
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ತಾಲೂಕಿನ ಮುದ್ನಾಳ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಭೀಮನಗರ ತಾಂಡಾ ಮತ್ತು ಮುದ್ನಾಳ್ ಗ್ರಾಮದಲ್ಲಿ ಪಂಚಾಯತ್ ವಾಟರ್ ಐಡ್ ಸಂಸ್ಥೆ ಸಹಭಾಗಿತ್ವದಲ್ಲಿ ಗ್ರಾಮದ ಸಮಸ್ಯೆಗಳು ಕುರಿತು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೇನುಕ ವಿನೋದ್ ಪವಾರ್ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯ ಗ್ರಾಮಸ್ಥರು, ಅಂಗನವಾಡಿ ಕಾರ್ಯಕರ್ತೆ ಹಾಗೂ ವಾಟರ್ ಐಡ್ ಇಂಡಿಯಾ ಸಂಸ್ಥೆ ವತಿಯಿಂದ ಜಿಲ್ಲಾ ಸಂಯೋಜಕರಾದ ಶಿವಕುಮಾರ್.ಕೆ. ಎಮ್, ತಾಂತ್ರಿಕ ಇಂಜಿನಿಯರ್ ಆದ ದೇವೇಂದ್ರ ಕೊಂಕಲ್ ಹಾಗೂ ರೇಣುಕಾ ಭಾಗವಹಿಸಿದ್ದರು.
ಈ ಸಭೆಯಲ್ಲಿ ಮೂಲತವಾಗಿ ನೀರಿನ ಟ್ಯಾಂಕ್ ರಿಪೇರಿ, ಅಂಗನವಾಡಿ ಗೆ ಸ್ವಂತ ಕಟ್ಟಡ ಒದಗಿಸುವ ಕುರಿತು, ಕೆರೆ ನೀರಾವರಿ, ಪೈಪ್ ಲೈನ್ ಕೆಲಸಗಳ ಕುರಿತು ಹಾಗೂ ಟ್ಯಾಂಕ್ ದುರಸ್ತಿ ಮಾಡುವ ಕುರಿತ್ತು ಗ್ರಾಮಸ್ಥರ ಅಭಿಪ್ರಾಯ ಮತ್ತು ಸಮುದಾಯ ವಂತಿಕೆಯ ಬಗ್ಗೆ ಚರ್ಚೆ ಮಾಡಲಾಯಿತು.
ನೀರಿನ ಟ್ಯಾಂಕ್ ದುರಸ್ತಿ ಮಾಡುವ ಕುರಿತ್ತು ಭೀಮ ನಗರ ಗ್ರಾಮಸ್ಥರಿಂದ ಒಪ್ಪಿಗೆ ಯನ್ನು ಪಡೆಯಲಾಯಿತು.
ಹಾಗೂ ಶೌಚಾಲಯಗಳ ದುರಸ್ತಿ ಮತ್ತು ಸಮರ್ಪಕ ಬಳಕೆಯ ಕುರಿತು ಹಾಗೂ ಅಂತರ್ಜಲ ಮಟ್ಟವನ್ನು ಉತ್ತಮಪಡಿಸಲು ಹಿಂಗು ಗುಂಡಿಗಳ ಅವಶ್ಯಕತೆ ಮತ್ತು ನಿರ್ಮಾಣದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
