ಚಟ್ನಳ್ಳಿಯಲ್ಲಿ ಶುದ್ಧ ಕುಡಿವ ನೀರಿಗಾಗಿ ಪರದಾಟ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಶಹಾಪುರ ತಾಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ಸುಮಾರು 1 ತಿಂಗಳುಗಳಂದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿದು ಕುಡಿಯುವ ನೀರಿಗಾಗಿ ಜನರು ಪರದಾಡುವಂತಾಗಿದೆ. ಹಾಗೂ ಗ್ರಾಮದ ವಾರ್ಡ್ ನಂ. 03 ರ ಬಡವಣೆಯಲ್ಲಿ ಹುಳೆತ್ತದ ಚರಂಡಿಗಳು ಮಳೆ ಸುರಿದಾಗೆಲ್ಲ ತುಂಬಿ ಕೊಳಚೆ ನೀರು ರಸ್ತೆಯ ಮೇಲ್ಬಾಗದಲ್ಲಿ ನಿಂತು ರಸ್ತೆಗು ಚರಂಡಿಗೆ ವ್ಯತ್ಯಾಸ ಇಲ್ಲದಂತೆ ನೆಲಸಮವಾಗಿ ಕಾಣುತ್ತದೆ.
ಗ್ರಾ.ಪಂ ಮುಂಬಾಗದಿಂದ ಮುಖ್ಯವಾಗಿ ಬಡಾವಣೆ ಹಾಗೂ ಬಸವೇಶ್ವರ ಚೌಕ್ ಗೆ ತೆರಳುವ ಮುಖ್ಯ ರಸ್ತೆ ಇದಾಗಿದ್ದು ಮುಂಭಾಗದ ರಸ್ತೆ ಮಳೆ ಬಂದಾಗೆಲ್ಲ ಸಂಪೂರ್ಣವಾಗಿ ಕೊಳಚೆ ನೀರಿನಿಂದ ಆವ್ರುತವಾಗಿರುತ್ತದೆ.
ಅದೆ ದಾರಿಯಲ್ಲಿ ಓದಾಡುವ ಶಾಲಾ ಮಕ್ಕಳು ಹಾಗೂ ವಾಹನ ಸಂಚಾಲಕರಿಗೆ ಇದರಿಂದಾಗಿ ತೊಂದರೆ ತಪ್ಪಿಲ್ಲ
ಇಂತಹ ಸಣ್ಣ ಪುಟ್ಟ ಸಮಸ್ಯೆಗಳಿಗೂ ಸ್ಪಂದಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೇಲೆ ವಾರ್ಡ್ ನ ನಿವಾಸಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರು.

ವಾರ್ಡ್ ನಲ್ಲಿ ಸುಮಾರು 3 ತಿಂಗಳಿದ ಬೀದಿ ದೀಪಗಲಿಲ್ಲ ಹಾಗೂ ಚರಂಡಿ ಸಮಸ್ಯೆ ಚರಂಡಿಯ ಕೊಳಚೆ ನೀರು ರಸ್ತೆ ಮೇಲೆ ನಿಂತಿವೆ ಇದರಿಂದ ಸೊಳ್ಳೆ ಹೆಚ್ಚುತ್ತೆ ಸೊಳ್ಳೆ ಕಡಿತದಿಂದ ರೋಗಗಳು ಹರಾಡುತ್ತೆ, ಶಾಲೆ ಮಕ್ಕಳು ಬಡಾವಣೆ ನಿವಾಸಿಗಳು ಓದಾಡುವ ಮುಖ್ಯ ರಸ್ತೆ ಇದು ಎನ್ನುವ ಕನಿಷ್ಠ ಕಾಳಜಿಯೂ ಇಲ್ಲಿಯ ಜನಪ್ರತಿನಿದಿಗಳಿಗೆ ಇಲ್ಲದಿರುವುದು ನಾಚಿಗೆಡಿನ ಸಂಗತಿ

ಮಲ್ಕರೆಡ್ಡಿ ಕಲ್ಮನಿ
ಗ್ರಾಮದ ನಿವಾಸಿ