“ಕೊಪ್ಪಳ | ರೈಲಿಗೆ ಸಿಲುಕಿ 70 ಕ್ಕಿಂತ ಅಧಿಕ ಕುರಿಗಳ ದಾರುಣ ಸಾವು.! ಬೀದಿಗೆ ಬಂದ ಕುರಿಗಾಹಿ ಕುಟುಂಬ : ಪರಿಹಾರಕ್ಕಾಗಿ ಎಐಡಿವೈಓ ಒತ್ತಾಯ”
Contents
“ಕೊಪ್ಪಳ | ರೈಲಿಗೆ ಸಿಲುಕಿ 70 ಕ್ಕಿಂತ ಅಧಿಕ ಕುರಿಗಳ ದಾರುಣ ಸಾವು.! ಬೀದಿಗೆ ಬಂದ ಕುರಿಗಾಹಿ ಕುಟುಂಬ : ಪರಿಹಾರಕ್ಕಾಗಿ ಎಐಡಿವೈಓ ಒತ್ತಾಯ” • ಸೆಕ್ಯೂಲರ್ ವಾಯ್ಸ್ ಡೆಸ್ಕ್ ನ್ಯೂಸ್ : ಕೊಪ್ಪಳ : ರೈಲು ವೇಗವಾಗಿ ಬಂದು ಕುರಿಗಳಿಗೆ ಡಿಕ್ಕಿ ಹೊಡೆದ ರಭಸಕ್ಕೆ ಸಿಲುಕಿ 70 ಕ್ಕಿಂತ ಹೆಚ್ಚು ಕುರಿಗಳ ದಾರುಣವಾಗಿ ಸಾವನ್ನಪ್ಪಿದ ಘಟನೆ ಕುಕನೂರ ತಾಲ್ಲೂಕಿನ ಬನ್ನಿಕೊಪ್ಪ ರೈಲ್ವೆ ಗೇಟ್ ಬಳಿ ಶುಕ್ರವಾರ ಸಂಭವಿಸಿದೆ.ರೈಲ್ವೆ ಹಳಿ ದಾಟಿ ಕುರಿಗಳನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಏಕಾಏಕಿ ತೋಳಯೊಂದು ಕೆಲ ಕುರಿಗಳ ಮೇಲೆ ದಾಳಿ ಮಾಡಿತ್ತು. ಈ ಘಟನೆ ಪರಿಣಾಮ ಅಲ್ಲಿ ಇದ್ದ ಎರಡು – ಮೂರು ಕುರಿಗಳು ಚದುರಿ ರೈಲ್ವೆ ಗೇಟ್ ಕಡೆ ದಾಟಿ ಸಾಗಿದ್ದವು. ಈ ವೇಳೆ ಬಂದ ರೈಲೊಂದು ವೇಗವಾಗಿ ಚಲಿಸಿತ್ತು. ರೈಲ್ವೆ ಹಾರ್ನ್ ಗೆ ಬೆದರಿ ಕುರಿಗಳು ರೈಲ್ವೆ ಹಳಿಗುಂಟ ಓಡಿ ಹೋಗಿವೆ. ಹೀಗಾಗಿ ರೈಲಿನ ವೇಗದ ಹೊಡೆತಕ್ಕೆ ಎಲ್ಲಾ ಕುರಿಗಳು ಒಟ್ಟಿಗೆ ರೈಲ್ವೆ ಸಿಲುಕಿ ಸಾವನ್ನಪ್ಪಿದ ಘನ ಘೋರ ಘಟನೆಗೆ ಕಾರಣವಾಗಿದೆ ಎನ್ನಲಾಗಿದೆ.ಕೊಪ್ಪಳ ತಾಲ್ಲೂಕಿನ ಮೋರನಹಳ್ಳೀ ಗ್ರಾಮದ ಕುರಿಗಾಯಿ ತಿಮ್ಮಣ್ಣ ಮಾಗಳಾದ ಎನ್ನುವ ರೈತನಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ರೈಲು ವೇಗವಾಗಿ ಬಂದು ಕುರಿಗಳಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕುರಿಗಳ ದೇಹಗಳು ಚೆಲ್ಲಾಪಿಲ್ಲಿಯಾಗಿ ಹಳಿಗಳ ಮೇಲೆ ಬಿದ್ದಿದ್ದವು. ಕುರಿಗಳ ತಲೆ, ಕಾಲುಗಳು, ಗರ್ಭಾವಸ್ಥೆಯಲ್ಲಿದ್ದ ಕುರಿಗಳ ಹೊಟ್ಟೆಯೊಳಗಿನ ಮರಿಗಳು ರೈಲ್ವೆ ಹಳಿಯ ಮೇಲೆ ಬಿದ್ದಿರುವುದನ್ನು ನೋಡಿದರೆ ಕರಳು ಕಿತ್ತು ಬರುವಂತ್ತಿತ್ತು. ಸ್ಥಳಕ್ಕೆ ಬಂದ ಸಾರ್ವಜನಿಕರು ದುರ್ಮರಣ ಹೊಂದಿದ ಎಲ್ಲ ಕುರಿಗಳನ್ನು ತಿನ್ನುವ ಉದ್ದೇಶದಿಂದ ತೆಗೆದುಕೊಂಡು ಹೋಗಿದ್ದಾರೆ. ಸ್ಥಳಕ್ಕೆ ರೇಲ್ವೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುರ್ಮರಣ ಹೊಂದಿದ ಯಾವುದೇ ಕುರಿಗಳು ಇಲ್ಲದ ಕಾರಣ ರೈಲ್ವೆ ಸಿಬ್ಬಂದಿ ಕುರಿಗಾಹಿಗೆ ತಿಳುವಳಿಕೆ ಹೇಳಿ ಬಿಟ್ಟಿದ್ದಾರೆ ಎನ್ನಲಾಗಿದೆ.• ಪರಿಹಾರಕ್ಕಾಗಿ ಎಐಡಿವೈಓ ಒತ್ತಾಯ : • ಶರಣು ಪಾಟೀಲ್,ಎಐಡಿವೈಓ ಜಿಲ್ಲಾ ಕಾರ್ಯದರ್ಶಿ“ಕುರಿ ಕಳೆದುಕೊಂಡು ಕಂಗಲಾಗಿರುವ ತಿಮ್ಮಣ್ಣ ಮಾಗಳಾದ ಎನ್ನುವ ರೈತನಿಗೆ ಈ ಘಟನೆಯಿಂದ ಇಡಿ ಕುರಿ ಹಿಂಡನ್ನು ಕಳೆದ ಕೊಂಡ ಕುರಿಗಾಹಿ ಬದುಕು ಬೀದಿಗೆ ಬಂದಿದ್ದು ಸಂಕಷ್ಟಕ್ಕೆ ಈಡಾಗಿದ್ದಾನೆ. ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಮಾನವೀಯತೆ ದೃಷ್ಟಿಯಿಂದ ಸರ್ಕಾರ ಅಥವಾ ರೈಲ್ವೆ ಇಲಾಖೆ ಸೂಕ್ತ ಪರಿಹಾರ ನೀಡಬೇಕೇಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗ್ ನೈಸೇಷನ್ ಕೊಪ್ಪಳ ಜಿಲ್ಲಾಅಧ್ಯಕ್ಷ ಆರ್.ವಿ.ಕಾಮಾನೂರ, ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್ ಅವರು ಒತ್ತಾಯಿಸಿದ್ದಾರೆ”.

• ಸೆಕ್ಯೂಲರ್ ವಾಯ್ಸ್ ಡೆಸ್ಕ್ ನ್ಯೂಸ್ :
ಕೊಪ್ಪಳ : ರೈಲು ವೇಗವಾಗಿ ಬಂದು ಕುರಿಗಳಿಗೆ ಡಿಕ್ಕಿ ಹೊಡೆದ ರಭಸಕ್ಕೆ ಸಿಲುಕಿ 70 ಕ್ಕಿಂತ ಹೆಚ್ಚು ಕುರಿಗಳ ದಾರುಣವಾಗಿ ಸಾವನ್ನಪ್ಪಿದ ಘಟನೆ ಕುಕನೂರ ತಾಲ್ಲೂಕಿನ ಬನ್ನಿಕೊಪ್ಪ ರೈಲ್ವೆ ಗೇಟ್ ಬಳಿ ಶುಕ್ರವಾರ ಸಂಭವಿಸಿದೆ.
ರೈಲ್ವೆ ಹಳಿ ದಾಟಿ ಕುರಿಗಳನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಏಕಾಏಕಿ ತೋಳಯೊಂದು ಕೆಲ ಕುರಿಗಳ ಮೇಲೆ ದಾಳಿ ಮಾಡಿತ್ತು. ಈ ಘಟನೆ ಪರಿಣಾಮ ಅಲ್ಲಿ ಇದ್ದ ಎರಡು – ಮೂರು ಕುರಿಗಳು ಚದುರಿ ರೈಲ್ವೆ ಗೇಟ್ ಕಡೆ ದಾಟಿ ಸಾಗಿದ್ದವು. ಈ ವೇಳೆ ಬಂದ ರೈಲೊಂದು ವೇಗವಾಗಿ ಚಲಿಸಿತ್ತು. ರೈಲ್ವೆ ಹಾರ್ನ್ ಗೆ ಬೆದರಿ ಕುರಿಗಳು ರೈಲ್ವೆ ಹಳಿಗುಂಟ ಓಡಿ ಹೋಗಿವೆ. ಹೀಗಾಗಿ ರೈಲಿನ ವೇಗದ ಹೊಡೆತಕ್ಕೆ ಎಲ್ಲಾ ಕುರಿಗಳು ಒಟ್ಟಿಗೆ ರೈಲ್ವೆ ಸಿಲುಕಿ ಸಾವನ್ನಪ್ಪಿದ ಘನ ಘೋರ ಘಟನೆಗೆ ಕಾರಣವಾಗಿದೆ ಎನ್ನಲಾಗಿದೆ.
ಕೊಪ್ಪಳ ತಾಲ್ಲೂಕಿನ ಮೋರನಹಳ್ಳೀ ಗ್ರಾಮದ ಕುರಿಗಾಯಿ ತಿಮ್ಮಣ್ಣ ಮಾಗಳಾದ ಎನ್ನುವ ರೈತನಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ರೈಲು ವೇಗವಾಗಿ ಬಂದು ಕುರಿಗಳಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕುರಿಗಳ ದೇಹಗಳು ಚೆಲ್ಲಾಪಿಲ್ಲಿಯಾಗಿ ಹಳಿಗಳ ಮೇಲೆ ಬಿದ್ದಿದ್ದವು. ಕುರಿಗಳ ತಲೆ, ಕಾಲುಗಳು, ಗರ್ಭಾವಸ್ಥೆಯಲ್ಲಿದ್ದ ಕುರಿಗಳ ಹೊಟ್ಟೆಯೊಳಗಿನ ಮರಿಗಳು ರೈಲ್ವೆ ಹಳಿಯ ಮೇಲೆ ಬಿದ್ದಿರುವುದನ್ನು ನೋಡಿದರೆ ಕರಳು ಕಿತ್ತು ಬರುವಂತ್ತಿತ್ತು. ಸ್ಥಳಕ್ಕೆ ಬಂದ ಸಾರ್ವಜನಿಕರು ದುರ್ಮರಣ ಹೊಂದಿದ ಎಲ್ಲ ಕುರಿಗಳನ್ನು ತಿನ್ನುವ ಉದ್ದೇಶದಿಂದ ತೆಗೆದುಕೊಂಡು ಹೋಗಿದ್ದಾರೆ.
ಸ್ಥಳಕ್ಕೆ ರೇಲ್ವೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುರ್ಮರಣ ಹೊಂದಿದ ಯಾವುದೇ ಕುರಿಗಳು ಇಲ್ಲದ ಕಾರಣ ರೈಲ್ವೆ ಸಿಬ್ಬಂದಿ ಕುರಿಗಾಹಿಗೆ ತಿಳುವಳಿಕೆ ಹೇಳಿ ಬಿಟ್ಟಿದ್ದಾರೆ ಎನ್ನಲಾಗಿದೆ.
• ಪರಿಹಾರಕ್ಕಾಗಿ ಎಐಡಿವೈಓ ಒತ್ತಾಯ :


