ರೈತ ಹೋರಾಟಗಾರ ಶರಣಪ್ಪ ಸಲಾದಪುರರಿಗೆ ಎಂ.ಎಲ್.ಸಿ ಸ್ಥಾನ ನೀಡಲು ರೈತ ಸಂಘದ ಆಗ್ರಹ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಹೈಕಮಾಂಡ್ ತಡೆಹಿಡಿದ ಎಂ.ಎಲ್.ಸಿ ಆಯ್ಕೆ ಪಟ್ಟಿಯಲ್ಲಿ, ಹಿರಿಯ ರೈತ ಹೋರಾಟಗಾರ ಹಾಗೂ ಕಾಂಗ್ರೆಸ್ ನಿಷ್ಠಾವಂತ ನಾಯಕರಾದ ಶ್ರೀ ಶರಣಪ್ಪ ಸಲಾದಪುರರವರಿಗೆ ಸ್ಥಾನ ನೀಡಬೇಕೆಂದು ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿವೆ.
ಕಾಲೇಜು ದಿನಗಳಿಂದಲೇ ಪ್ರೊ. ನಂಜುAಡಸ್ವಾಮಿಯವರ ಪ್ರೇರಣೆಯಿಂದ ರೈತರ ಹಕ್ಕಿಗಾಗಿ ಹೋರಾಟ ನಡೆಸಿದ ಅವರು, ರೈತ ಸಂಘದ ಮುಖಾಂತರ ರಾಜಕೀಯ ಪ್ರವೇಶ ಮಾಡಿದರು. ಅವರು ರೈತ ಸಂಘದಿAದ ಎರಡು ಬಾರಿ ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿ ತಮ್ಮ ಬದ್ಧತೆಯನ್ನು ಸಾಬೀತು ಪಡಿಸಿದ್ದಾರೆ. ನಂತರ ಶ್ರೀ ಮಲ್ಲಿಕಾರ್ಜುನ ಖರ್ಗೆಯವರ ಆಹ್ವಾನದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಈ ನಾಯಕ, 1999, 2004, 2008 ಮತ್ತು 2023 ರಲ್ಲಿ ವಿಧಾನಸಭೆ ಹಾಗೂ 2003ರಲ್ಲಿ ವಿಧಾನ ಪರಿಷತ್ ಟಿಕೆಟ್‌ಗಾಗಿ ಬಲವಾದ ಆಕಾಂಕ್ಷಿಯಾಗಿದ್ದರು. ಆದರೆ ಪ್ರತಿಸಾರಿ ಟಿಕೆಟ್ ತಪ್ಪಿದರೂ ಪಕ್ಷವನ್ನು ಬಿಟ್ಟುಹೋಗದೆ ದುಡಿದಿದ್ದಾರೆ.
ಇದುವರೆಗೆ ಪಕ್ಷ ಅಥವಾ ಸರ್ಕಾರದಲ್ಲಿ ಯಾವುದೇ ಹುದ್ದೆ ನೀಡಲಾಗದ ಈ ನಾಯಕನನ್ನು ಕೈಬಿಟ್ಟರೆ, ಅದು ಕೇವಲ ವ್ಯಕ್ತಿಗಷ್ಟೇ ಅಲ್ಲ, ಯಾದಗಿರಿ ಜಿಲ್ಲೆಯ ರೈತ ಸಮುದಾಯವನ್ನೇ ಕಡೆಗಣಿಸಿದಂತಾಗುತ್ತದೆ. ಪ್ರತಿ ಚುನಾವಣೆಯಲ್ಲೂ ಅವರ ಶ್ರಮದಿಂದ ಪಕ್ಷ ಗೆಲುವು ಸಾಧಿಸಿದ್ದು ಸ್ಪಷ್ಟವಾಗಿದೆ. ಇತ್ತೀಚೆಗಿನ ರಾಜಕೀಯ ಬೆಂಬಲವೂ ಶರಣಪ್ಪ ಅವರ ಪರವಾಗಿದೆ. ಯಾದಗಿರಿ ಜಿಲ್ಲೆಯ ಉಸ್ತುವಾರಿ ಸಚಿವರು, ಯಾದಗಿರಿ ಮತ್ತು ಸುರಪುರ ಕ್ಷೇತ್ರಗಳ ಶಾಸಕರು, ರಾಯಚೂರ ಎಂ.ಪಿ ಹಾಗೂ ಗುಲ್ಬರ್ಗಾದ ಶಾಸಕರು ಕೂಡಾ ಅವರ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಗುಲ್ಬರ್ಗಾ ಜಿಲ್ಲೆಯಿಂದ ಇಬ್ಬರು ಎಂ.ಎಲ್.ಸಿ ಆಗಿರುವ ಸಂದರ್ಭದಲ್ಲೂ ಮತ್ತೊಬ್ಬರನ್ನು ಅಲ್ಲಿ ಆಯ್ಕೆ ಮಾಡುವುದು ಪ್ರಾದೇಶಿಕ ಸಮತೋಲನೆಗೆ ವಿರುದ್ಧವಾಗುತ್ತದೆ. ಖರ್ಗೆ ಸಾಹೇಬರು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವ, ರಾಷ್ಟ್ರಮಟ್ಟದ ನಾಯಕರಾಗಿರುವುದರಿಂದ, ತಮ್ಮ ಮೇಲಿನ ಗೌರವವನ್ನು ಕಾಯ್ದುಕೊಳ್ಳುತ್ತಾ ಸ್ವಜಾತಿ ಪ್ರೀತಿಯ ಆರೋಪಕ್ಕೆ ತುತ್ತಾಗದಂತೆ, ಯಾದಗಿರಿ ಜಿಲ್ಲೆಯ ರೈತ ಹೋರಾಟಗಾರ ಶ್ರೀ ಶರಣಪ್ಪ ಸಲಾದಪೂರ ರವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಬೇಕು ಎಂಬುದು ರೈತ ಸಂಘದ ಹಾಗೂ ಹಸಿರು ಸೇನೆಯ ಪ್ರಬಲ ಆಗ್ರಹವಾಗಿದೆ. ಇದು ನಿಜಾರ್ಥದಲ್ಲಿ ಪ್ರಾದೇಶಿಕ ಸಮತೋಲನ, ಸಾಮಾಜಿಕ ನ್ಯಾಯ ಮತ್ತು ರೈತರಿಗೆ ಗೌರವ ನೀಡಿದಂತಾಗುತ್ತದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಭೀಮಣ್ಣಗೌಡ ಪೊಲೀಸ್ ಪಾಟೀಲ್ ಆಗ್ರಹಿಸಿದ್ದಾರೆ.