ಮಾನವ ಕಳ್ಳ ಸಾಗಾಣಿಕೆ ಸಾಮಾಜಿಕ ಪಿಡುಗು

By admin

 

ಯಾದಗಿರಿ: ಮಾನವ ಕಳ್ಳ ಸಾಗಾಣಿಕೆ ಸಮಾಜಿಕ ಪಿಡುಗಾಗಿದ್ದು, ಅತಿ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಇದಕ್ಕೆ ಒಳಗಾಗುತ್ತಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ಎಷ್ಟೋ ದೌರ್ಜನ್ಯಗಳು ನಡೆಯುತ್ತಿವೆ, ಮಕ್ಕಳಿಗೆ ಯಾವುದೇ ಒಂದು ಆಸೆ ತೋರಿಸಿ ಅವರನ್ನು ದುಷ್ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೌರವನ್ವಿತ ಮಾನ್ಯ ಶ್ರೀ ಮರಿಯಪ್ಪ ಅವರು ಹೇಳಿದರು.

ಯಾದಗಿರಿ ನಗರದ ಜಿಲ್ಲಾ ಸ್ತ್ರೀ ಶಕ್ತಿ ಭವನದಲ್ಲಿ ಜು.30 ರಂದು ಇತ್ತೀಚಿನ ಕರ್ನಾಟಕ ಸರಕಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಹಾಗೂ ಯಾದಗಿರಿ ಸಮಗ್ರ ಶಿಶು ಸಂರಕ್ಷಣಾ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾನವ ಕಳ್ಳ ಸಾಗಾಣಿಕೆ ಸಮಾಜಿಕ ಪಿಡುಗಾಗಿದ್ದು, ಅತಿ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಇದಕ್ಕೆ ಒಳಗಾಗುತ್ತಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ಎಷ್ಟೋ ದೌರ್ಜನ್ಯಗಳು ನಡೆಯುತ್ತಿವೆ. ಮಕ್ಕಳಿಗೆ ಯಾವುದೇ ಒಂದು ಆಸೆ ತೋರಿಸಿ ಅವರನ್ನು ದುಷ್ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ, ಆದ್ದರಿಂದ ಕುಟುಂಬ ಮತ್ತು ಸಮಾಜದಲ್ಲಿ ಬಹಳ ಸೂಕ್ಮವಾಗಿ ನಾವು ಗಮನಿಸಬೇಕು ಮುಂದೆ ಇಂತಹ ಸಮಾಜದಲ್ಲಿ ನಡೆಯುತ್ತಿರುವ ದುಷ್ಕೃತ್ಯಗಳನ್ನು ಹತ್ತಿಕ್ಕಬೇಕಾಗಿದೆ. ನಾವೇಲ್ಲ ಹೆಚ್ಚೆತ್ತುಕೊಂಡು ಸಮಾಜದ ಒಳತಿಗಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ತಿಳಿಸಿದರು.

ಒನ್ ಸ್ಟಾಪ್ ಸೆಂಟರ್ ವಕೀಲರು ಶ್ರೀಮತಿ ಲತಾ ನಾಯಕ್ ಅವರು ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ ಎಷ್ಟು ಬಲಿ ಆಗುತ್ತಿದ್ದಾರೆ, ಎಲ್ಲಿ ಎಲ್ಲಿ ಮಾನವ ಕಳ್ಳ ಸಾಗಣಿಕೆ ಆಗುತ್ತಿದೆ. ಇದು ಎಲ್ಲಾ ವರ್ಗದವರು , ವಯಸ್ಸಾದವರು ಸಹ ಮಾನವ ಕಳ್ಳ ಸಾಗಾಣಿಕೆಗೆ ಒಳಗಾಗುತ್ತಿದ್ದಾರೆ, ವಲಸೆ ಹೋದ ಕುಟುಂಬಗಳು ತಮ್ಮ ಪೋಷಕರನ್ನು ಮಕ್ಕಳು ನೋಡಿಕೋಳ್ಳವ ನೆಪದಸಲ್ಲಿ, ಹಣ ಸಂಪಾದನೆ ಮಾಡಲು ತಮ್ಮ ತಂದೆ ತಾಯಿಗಳು ಖಾಸಗಿ ಮಕ್ಕಳ ಪಾಲನೆ ಕೇಂದ್ರಗಳಲ್ಲಿ ಕೆಲಸಕ್ಕೆ ಕಳುಹಿಸುತ್ತಿದ್ದಾರೆ, ಇದು ಸಹ ಮಾನವ ಕಳ್ಳ ಸಾಗಣಿಕೆ ಎಂದು ಹೇಳಬಹುದು. ಮಾನವ ಕಳ್ಳ ಸಾಗಾಣಿಕೆ ಇದು ಹೀಗೆ ನಡೆಯುತ್ತಿದೆ ಎಂದು ಹೇಳೊಕೆ ಆಗಲ್ಲ, ನಮ್ಮ ಸುತ್ತಲೂ ಏನು ನಡೆಯುತ್ತಿದೆ ಎನ್ನುವುದನ್ನು ನಾವು ಗಮನಿಸಬೇಕು, ನಮ್ಮ ಪಕ್ಕದಲೇ ನಡೆಯುತ್ತಿದ್ದರು ನಮ್ಮ ಗಮನಕ್ಕೆ ಬರುವುದಿಲ್ಲ, ಹೆಣ್ಣು ಮಕ್ಕಳ ವಿಷಯದಲ್ಲಿ ತಂದೆ ತಾಯಿಗಳು ಸ್ನೇಹ ಪರವಾಗಿ ಇರಬೇಕಾಗುತ್ತದೆ ಎಂದು ಹೇಳಿದರು.

ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಜಿಲ್ಲಾ ಸಂಯೋಜಕರು ಶ್ರೀಮತಿ ಆಶಾಬೇಗಂ ಪ್ರತಿಜ್ಞಾ ವಿಧಿ ಬೋಧಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರು ಶ್ರೀ ತಿಪ್ಪಣ್ಣ ಸಿರಸಗಿ ಅವರು ಮಾತನಾಡಿದರು, ಮಾನವ ಕಳ್ಳ ಸಾಗಾಣಿಕೆಯು ಆಧುನಿಕ ಯುಗದಲ್ಲಿನ ಗುಲಾಮಗಿರಿಯ ಒಂದು ರೂಪವಾಗಿದ್ದು, ಲಕ್ಷಾಂತರ ಅಮಾಯಕ ಜನರು ಬಲಿಯಾಗುತ್ತಿದ್ದಾರೆ. ಇಂದು ಮಾನವ ಕಳ್ಳ ಸಾಗಾಣಿಕೆ ವಿರುದ್ದ ತಡೆ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ, ನಮ್ಮ ಸಮಾಜ ಎಷ್ಟೇ ಮುಂದುವರೆದಿದ್ದರೂ ಬಾಲ್ಯ ವಿವಾಹ, ಬಾಲ ಕಾರ್ಮಿಕತೆ, ಬಾಲ ಗರ್ಭೀಣಿ ದಂತಹ ಸಮಾಜಿಕ ಪಿಡುಗುಗಳು ಮಾತ್ರ ಹಾಗೇನೆ ನಡೆಯುತ್ತಿವೆ ಮಾನವ ಕಳ್ಳ ಸಾಗಾಣಿಕೆ ಹೀಗೆ ನಡೆಯತ್ತದೆ ಅಂತಾ ಹೇಳೊಕೆ ಆಗಲ್ಲ ಮದುವೆ ವಿಷಯದಲ್ಲೂ ಸಹ ಸಾಗಾಣಿಕೆ ನಡೆಯುತ್ತದೆ ಎಂದು ತಿಳಿಸಿದರು.

ಬೇರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಕೆಲಸದ ನೆಪದಲ್ಲಿ ಬಂದು, ವಧು ದಕ್ಷಣೆಯ ರೂಪದಲ್ಲಿ ಊಡುಗೋರೆ ಆಭರಣಗಳನ್ನು ಕೊಟ್ಟು ಆಸೆ ತೋರಿಸಿ ಮದುವೆ ಮಾಡಿಕೊಂಡು ಹೋಗಿ, ಬೇರೆ ಬೇರೆ ರೀತಿಯ ಚಟುವಟಿಕೆಗಳಿಗೆ ಹೆಣ್ಣು ಮಕ್ಕಳನ್ನು ಮಾರಟ ಮಾಡುತ್ತಿದ್ದಾರೆ. ಅಪ್ರಾಪ್ತ ಹೆಣ್ಣು ಮಕ್ಕಳು, ಆರ್ಥಿಕವಾಗಿ ದುರ್ಬಲವಾಗಿರುವವರು ಸುಲಭವಾಗಿ ಬಲಿಯಾಗುತ್ತಿದ್ದಾರೆ, ಗ್ರಾಮದಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಮತ್ತು ಭದ್ರತೆಯ ಹಿತ ದೃಷ್ಠಿಯಿಂದ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಕಾವಲು ಸಮಿತಿಗಳು ರಚನೆ ಮಾಡಲಾಗಿದೆ ಈ ಸಮಿತಿಗಳ 3 ತಿಂಗಳಿಗೊಮ್ಮೆ ಸಭೆ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಯಾದಗಿರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರು ತಿಪ್ಪಣ್ಣ ಸಿರಸಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿಗಳು ಗುರುರಾಜ, ಯಾದಗಿರಿ ಶಿಶು ಅಭಿವೃದ್ದಿ ಯೋಜನೆಗಳು ಶ್ರೀಮತಿ ದೀಪಿಕಾ, ಜಿಲ್ಲಾ ಮಿಷನ್ ಸಂಯೋಜಕರು ಯಲ್ಲಪ್ಪ.ಕೆ, ಯಾದಗಿರಿ ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಶಿಶು ಅಭಿವೃದ್ದಿ ಯೋಜನೆ ಹಿರಿಯ ಮೇಲ್ವಿಚಾರಕಿಯರು ಶ್ರೀಮತಿ ಉಷಾ ಬಳಗನೂರು, ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಸಿಬ್ಬಂದಿಗಳು, ಜಿಲ್ಲಾ ಮಾತೃ ವಂದನಾ ಯೋಜನೆ ಜಿಲ್ಲಾ ಸಂಯೋಜಕರು, ಮಹಿಳೆಯರು ಇನ್ನಿತರರು ಉಪಸ್ಥಿತರಿದ್ದರು. ಶ್ರೀಮತಿ ಉಷಾ ಬಳಗನೂರು ಕಾರ್ಯಕ್ರಮವನ್ನು ನಿರೂಪಿಸಿದರು. ಜೆಂಡರ್ ಸೇಷಲಿಸ್ಟ್ ಜಿಲ್ಲಾ ಮಹಿಳಾ ಸಬಲೀಕರಣ ಘಟಕ ವಂದನಾರ್ಪಣೆ ನೆರವೇರಿಸಿದರು.