
ಸಂವಿಧಾನವು ಭಾರತವನ್ನು ಸರ್ವತಂತ್ರ ಸ್ವತಂತ್ರ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿಸಿ,ಸಂಪೂರ್ಣ ಸಾರ್ವಭೌಮ ರಾಷ್ಟ್ರವಾಗಿಸಿದೆ, ಗಣ ಎಂದರೆ ಸಮೂಹ ಅಥವಾ ಪ್ರಜೆ ಎಂದು ಅರ್ಥವಾಗುತ್ತದೆ , ಗಣರಾಜ್ಯವೆಂದರೆ ಪ್ರಜಾರಾಜ್ಯವೆಂದು ಅರ್ಥವಾಗುತ್ತದೆ, ಪ್ರಜಾರಾಜ್ಯ ಅಥವಾ ಗಣರಾಜ್ಯದಲ್ಲಿ ಪ್ರಜೆಗಳೆ ಸಾರ್ವಭೌಮರು, ರಾಷ್ಟ್ರದ ಆಡಳಿತ ವ್ಯವಸ್ಥೆಯಲ್ಲಿ ರಾಷ್ಟ್ರದ ಪದವಿ ಮತ್ತು ಸ್ಥಾನಮಾನಗಳು ರಾಷ್ಟ್ರದ ಪ್ರತಿ ಸಾಮಾನ್ಯ ಪ್ರಜೆಗೂ ಸಿಗಬೇಕು ಎನ್ನುವದು ಗಣರಾಜ್ಯದ ತತ್ವ ಹಾಗೂ ಸಂವಿಧಾನದ ಆಶೆಯವಾಗಿದೆ.
ಗಣರಾಜ್ಯ ವ್ಯವಸ್ಥೆಯಲ್ಲಿ ರಾಜ್ಯ ಆಳುವ ವ್ಯಕ್ತಿ ಮತ್ತು ಗುಂಪು ಪ್ರಜಗಳಿಂದ ಆಯ್ಕೆಯಾಗುವರು “ಪ್ರಜಗಳಿಗೊಸ್ಕರ ಪ್ರಜಗಳಿಂದ ಆಯ್ಕೆಯಾಗುವ ಸರ್ಕಾರವೆ? ಪ್ರಜಾಪ್ರಭುತ್ವ ಸರ್ಕಾರ, ಜಗತ್ತಿನಲ್ಲಿರುವ ಪ್ರಜಾಪ್ರಭುತ್ವ ರಾಷ್ಟ್ರಗಳೆಲ್ಲವೂ ಗಣರಾಜ್ಯವಾಗಿಲ್ಲಾ, ಆದರೆ ಗಣರಾಜ್ಯವಾಗಿರುವ ಎಲ್ಲಾ ರಾಷ್ಟ್ರಗಳು ಪ್ರಜಾಪ್ರಭುತ್ವ ರಾಷ್ಟ್ರಗಳಾಗಿವೆ, ಸರ್ವಜನರ ಸಮಾನತೆಯನ್ನು ಬಯಸುವ ಮತ್ತು ನಾವೆಲ್ಲರೂ ಒಂದೇ ಎನ್ನುವ ಪರಿಕಲ್ಪನೆಯನ್ನು ಬಿತ್ತುವ ಮತ್ತು ಬಹುತ್ವ ಭಾರತದ ಐಕ್ಯತೆಯನ್ನು ಎತ್ತಿ ಹಿಡಿಯುವ ನಿಯಮಾವಳಿಗಳನ್ನೊಳಗೊಂಡ ಗ್ರಂಥವೆ ಭಾರತದ ಸಂವಿಧಾನ, ದೇಶ ಸ್ವಾತಂತ್ರ್ಯವಾಗುವ ಮುನ್ನುವೇ 1946ರಲ್ಲಿ’ ಡಾಕ್ಟರ್ ರಾಜೇಂದ್ರ ಪ್ರಸಾದರು’ ಸಂವಿದಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಸುಮಾರು 284 