ದೈವಭಕ್ತಿ ರಾಷ್ಟ್ರಭಕ್ತಿಯ ಸಂಗಮ ಘೊಗ್ಗಾ ಗ್ರಾಮ – ಹಾರಕೂಡ ಶ್ರೀ
ಬಸವಕಲ್ಯಾಣ ತಾಲೂಕಿನ ಘೊಗ್ಗಾ ಗ್ರಾಮದಲ್ಲಿ ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ತಮ್ಮ ಅಮೃತ ಹಸ್ತದಿಂದ ಮಹಾತ್ಮ ಕನಕದಾಸರ ಪ್ರತಿಮೆ ಅನಾವರಣಗೊಳಿಸಿದರು. ಶಾಸಕ ಸನ್ಮಾನ್ಯ ಶ್ರೀ ಸಿದ್ದಲಿಂಗ ಪಾಟೀಲ, ಕೇಶಪ್ಪ ಬಿರಾದಾರ, ಪ್ರದೀಪ ಬೇಂದ್ರೆ ಮುಂತಾದವರು ಉಪಸ್ಥಿತರಿದ್ದರು.
ಸೆಕ್ಯುಲರ್ ವಾಯ್ಸ್ ಬಸವಕಲ್ಯಾಣ
ದೈವಭಕ್ತಿ ಸೌರಭದ ಸಂವರ್ಧಕ ಮಹಾತ್ಮ ಕನಕದಾಸರು ಹಾಗೂ ಸ್ವತಂತ್ರ್ಯ ವೀರ ಸಂಗೊಳ್ಳಿ ರಾಯಣ್ಣ ನವರ ಪ್ರತಿಮೆ ಪ್ರತಿಷ್ಠಾಪಿಸಿ, ಅನಾವರಣಗೊಳಿಸುವುದರ ಮೂಲಕ ಘೊಗ್ಗಾ ಗ್ರಾಮ ದೈವ ಭಕ್ತಿ ಹಾಗೂ ರಾಷ್ಟ್ರಭಕ್ತಿಯ ಸಂಗಮ ಎನ್ನುವ ಅದ್ಭುತ ಸಂದೇಶ ನೀಡಿದೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಘೊಗ್ಗಾ ಗ್ರಾಮದಲ್ಲಿ ಮಹಾತ್ಮ ಕನಕದಾಸ ಹಾಗೂ ಸಂಗೋಳಿ ರಾಯಣ್ಣನವರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಶ್ರೀಗಳು, ಮಹಾತ್ಮ ಕನಕದಾಸರು ಈ ನಾಡು ಕಂಡ ಶ್ರೇಷ್ಠ ದಾರ್ಶನಿಕರಾಗಿದ್ದು, ದೃಢವಾದ ಭಕ್ತಿಗೆ ದೇವರು ಸಹ ಸೋಲುತ್ತಾನೆ ಎಂಬುದನ್ನು ತೋರಿಸಿಕೊಟ್ಟ ಮಹಾನ್ ಕೃಷ್ಣ ಭಕ್ತ ಕನಕದಾಸರು.
ತಮ್ಮ ಕೀರ್ತನೆಗಳ ಮೂಲಕ ಸಮಾಜದ ಜಾಡ್ಯವನ್ನು ತೊಳೆದ ಮಹಾನುಭಾವರು.
ರಾಣಿ ಚನ್ನಮ್ಮನ ಆಪ್ತ ಬಂಟನಾಗಿ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಸ್ವಾತಂತ್ರ್ಯದ ವೀರ ಕಹಳೆ ಮೊಳಗಿಸಿದ ಅದ್ವಿತಿಯ ರಾಷ್ಟ್ರಭಕ್ತ ಸಂಗೊಳ್ಳಿ ರಾಯಣ್ಣನವರ ಬದುಕೆ ಒಂದು ವಿಸ್ಮಯ.
ಇಂತಹ ಮಹಾನ್ ವ್ಯಕ್ತಿಗಳ ಪ್ರತಿಮೆ ಅನಾವರಣ ಗೊಳಿಸುವುದರ ಮೂಲಕ ಘೊಗ್ಗಾ ಗ್ರಾಮದ ಜನತೆ ಧನ್ಯತೆಯನ್ನು ಮೆರೆದಿದ್ದಾರೆ.
ಇಂತಹ ಮಹತ್ಕಾರ್ಯದಲ್ಲಿ ಸೇವೆ ಸಲ್ಲಿಸಿದ ಸರ್ವರಿಗೂ ಶ್ರೇಯಸ್ಸು ದೊರಕಲಿ ಎಂದು ಶುಭ ಹಾರೈಸಿದರು.
ಹುಮನಾಬಾದ ಶಾಸಕ ಸಿದ್ದಲಿಂಗ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಮುಖಂಡರಾದ ಕೇಶಪ್ಪ ಬಿರಾದಾರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷರಾದ ಪ್ರದೀಪ ಬೇಂದ್ರೆ ವಿನಾಯಕ ಮಾಲಕೋಜಿ, ಪವನ ಗೊಂಡ, ಬಲ ಭೀಮ ಪಾಟೀಲ, ರಾಜೋಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುಸೂಯ ಬಾಯಿ ಬಂಡುನೋರ, ಸಂತೋಷ ಮೂಲಗೆ, ಮಹೇಶ ಬಂಟನೋರ, ಸತೀಶ ಪಾಟೀಲ ಉಪಸ್ಥಿತರಿದ್ದರು.
ಕಾರ್ತಿಕ ಸ್ವಾಮಿ ಯಲ್ಲದಗುಂಡಿ ಪ್ರಾರ್ಥನಾ ಗೀತೆ ಹಾಡಿದರು.
ವಿನೋದ ಮೆತ್ರೆ ಸ್ವಾಗತಿಸಿ ನಿರೂಪಣೆ ಮಾಡಿದರು.
ಕಾರ್ಯಕ್ರಮಕ್ಕೂ ಮೊದಲು ಅಲಂಕೃತ ಸಾರೋಟಿನಲ್ಲಿ ಹಾರಕೂಡ ಪೂಜ್ಯರ ಅದ್ದೂರಿ ಮೆರವಣಿಗೆ ಜರುಗಿತು.
