಧಿಗಾಗಿ ಹಣವಿದ್ರು ಅಭಿವೃದ್ಧಿ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಮ್ಮನಾಳುವ ಮಂತ್ರಿಗಳು ಗಡಿಭಾಗ ಗುರುಮಠಕಲ್ ಅಭಿವೃದ್ಧಿ ಮಾಡಿಲ್ಲ ಹೀಗಾಗಿ ನಾವು ಹೋರಾಟಕ್ಕೆ ಮುಂದಾಗಿದ್ದೆವೆ.ಆದಷ್ಟು ಬೇಗ ಸರಕಾರ ನ್ಯಾಯಾಲಯ ಕಟ್ಟಡ ಹಾಗೂ ಸರಕಾರಿ ಕಚೇರಿಗಳನ್ನು ಆರಂಭ ಮಾಡಬೇಕು. ಒಂದು ವೇಳೆ ನರ‍್ಲಕ್ಷ್ಯ ಮಾಡಿದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಸರಕಾರಕ್ಕೆ ಮಾಲಿಪಾಟೀಲ ಎಚ್ಚರಿಕೆ ನೀಡಿದರು.
ಅಭಿವೃದ್ಧಿಗಾಗಿ ಪಕ್ಷಬೇಧ ಮರೆತ ರಾಜಕೀಯ ಮುಖಂಡರು
ನ್ಯಾಯಾಲಯ ಕಟ್ಟಡ ಆರಂಭ ಮಾಡುವಂತೆ ಹಾಗೂ ಎಲ್ಲಾ ಕಚೇರಿಗಳ ಸ್ಥಾಪನೆಗೆ ಒತ್ತಾಯಿಸಿ ಕರೆ ನೀಡಿರುವ ಹೋರಾಟದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕರ‍್ಯರ‍್ತರು ಪ್ರತಿಭಟನೆಯಲ್ಲಿ ಭಾಗವಹಿಸಿದರು.ಗುರುಮಠಕಲ್ ತಾಲೂಕಾ ಸಮಗ್ರ ಅಭಿವೃದ್ಧಿಗಾಗಿ ಪಕ್ಷದ ಮುಖಂಡರು ಒಗ್ಗಟ್ಟಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಸರಕಾರ ಕಚೇರಿ ಆರಂಭ ಮಾಡುವಂತೆ ಒತ್ತಾಯ ಮಾಡಿದರು.
