ಸೆಕ್ಯುಲರ್ ವಾಯ್ಸ್ ತುಮಕೂರ
ಕನ್ನಡ ಸಿನಿಮಾಗಳಲ್ಲಿ ತಳಸಮುದಾಯಗಳ ಪ್ರತಿನಿಧೀಕರಣದ ನೆಲೆಗಳು ಎಂಬ ವಿಷಯ ಕುರಿತು ಪ್ರೌಢಪ್ರಬಂಧ ಮಂಡಿಸಿದ ಲೇಖಕ ಹಾಗೂ ಪತ್ರಕರ್ತ ಕೆ.ಮುರುಳಿ ಮೋಹನ್ ಅವರಿಗೆ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವಿ ಸಂದಿದೆ.
ನಿವೃತ್ತ ಪ್ರಾಧ್ಯಾಪಕ ಡಾ.ಎಚ್.ಟಿ ಕೃಷ್ಣಮೂರ್ತಿ ಅವರ ಮಾರ್ಗದರ್ಶನ ಹಾಗೂ ನಗರದ ಎಸ್ ಎಸ್‌ಐಟಿ ಕ್ಯಾಂಪಸ್‌ನಲ್ಲಿರುವ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾಗಿರುವ ಡಾ.ಬಿ.ಟಿ.ಮುದ್ದೇಶ್ ಅವರ ಸಹ ಮಾರ್ಗದರ್ಶನದಲ್ಲಿ ಪತ್ರಕರ್ತ ಕೆ.ಮುರುಳಿ ಮೋಹನ್ ಅವರು ಕನ್ನಡ ಸಿನಿಮಾಗಳಲ್ಲಿ ತಳಸಮುದಾಯಗಳ ಪ್ರತಿನಿಧೀಕರಣದ ನೆಲೆಗಳು ಎಂಬ ವಿಷಯ ಕುರಿತು ಸಂಶೋಧನೆ ನಡೆಸಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದ ಮಹಾ ಪ್ರಬಂಧಕ್ಕೆ ಕನ್ನಡ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಸಂದಿದೆ.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ನವರಾದ ಕೆ.ಮುರುಳಿ ಮೋಹನ್ ಅವರು ಎಂ.ಎಸ್ಸಿ, ಎಲೆಕ್ಟ್ರಾನಿಕ್ ಮೀಡಿಯಾಮುಗಿಸಿದ್ದಾರೆ.
ಪತ್ರಕರ್ತರಾಗಿ, ರಂಗ ನಟರಾಗಿ, ಸಾಕ್ಷ್ಯಚಿತ್ರ ನೀದೇರ್ಶಕರಾಗಿ, ಸಿನಿಮಾ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ಹದಿನೈದು ವರ್ಷಗಳಿಂದ ಬೆಂಗಳೂರಿನ ಸಂವಾದ- ಬದುಕು ಸೆಂಟರ್ ಫಾರ್ ಲೈವಿಹುಡ್ ಲರ್ನಿಂಗ್ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ, ಪ್ರಸ್ತುತ ಸಂಸ್ಥೆಯ ಕಾರ್ಯಕ್ರಮ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆ.ಮುರುಳಿಮೋಹನ್ ಕರ್ನಾಟಕದ ಹಲವು ಸರ್ಕಾರಿ ಹಾಗು ಸರ್ಕಾರೇತರ ಸಂಸ್ಥೆಗಳಿಗೆ ತರಬೇತುದಾರರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಾವ್ಯ, ಲೇಖನ, ಪತ್ರಿಕಾ ಬರವಣಿಗೆ ಒಳಗೊಂಡ ಮೂರು ಕೃತಿ ಪ್ರಕಟಗೊಂಡಿವೆ. ಸಮಾಜದ ಜ್ವಂಲತ ಸಮಸ್ಯೆ, ಸಾಮಾಜಿಕ ಹೋರಾಟ, ಪರಿಸರ ವಿಚಾರ, ಮಾನವ ಹಕ್ಕುಗಳ ಕುರಿತು ಹಲವು ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿದ್ದಾರೆ, ಜೊತೆಗೆ ಕರ್ನಾಟಕದ ಹಲವ ಜನಪರ ಸಂಘಟನೆಗಳು, ಮಹಿಳಾ ಸಂಘಟನೆಗಳು, ಪರಿಸರ ಸಂಘಟನೆಗಳೊಂದಿಗೆ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.