
ಯಾದಗಿರಿ : ಕಳೆದ ಮೇ 5 ರಂದು ಆರಂಭವಾಗಿರುವ ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಡಾ. ಸುಶೀಲಾ.ಬಿ ಅವರು ಶುಕ್ರವಾರ ನಗರದ ಗಾಂಧಿ ನಗರ ತಾಂಡಾ, ಅಂಬೇಡ್ಕರ್ ನಗರ, ಕೋಟಗೇರಾ ವಾಡಾಕ್ಕೆ ಭೇಟಿ ನೀಡಿದರು.
ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ನಡೆದಿರುವ ಈ ಸಮೀಕ್ಷೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ನಿರಂತರ ಮಾಹಿತಿ ಪಡೆಯುತ್ತಿರುವ ಡಿಸಿ ಅವರು ಸಮೀಕ್ಷಾ ಸ್ಥಳಕ್ಕೆ ತಾವೇ ಖುದ್ದು ಭೇಟಿ ನೀಡುವ ಮೂಲಕ ಸಮೀಕ್ಷೆಯಲ್ಲಿರುವ ಸಿಬ್ಬಂದಿ ಮತ್ತು ಜನರಿಗೆ ಅಗತ್ಯ ಹೆಚ್ಚಿನ ಮಾಹಿತಿ ನೀಡಿದರು.
ಈ ವೇಳೆ ಗಾಂಧಿ ನಗರದಲ್ಲಿ ಸಮೀಕ್ಷೆ ನಡೆಸುತ್ತಿರುವ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿದರು.
ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಚನ್ನಬಸಪ್ಪ, ತಾಲೂಕು ದಂಡಾಧಿಕಾರಿ ಸುರೇಶ ಅಂಕಲಗಿ, ಬಿಇಒ ಸೇರಿದಂತೆಯೇ ಇತರರಿದ್ದರು.