ಸದಸ್ಯರುನ್ನು ವಿವಿಧ ರಾಜ್ಯಗಳು,ಕೇಂದ್ರಾಡಳಿ ಪ್ರದೇಶಗಳು, ರಾಜ್ಯಸಂಸ್ಥಾನಗಳಿಂದ ಎಲ್ಲಾ ವರ್ಗದ ಜನರಿಂದ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡು ನವೆಂಬರ್ ತಿಂಗಳಲ್ಲಿ ಮೊದಲು ಸಭೆಯನ್ನು ಸೇರುತ್ತದೆ, ಸ್ವಾತಂತ್ರ್ಯದ ನಂತರ ಆಗಷ್ಟ್ 27, 1947ರಲ್ಲಿ ಸಂವಿಧಾನ ಕರಡು ರಚನಾ ಸಮಿತಿಗೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರನ್ನು ಅಧ್ಯಕ್ಷರಾಗಿ ನೇಮಕ ಮಾಡುತ್ತಾರೆ, ಅವರ ಅವಿರತ ಪರಿಶ್ರಮದಿಂದಾಗಿ 1950 ಜನವರಿ26 ರಂದು ಸಂವಿಧಾನ ಜಾರಿಗೆ ತರಲಾಗುತ್ತದೆ, ಈ ದಿನವನ್ನೆ ಗಣರಾಜ್ಯೋತ್ಸವ ದಿನವಾಗಿ ಪ್ರತಿವರ್ಷ ದೇಶಾದ್ಯಂತ ಆಚರಿಸಿಕೊಂಡು ಬರುತ್ತಿದ್ದೆವೆ,ಇದು ರಾಷ್ಟ್ರೀಯ ಹಬ್ಬವಾಗಿದೆ, ಪ್ರತಿ ಭಾರತೀಯನು ಹೆಮ್ಮೆ ಪಡುವ ದಿನಾಗಿದೆ,ಈ ಸಂಭ್ರಮವನ್ನು ಅತ್ಯಂತ ವಿಜ್ರಂಭಣೆಯಿಂದ ಶಾಲಾ ಕಾಲೇಜು ಸರ್ಕಾರಿ ಕಛೇರಿಗಳು ,ಸ್ವಾಯತ್ತ ಸಂಘ ಸಂಸ್ಥೆಗಳಲ್ಲಿ ಆಚರಿಸಲಾಗುತ್ತದೆ, ರಾಜ್ಯಧಾನಿ ನವದೇಹಲಿಯಲ್ಲಿ ರಾಜ್ಯಪಥದಲ್ಲಿ ಸೇನೆಯ ವಿವಿಧ ತಂಡಗಳು ಸೇನಕವಯಿತು ನಡೆಸುತ್ತವೆ,ಬಾಹ್ಯಾಕಾಶದಲ್ಲಿ ಯುದ್ಧ ಯುಮಾನುಗಳ ಆರಾಟವು ನಡೆಯುತ್ತವೆ, ಮತ್ತು ಪ್ರತಿರಾಜ್ಯ ಕೇಂದ್ರಾಡಳಿತ ಪ್ರದೇಶಗಳಿಂದ ಸ್ಥಂಬ್ದಚಿತ್ರ ಮರೆವಣಿ ಮನ ಮಹೋಕವಾಗಿರುತ್ತದೆ, ಈ ಕಾರ್ಯಕ್ರಮಕ್ಕೆ ವಿದೇಶಿ ಗಣ್ಯರನ್ನು ಅತಿಥಿಯಾಗಿ ಅಹ್ವಾನಿಸಲಾಗುತ್ತದೆ, “ಇಂಡೋನೇಷ್ಯ ದ ಅಧ್ಯಕ್ಷ ಸುಕಾರ್ನೋ ” 1950 ರಲ್ಲಿ ಮೊದಲು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸಿದ್ದರೆ ,2025ರ 76ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾದ ಅಧ್ಯಕ್ಷ “ಪ್ರಬೋವೊ ಸುಬಿಯಾಂಟೊ “ರವರು ಆಗಮಿಸಲಿದ್ದಾರೆ,ಇದು ಪರಸ್ಪರ ಸ್ನೇಹ ಸಂಬಂಧವನ್ನು ವೃದ್ದಿಸಿಕೊಳ್ಳಲು ಸಹಕಾರಿಯಾಗುತ್ತದೆ,
ಸಂವಿಧಾನ ಜಾರಿಯಾಗಿರುವದರಿಂದಲೆ ಭಾರತ ಗಣರಾಜ್ಯ ವಾಗಿದೆ, ಈ ದಿನ ಸಂವಿಧಾನ ಜಾರಿಗೆ ಬಂದಿರುವದರಿಂದ ಈ ದಿನವನ್ನು ಸಂವಿಧಾನದ ದಿನಾವಾಗಿಯೆ ನಾವು ಇದುವರೆಗೆ ಆಚರಿಸಿಕೊಂಡು ಬಂದಿದ್ದೆವೆ, 1949 ನವೆಂಬರ್ 26 ರಂದು ಸಂವಿಧಾನ ಅಂಗೀಕರಿಸಿದ ದಿನವನ್ನು ನಾವು (Law day ) “ಕಾನೂನು ದಿನ”ಎಂದು ಆಚರಿಸುತ್ತಿದ್ದೆವು ಆದರೆ 2015 ರಿಂದ ಸಂವಿಧಾನ ದಿನವಾಗಿ ಸರಕಾರ ಆಚರಿಸುತ್ತಿದೆ ,ಇದನ್ನು ಬಹಳಷ್ಟು ಜನ ವಿರೋಧವನ್ನು ವ್ಯಕ್ತಪಡಿಸಿದ್ದಾರೆ ,ಮಗು ಭೂಮಿಗೆ ಬಂದ ದಿನವನ್ನು ಜನ್ಮದಿನವಾಗಿ ಆಚರಿಸುತ್ತೆವೆ ವಿನಹ ಒಂಬತ್ತು ತಿಂಗಳ ತಾಯಿ ಹೊಟ್ಟೆಯಲ್ಲಿ ಜೀವ ಪಡೆದ ದಿನವನ್ನು ಜನ್ಮದಿನವಾಗಿ ಆಚರಿಸುವದಿಲ್ಲಾ, ಹೀಗಾಗಿ ಸಂವಿಧಾನ ಜಾರಿಯಾದ ದಿನವೆ? ಸಂವಿಧಾನ ದಿನವಾಗಬೇಕು ಎನ್ನುವದು ಬಹುಜನರ ವಾದವಿದೆ,
2011ಜನಗಣತಿಯ ಪ್ರಕಾರ ದೇಶದಲ್ಲಿ 125 ಕೋಟಿಗೂ ಹೆಚ್ಚು ಜನಸಂಖ್ಯೆ 19,569 ಮಾತೃಭಾಷೆಗಳು,4,635 ಬಗೆಯ ಸಮುದಾಯಗಳಿವೆ,ಹಲವಾರು ಬಗೆಯ ಧರ್ಮಗಳಿವೆ,ಲಕ್ಷಾಂತರ ರೀತಿಯ ಆಚರಣೆಗಳಿವೆ ಮತ್ತು ದೇವರುಗಳ ಸಂಖ್ಯೆಯಂತು ಲೆಕ್ಕವೆ ಇಲ್ಲಾ ,ವಿಭಿನ್ನ ಜಾತಿ ಧರ್ಮ ದೇವರು, ಆಚರಣೆ ಮತ್ತು ಸಂಪ್ರದಾಯ ಹೊಂದಿರುವ ಬಹುದೊಡ್ಡ ಜನಸಂಖ್ಯೆಯ ವೈವಿದ್ಯಮಯ ದೇಶಕ್ಕೆ ಸಂವಿಧಾನ ಪಿತಾಮಹ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ದೇಶದ ಸರ್ವಜನರ ಹೇಳಿಗೆಯೊಂದಿಗೆ ದೇಶದ ಬಹುತ್ವವನ್ನು ಉಳಿಸಿ ಬೆಳೆಸಿಕೊಂಡು ಹೋಗುವಂತ ಸುಭದ್ರವಾದ ಸಂವಿಧಾನವನ್ನು ಕೊಟ್ಟಿದ್ದಾರೆ, ಅದು ದೇಶದ ಸರ್ವಜನಗಳ ಅಕ್ಷಯ ಬಟ್ಟಲಾಗಿದೆ,ಇಂತ ಸಂವಿಧಾನದ ಪ್ರತಿಗಳನ್ನು 2018 ಆಗಷ್ಟ್ 9 ರಂದು ದೆಹಲಿಯಲ್ಲಿ ಕೆಲವರು ಸುಟ್ಟರು,ಕೇಂದ್ರ ಸರ್ಕಾರದ ಸಚಿವರೆ ಕರ್ನಾಟಕದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಸಂವಿಧಾನ ಬದಲಿಸಲೆಂದೆ ನಾವು ರಾಜಕರಣಕ್ಕೆ ಬಂದಿದ್ದೆವೆಂದು ಬೈರಂಗವಾಗಿ ಘೋಷಿರುವದು ಮತ್ತು ಇತ್ತಿಚಿಗೆ ಕೇಂದ್ರದ ಗೃಹ ಸಚಿವರೆ ದೇಶದ ಬಹುತ್ವದ ಬಹುಜನಗಳ ಅಸ್ಮಿತಿಯಾಗಿರುವ ಸಂವಿಧಾನ ಶಿಲ್ಪಿಯ ನಾಮ ಸ್ಮರಣೆ ಮಾಡುವದು ಪ್ಯಾಶನ್ ಎಂದು ಜರಿಯುವದಲ್ಲದೆ ದೇವರ ನಾಮ ಸ್ಮರಿದರೆ ಸ್ವರ್ಗ ಸಿಗುತ್ತಿತ್ತು ಎನ್ನುವದು ಸೂಕ್ಷ್ಮವಾಗಿ ಗಮನಿಸಿದರೆ ದೇಶದ ಬಹುಜನರಿಗೆ ಅನಿಸುತ್ತಿರುವದು,
“ದೇವರು ದಿಂಡರೆಂದು
ನಿತ್ಯ ದೇವರ ದ್ಯಾನದಲ್ಲೆ
ಮೂಳಗಿದ ನಮ್ಮ ಪೂರ್ವಜರು,
ಕುರಿ ಕೋಳಿ ಕೊಣ ಕಡಿದು
ಪೂಜಿಸುತ್ತಲೆ ಬಂದರು
ಶತ ಶತಮಾನಗಳ ಕಾಲ,
ಯಾವ ದೇವರೆಮ್ಮ ಪೂರ್ವಜರಿಗೆ
ಅಡಿವ್ಯಾಗ ಹೊಲ ಕೊಡಲಿಲ್ಲಾ
ಊರಾಗಾ ಮನೆಕೊಡಲಿಲ್ಲಾ
ತಲೆಯಲ್ಲಿ ಅಕ್ಷರ ತುಂಬಲಿಲ್ಲಾ,
ಬಾಬಾ ಸಾಹೇಬರ ಸಂವಿಧಾನವೆ
ನಮಗೆಲ್ಲ ಕೊಟ್ಟಿದ್ದು ನೋಡೆಂದನು,
ನಮ್ಮ ರಸ್ತಾಪೂರದ ಭೀಮಕವಿಗಳ.
