ಅಧ್ಯಕ್ಷರಾಗಿ ದೇವುನಾಯಕ ಮುಡಬೂಳ ನೇಮಕ

By admin

ಅರಿವು ಕೇಂದ್ರ ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕ ಸಭೆ | ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ನೂತನ ಅಧ್ಯಕ್ಷರಾಗಿ ದೇವುನಾಯಕ ಮುಡಬೂಳ ನೇಮಕ

ಸೆಕ್ಯುಲರ್ ವಾಯ್ಸ್ ನ್ಯೂಸ್ ಶಹಾಪುರ
ನಗರದ ತಾಲೂಕು ಪಂಚಾಯತ್ ಕಾರ್ಯಾಲಯದಲ್ಲಿ ಸೋಮವಾರ ಅರಿವು ಕೇಂದ್ರ ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಸಂಘದ ನೂತನ ತಾಲೂಕು ಅಧ್ಯಕ್ಷರಾಗಿ ದೇವುನಾಯಕ ಮುಡಬೂಳ ಉಪಾಧ್ಯಕ್ಷರಾಗಿ ಶ್ರೀಮತಿ ಮರಲಿಂಗಮ್ಮ ಚಟ್ನಳ್ಳಿ ಆಯ್ಕೆಗೊಂಡಿದ್ದಾರೆ.
ವಿವರ: ಪ್ರಧಾನ ಕಾರ್ಯದರ್ಶಿಯಾಗಿ ದೇವರಡ್ಡಿ ಗೋಗಿ (ಕೆ ), ಸಂಘಟನೆ ಕಾರ್ಯದರ್ಶಿಯಾಗಿ ಶ್ರೀಮತಿ ಮಲ್ಲಮ್ಮ ಕೋಳ್ಳೂರು ಎಂ., ಖಜಾಂಚಿಯಾಗಿ ಯಂಕಪ್ಪ ಖಾನಾಪೂರ, ಗೌರವ ಅಧ್ಯಕ್ಷರಾಗಿ ಶಂಕರಗೌಡ ಅಣಬಿ ಸೇರಿ ಎಲ್ಲ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿರಿಯರಾದ ಹುಣಚಪ್ಪ ಹೊತ್ತಪೇಟಿ, ವಡಿಗೇರ ತಾಲೂಕು ಅಧ್ಯಕ್ಷರಾದ ಮಾಳಿಂಗರಾಯ ಕೊಂಕಲ್, ಯಾದಗಿರಿ ತಾಲ್ಲೂಕು ಮೇಲ್ವಿಚಾರಕರಾದ ಸಿದ್ರಾಮರಡ್ಡಿ ಮಲಾರ ಹಾಗೂ ಹಿರಿಯರಾದ ಚಂದ್ರಗಿರಿ ಹತ್ತಿಗೂಡುರು, ಚಂದಪ್ಪ ಮದ್ದರಕಿ, ಸಾಯಬಣ್ಣ ಶಿರವಾಳ, ಮಂಜುನಾಥ ಗೋಗಿ ಪಿ.,ಮಹಾದೇವರಡ್ಡಿ ಬೀರನೂರ, ಶ್ರೀಮತಿ, ಶಾಂತಮ್ಮ ಉಕ್ಕಿನಾಳ, ಲಲಿತ ಚಾಮನಳ,ಕುಮಾರಿ ಪೂಜಾ ಹುರಸಗುಂಡಿಗಿ ಸೇರಿದಂತೆ ಇತರರು ಇದ್ದರು.