ದೇಶ ರಕ್ಷಣೆಯಲ್ಲಿ ಯೋಧರ ಪಾತ್ರ ಬಹು ಮುಖ್ಯ – ರಾಜಶೇಖರ

By admin

ಯಾದಗಿರಿ : ದೇಶ ರಕ್ಷಣೆಯಲ್ಲಿ ಯೋಧರ ಪಾತ್ರ ಬಹು ಮುಖ್ಯವಾಗಿದೆ.ಜೀವದ ಹಂಗು ತೊರೆದು ಶತ್ರುಗಳನ್ನು ಸದೆ ಬಡೆಯುವ ಯೋಧರು ದೇಶ ರಕ್ಷಕರಾಗಿದ್ದಾರೆ ಎಂದು ಹರ ಹರ ಮಹಾದೇವ ಟ್ರಸ್ಟ್ ನ ಅಧ್ಯಕ್ಷ ರಾಜಶೇಖರ ಪಾಟೀಲ ಚಾಮನಳ್ಳಿ ಹೇಳಿದ್ದಾರೆ.

ಅವರು ಭಾನುವಾರ ಸಂಜೆ ನಗರದ ಚಿತ್ತಾಪುರ ರಸ್ತೆಯಲ್ಲಿನ ಆಂಜನೇಯ ದೇಗುಲದಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಯೋಧ ಬಸವರಾಜ್ ಕೊರಳ್ಳಿ ಅವರಿಗೆ ಹರ ಹರ ಮಹಾದೇವ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ಈಗಾಗಲೇ ಭಾರತ ಹಾಗೂ ಪಾಕ್ ನಡುವೆ ಯುದ್ದ ಭೀತಿ ಎದುರಾಗಿದೆ.ಯಾವ ಕ್ಷಣದಲ್ಲಿ ಯುದ್ದ ಎದುರಾಗುತ್ತೋ ಏನೋ.ಶತ್ರು ರಾಷ್ಟ್ರ ಪಾಕ್ ನ ವಿರುದ್ಧ ಭಾರತೀಯ ಸೈನಿಕರು ಆಪರೇಷನ್ ಸಿಂಧೂರು ಹೆಸರಿನಲ್ಲಿ ಪಾಕ್ ಗೆ ಪಾಠ ಕಲಿಸಿದ್ದಾರೆ.ಇಷ್ಟಾದ್ರು ನರಿ ಬುದ್ದಿ ಹೊಂದಿರುವ ಪಾಕ್ ಮೇಲೆ ವಿಶ್ವಾಸವಿಲ್ಲ.ತುರ್ತು ಕರೆ ಮೇಲೆ ಕರ್ತವ್ಯಕ್ಕೆ ತೆರಳುತ್ತಿರುವ ಯೋಧ ಬಸವರಾಜ್ ಹಾಗೂ ಭಾರತೀಯ ಸೈನಿಕರೆಲ್ಲರೂ ಶತ್ರುಗಳ ವಿರುದ್ಧ ಹೋರಾಟ ನಡೆಸಿ ಗೆದ್ದು ಬರಲಿ ಎಂದು ಹಾರೈಸಿದರು.

ಈ ವೇಳೆ ಸಮಾಜಿಕ ಕಾರ್ಯಕರ್ತ ಉಮೇಶ್ ಮುದ್ನಾಳ ಅವರು ಮಾತನಾಡಿ, ಜಮ್ಮು ಕಾಶ್ಮೀರದ ಪಹಲ್ಗಾಂವ್ ನಲ್ಲಿ ಪಾಕ್ ಉಗ್ರರು ಧರ್ಮ ಕೇಳಿ ಹಿಂದೂ ಪ್ರವಾಸಿರ ಟಾರ್ಗೆಟ್ ಮಾಡಿ ನರಮೇಧ ಮಾಡಿದ್ದಾರೆ. ಇದಕ್ಕೆ ಪ್ರತಿಕಾರವಾಗಿ ಭಾರತೀಯ ಸೈನಿಕರು ಆಪರೇಷನ್ ಸಿಂಧೂರು ಹೆಸರಿನಲ್ಲಿ ದಾಳಿ ಮಾಡಿ ಸೈನಿಕರು ಉಗ್ರರನ್ನು ಸದೆಬಡೆದಿದ್ದಾರೆ.ಇಂತಹ ಸಂದರ್ಭದಲ್ಲಿ ದೇಶ ರಕ್ಷಣೆಗಾಗಿ ರಕ್ಷಾ ಕವಚದಂತೆ ಮಳೆ,ಬಿಸಿಲು,ಚಳಿ ಎನ್ನದೇ ಗಡಿಯಲ್ಲಿ ಶತ್ರುಗಳ ವಿರುದ್ಧ ಹೋರಾಟ ಮಾಡಿ ನಮ್ಮನ್ನು ಕಾಪಾಡುವ ಯೋಧರ ಕಾರ್ಯ ದೊಡ್ಡ ಕಾರ್ಯವಾಗಿದೆ.ಭಾರತೀಯ ಯೋಧರ ಹೋರಾಟಕ್ಕೆ ಭಗವಂತ ಶಕ್ತಿ ಕೊಡಲಿ ಎಂದರು.

ಈ ವೇಳೆ ಯೋಧ ಬಸವರಾಜ್ ಕೊರಳ್ಳಿ ಅವರು ಮಾತನಾಡಿ,ನಮಗೆ ತುರ್ತು ಕರೆ ಬಂದಿದೆ ಈ ಹಿನ್ನಲೆ ನಾನು ಕರ್ತವ್ಯಕ್ಕೆ ತೆರಳುತ್ತಿದ್ದೆನು.ದೇಶ ರಕ್ಷಣೆಗಾಗಿ ನಾನು ಹೋರಾಟ ಮಾಡುತ್ತೆನೆ.ದೇಶದ ನಾಗರಿಕರು ನ್ಯಾಯಾಯುತವಾಗಿ ಮಾಡುವ ಉತ್ತಮ ಸೇವೆಯು ದೇಶ ಸೇವೆ ಸಲ್ಲಿಸಿದಂತೆ.ನಾವು ಗಡಿಯಲ್ಲಿ ಹೋರಾಟ ಮಾಡಿ ದೇಶ ಸೇವೆ ಮಾಡುತ್ತೆವೆ.ದೇಶದ ಜನರು ನ್ಯಾಯಾಯುತ ಮಾಡುವ ಕೆಲಸವೂ ದೇಶ ಸೇವೆಯಾಗಲಿದೆ ಎಂದರು.

 

ತುರ್ತು ಕರೆ ಬಂದ ಹಿನ್ನಲೆ ಕರ್ತವ್ಯಕ್ಕೆ ಮರಳುತ್ತಿರುವ ಯೋಧ ಬಸವರಾಜ್ ಕೊರಳ್ಳಿ ಅವರಿಗೆ ನಗರದ ಲಕ್ಷ್ಮೀನಗರದ ನಿವಾಸದಲ್ಲಿ ಅವರ ಕುಟುಂಬಸ್ಥರು ಆರತಿ ಬೆಳಗಿ ಬಿಳ್ಕೊಟ್ಟರು.ಪತ್ನಿ ಹಾಗೂ ಪುತ್ರಿ ಅವರು ಯೋಧನ ಹಣೆಗೆ ಸಿಂದೂರು ತಿಲಕವಿಟ್ಟು ಹೋರಾಟದಲ್ಲಿ ಗೆದ್ದು ಬನ್ನಿ ಎಂದು ಹಾರೈಸಿದರು.

ಈ ವೇಳೆ ಯೋಧನ ತಾಯಿ ಸಿದ್ದಮ್ಮ ಶಂಭುರೆಡ್ಡಿ ಕೊರಳ್ಳಿ ಮಾತನಾಡಿ, ನನ್ನ ಮಗ 23 ವರ್ಷಗಳ ಕಾಲ ದೇಶ ಸಲ್ಲಿಸುತ್ತಿದ್ದಾನೆ.ನನ್ನ ಮಗ ಈಗ ಕರ್ತವ್ಯಕ್ಕೆ ಹೋಗುತ್ತಿದ್ದಾನೆ.ಕೇವಲ ನನ್ನ ಮಗನಲ್ಲ ಭಾರತೀಯ ಸೈನಿಕರೆಲ್ಲರೂ ನನ್ನ ಮಕ್ಕಳು ಇದ್ದ ಹಾಗೇ ಎಲ್ಲರೂ ಶತ್ರುಗಳ ವಿರುದ್ಧ ಹೋರಾಟ ಮಾಡಿ ಗೆದ್ದು ಬರಲಿ ಎಂದು ಹಾರೈಸಿದರು.

ಈ ವೇಳೆ ದೊಡ್ಡಯ್ಯ ಸ್ವಾಮಿ,ನಾಗರೆಡ್ಡಿ ಹತ್ತಿಕುಣಿ, ಚನ್ನಬಸ್ಸಪ್ಪ ಯರಗೋಳ,ಚಂದ್ರಶೇಖರ ತಂಬಾಕೆ,ಶರಣಗೌಡ ಪಾಟೀಲ, ರಾಮು ರಾಠೋಡ,
ಅಯ್ಯಣ್ಣಗೌಡ ಕ್ಯಾಸಪನಳ್ಳಿ,ಮಲ್ಲನಗೌಡ ಪಾಟೀಲ, ನಾಗೇಂದ್ರಪ್ಪ ಭೀಮನಳ್ಳಿ,ಶಿವರಾಜಗೌಡ ಗುರುಸಣಗಿ,ಮಾಜಿ ಸೈನಿಕ ರಾಜಶೇಖರ ಬಾಪುರೆ,ಚಂದ್ರಕಾಂತ ಲೇವಡಿ,ಶಂಕರ್ ಸೋನಾರ್,ಮೋಹನ್ ಬೆಳಗೇರಿ,ಎಂ.ಎಸ್.ಶಿರವಾಳಕರ್,ಮೌನೇಶ ಪತ್ತಾರ ಸೇರಿದಂತೆ ಅನೇಕರು ಇದ್ದರು.