ಸೆಕ್ಯುಲರ್ ವಾಯ್ಸ್ ಶಹಾಪುರ
ಶಹಾಪುರ ತಾಲೂಕು ಸಜ್ಜನ್ ಸಮಾಜದ ತಾಲೂಕು ಸಂಘಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಇಲ್ಲಿಯ ಹಾಲುಬಾಯಿ ರೋಡ್ ಅಮರೇಶ ಸಜ್ಜನ್ ನಿವಾಸದಲ್ಲಿ ನಡೆದ ಸಭೆಯನ್ನು ಕರೆಯಲಾಗಿತ್ತು. ಈ ಸಂದರ್ಭದಲ್ಲಿ ನೂತನ ತಾಲೂಕು ಅಧ್ಯಕ್ಷರಾಗಿ ಶರಣಪ್ಪ ಸಜ್ಜನ್ ವಕೀಲರು ಸಗರ ಅವಿರೋಧವಾಗಿ ಆಯ್ಕೆಯಾದರು. ಗೌರವಧ್ಯಕ್ಷರಾಗಿ ಬಸವರಾಜ್ ಸಜ್ಜನ್ ಇಒ ಸುರಪುರ, ಉಪಾಧ್ಯಕ್ಷರಾಗಿ ಶ್ರೀಶೈಲ ಸಜ್ಜನ್, ಶಿವಕುಮಾರ್ ಸಜ್ಜನ್, ಕಾರ್ಯದರ್ಶಿಯಾಗಿ ವಿಕ್ರಂ ಸಜ್ಜನ್, ಖಜಾಂಜಿಯಾಗಿ ಅಮರೇಶ್ ಸಜ್ಜನ್ ಈ ಎಲ್ಲರೂ ಸಹ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ನಿವೃತ್ತ ಶಿಕ್ಷಕರಾದ ಶರಣಪ್ಪ ಸರ್ ಮಾತನಾಡಿ, ನಮ್ಮ ಸಮಾಜವು ಅತ್ಯಂತ ಕಡಿಮೆ ಸಂಖ್ಯೆಯಲ್ಲಿದ್ದು, ನಾವು ಒಕ್ಕಟ್ಟಿನಿಂದರಬೇಕು. ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಅಂದಾಗ ಮಾತ್ರ ನಮ್ಮ ಸಮಾಜಕ್ಕೆ ಬೆಲೆ ಬರುತ್ತದೆ ಎಂದು ಸಲಹೆ ನೀಡಿದರು.
ನಾವು ಇಂದಿನ ಕಾಲದಲ್ಲಿ ಹಿರೇಮರೆಕಾಯಿಯಂತೆ ನಮ್ಮ ಸಮಾಜದಲ್ಲಿ ಬದುಕಿ ಬಾಳುತ್ತಿದ್ದೇವೆ ಎಂದು ನುಡಿದರು. ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಸಂಗಣ್ಣ ಸಜ್ಜನ್ ಮುಡಬೂಳ, ಸಂಗಣ್ಣ ಗೋಗಿ, ಗುರುಲಿಂಗಪ್ಪಣ ಹೊನ್ನಪ್ಪ ಸಾಗರ್, ಶಾಂತಪ್ಪ ಶಿಕ್ಷಕರು, ಬಸವರಾಜ್ ಸಾಗರ್ ಸೇರಿದಂತೆ ಅನೇಕ ಜನ ಸಮಾಜದ ಗಣ್ಯರು ಉಪಸ್ಥಿತರಿದ್ದರು.