ಹೀಗೆ ನಮ್ಮ ಪೂರ್ವಜರ ಬದುಕಿಗೆ ಬೇಕಾದ ಸವಲತ್ತುಗಳೆ ಕೊಡದ ದೇವರು ಭೂಮಿ ಮ್ಯಾಲೆ ಬದುಕಲು ಬೇಕಾದ ಅವಶ್ಯಕತೆಗಳಿಗಿಂತ ಸ್ವರ್ಗ ಬೇಕೆ? ಅದು ಉಂಟೆ? ಸತ್ತ ಮೇಲಿನ ಸ್ವರ್ಗಕ್ಕಾಗಿ ಭೂಮಿ ಮೇಲೆ ನರಕ ಅನುಭವಿಸಬೇಕೆ? ಸ್ವರ್ಗ ನರಕದ ಕಲ್ಪನೆಯಿಂದ ಬದುಕಿನ ಖುಷಿಯನ್ನು ಕಿತ್ತಿಕೊಂಡ ಮನುವಾದಿಗಳ ಮನದಲ್ಲಿ ಏನಿದೆ ಎಂದು ಊಹಿಸುವುದು ಕಷ್ಟವೆನಲ್ಲಾ, 1949 ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ತನ್ನ ಮುಖವಾಣಿ ಪತ್ರಿಕೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನದಲ್ಲಿ ಭಾರತೀಯತೆ ಇಲ್ಲವಾಗಿದೆ. ಈ ದೇಶದ ನೆಲದ ಕಾನೂನಾದ ಮನುಸ್ಮ್ರತಿಯಿಂದ ಏನೂ ಪಡೆದುಕೊಂಡಿಲ್ಲ, ಹೀಗಾಗಿ ಈ ಸಂವಿಧಾನ ನಮಗೆ ಒಪ್ಪಿತವಲ್ಲ.
ಸಂಘಪರಿವಾರ ಗುರೂಜಿ ಎಂದು ಸಂಬೋಧಿಸುವ “ಮಾ.ಸ.ಗೋಲ್ವಲ್ಕರ್ ” ಹಿಂದುಗಳಿಗೆ ಪ್ರಜಾಪ್ರಭುತ್ವ ತತ್ವಗಳು ಹೊರಗಿನವು,ಇಡೀ ಮನುಕುಲದ ಅತಿ ಶ್ರೇಷ್ಟ ಮತ್ತು ಮಹಾನ್ ಕಾನೂನು ರಚನೆಕಾರ ಮನು ಎಂದಿದ್ದರು. ಹಾಗೆಯೇ ಸಂಘಪರಿವಾರದ ಮತ್ತೊಬ್ಬ ಸಂಸ್ಥಾಪಕ, ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರಿಗೆ ತಪ್ಪೊಪ್ಪಿಗೆ ಬರೆದು ಕೊಟ್ಟಿದ್ದ ‘ವಿ ಡಿ ಸಾವರ್ಕರ್ ‘ವೇದಗಳ ನಂತರ ಅತ್ಯಂತ ಪೂಜ್ಯನೀಯ ಗ್ರಂಥ ಮನುಸ್ಮ್ರತಿ ಹಾಗೂ ದೇಶವನ್ನು ಅದರ ಆಧಾರದಲ್ಲಿ ನಡೆಸಬೇಕೆಂದು ಪ್ರತಿಪಾದಿಸಿದರು, 1950 ರ ಜನವರಿ 25 ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ತನ್ನ ಪತ್ರಿಕೆ (Organizer )ಆರ್ಗನೈಸೇಶರ್ ನಲ್ಲಿ ” ಮನು ನಮ್ಮ ಹೃದಯವನ್ನಾಳುತ್ತಾನೆ” ಎಂಬ ಶೀರ್ಷಿಕೆಯಲ್ಲಿ ನಿವೃತ್ತ ನ್ಯಾಯಾಧೀಶರೊಬ್ಬರು ಲೇಖನ ಬರೆದು ಮನುಸ್ಮ್ರತಿಯನ್ನೇ ದೇಶದ ಸಂವಿಧಾನವಾಗಿ ಜಾರಿ ಮಾಡಬೇಕು ಎಂದು ಬರೆಯಲಾಗಿತ್ತು, ಮತ್ತು ಬಾಬಾ ಸಾಹೇಬ್ ಅಂಬೆಡ್ಕರ್ ಮಹಾಡ್ ಸಮ್ಮೇಳನದಲ್ಲಿ ಅಸಮಾನತೆಯ ಅಮಾನವಿಯ ಮನುಸ್ಮ್ರತಿಯನ್ಜು ಸಾರ್ವಜನಿಕವಾಗಿ ಸುಟ್ಟು ಹಾಕಿದ್ದನ್ನು ದೇಶದ ಜನ ಸ್ಮರಿಸಿಕೊಳ್ಳಬೇಕಿದೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಈ ನಿಲುವನ್ನು ತಮ್ಮ ಅಜಂಡವಾಗಿಸಿಕೊಂಡಿರುವ ಸಂಘ ಪರಿವಾರದ ಪ್ರೇರಿತ ಈ ಮನಸ್ಸುಗಳು ಸಂವಿಧಾನವನ್ನು ಸುಟ್ಟು ಹಾಕುವ ಮತ್ತು ಅದನ್ನು ಬದಲಿಸಿ ಯಾವ ಸಂವಿಧಾನವನ್ನು ತರತಾರೆಂದು ಊಹಿಸುವದು ಬಹಳ ಕಷ್ಟವೇನು ಅಲ್ಲಾ, ಹೀಗಾಗಿ ನಮ್ಮ ಬಹುತ್ವದ ಭಾರತ ಉಳಿಯ ಬೇಕಾದರೆ, ಬಾಬಾ ಸಾಹೇಬ್ ರ ಸಂವಿಧಾನ ಉಳಿಯ ಬೇಕು ,ಸಂವಿಧಾನ ಉಳಿದರೆ ಮಾತ್ರ ಈ ದೇಶದ ಬಹುಜನರು ಉಳಿಯಲು ಸಾದ್ಯ ಹೀಗಾಗಿ ಇದನ್ನು ಅರಿತು ಸಂವಿಧಾನ ರಕ್ಷಣೆಗಾಗಿ ಬಹು ಜನರು ಒಗ್ಗೂಡುವ ಅಗತ್ಯವಿದೆ, ” ನಾನು ಮೊದಲು ಭಾರತೀಯ,ನಂತರ ಭಾರತೀಯ ಮತ್ತು ಅಂತಿಮವಾಗಿ ಭಾರತೀಯ ” ಎಂಬ ಬಾಬಾ ಸಾಹೇಬ್ ರ ನುಡಿಗಳನ್ನು ಸ್ಮರಸಿಕೊಂಡು ನಾವೆಲ್ಲರೂ ಜಾತಿ ಧರ್ಮ ಮತ ಪಂಗಡಗಳನ್ನು ಬಿಟ್ಟು ಭಾರತೀಯರಾಗಿ ಬಹುತ್ವದ ಭಾರತವನ್ನು ರಕ್ಷಿಸುವ ಭಾರತೀಯರಾಗಬೇಕೆ ಹೋರತು, ಧರ್ಮಾದರಿತ,ಅಜ್ಞಾನ ಅಂಧಕಾರ ಅಸಮಾನತೆಯ ಭಾರತದ ಭಾರತೀಯರಾಗುವದು ಬೇಡವೆಂಬ ಆಶೆಯೊಂದಿಗೆ ಸಂವಿಧಾನ ದಿನವಾದ 76 ನೇ ಗಣರಾಜ್ಯೋತ್ಸವವನ್ನು ಆಚರಿಸೋಣವೆಂದು ಹೇಳಿ ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು ಕೊರುವೆ.
– ಶ್ರೀಶೈಲ ಬಿರಾದರ ನಾಗನಟಗಿ.
9008659817
