“ಕುಷ್ಟಗಿಯ ಸಂದೀಪ ನಗರದ ವಸತಿ ರಹಿತರಿಗೆ ಹಕ್ಕು ಪತ್ರ ನೀಡಲು ಆಗ್ರಹಿಸಿ ಕರವೇ ಸ್ವಾಭಿಮಾನಿ ಸೇನೆ ವತಿಯಿಂದ ಸಿ.ಎಂ. ಗೆ ಮನವಿ”
Contents
“ಕುಷ್ಟಗಿಯ ಸಂದೀಪ ನಗರದ ವಸತಿ ರಹಿತರಿಗೆ ಹಕ್ಕು ಪತ್ರ ನೀಡಲು ಆಗ್ರಹಿಸಿ ಕರವೇ ಸ್ವಾಭಿಮಾನಿ ಸೇನೆ ವತಿಯಿಂದ ಸಿ.ಎಂ. ಗೆ ಮನವಿ”• ಸೆಕ್ಯುಲರ್ ವಾಯ್ಸ್ ನ್ಯೂಸ್ ಕುಷ್ಟಗಿ : ಕುಷ್ಟಗಿ : ಇಲ್ಲಿನ ಸಂದೀಪ ನಗರದ ವಾರ್ಡ್ ನಂ.8 ರಲ್ಲಿ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ನೂರಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿರುತ್ತಾರೆ.ಆದರೆ ಇತ್ತೀಚಿಗೆ ಕೆಲವು ಬೆಳೆವಣಿಗೆಗಳ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳನ್ನು ಒಕ್ಕಲೆಬ್ಬಿಸಿ, ಸದರಿ ಜಾಗಗಳನ್ನು ಬೇರೆಯವರ ಹೆಸರಿಗೆ ಹಕ್ಕು ಪತ್ರಗಳನ್ನು ನೀಡುವ ಹುನ್ನಾರ ನಡೆದಿದೆ ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಸಿ.ಎಂ.ಸಿದ್ದರಾಮಯ್ಯ ಅವರಿಗೆ ಕೊಪ್ಪಳದಲ್ಲಿ ಸೋಮವಾರ ಮನವಿ ಪತ್ರ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಸಂತೋಷ ತೋಟದ ಅವರು ಮಾತನಾಡಿ, ಇಲ್ಲಿನ ಗಜೇಂದ್ರಗಡ ರಸ್ತೆಯ ಸರ್ವೇ ನಂ.190/5 ಒಟ್ಟು ಕ್ಷೇತ್ರ 06, 01 ಗುಂಟೆ ಜಮೀನನ್ನು ರಾಜ್ಯ ಸರಕಾರ ಹೆಸರಿನಲ್ಲಿ ಖರೀದಿಸಿ, ಆಶ್ರಯ ಯೋಜನೆಯಡಿ ನಿವೇಶನಗಳನ್ನು ರಚಿಸಲಾಗಿತ್ತು. ನಂತರ ಖಾಲಿ ಉಳಿದ ಸದರಿ ಜಾಗದಲ್ಲಿ ನಿರ್ಗತಿಕ ಕಡುಬಡವರು ಕೂಲಿ ಮಾಡಿಕೊಂಡು ಶೆಡ್/ ಮನೆ ನಿರ್ಮಿಸಿಕೊಂಡು ವಾಸವಾಗಿರುತ್ತಾರೆ ಎಂದರು. ಇಲ್ಲಿನ ವಾಸ ಮಾಡುವ ನಿವಾಸಿಗಳಿಗೆ ಪುರಸಭೆಯ ಕೆಲವು ಸಿಬ್ಬಂದಿ ಮತ್ತು ಕಿಡಿಗೇಡಿಗಳು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದ್ದಾರೆ. ಈಗಾಗಲೇ ನೆಲೆಸಿರುವ ಕಡುಬಡುವರಿಗೆ ಅನ್ಯಾಯವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದರಿಂದಾಗಿ ಉಲ್ಲೇಖ (1) ಮತ್ತು (2) ರನ್ವಯ ಹಿಂದಿನ ಡಿಸಿ ಆದೇಶ ಜಾರಿ ಮಾಡಿ ಸಂದೀಪನಗರದ 44 ಕುಟುಂಬಳಿಗೆ ನಿವೇಶನ ನೀಡಲು ಪುರಸಭೆ ಕುಷ್ಟಗಿ ಅವರಿಗೆ ಸೂಚಿಸಿ, ಎಲ್ಲರಿಗೂ ಹಕ್ಕುಪತ್ರ ನೀಡಿ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅದರ ಪ್ರತಿಯನ್ನು ರವಾನಿಸಲು ತಿಳಿಸಿದ್ದರು ಎಂದು ಹೇಳಿದರು. ಅಲ್ಲದೇ ಬಹುತೇಕರು ದಲಿತರು, ಹಿಂದುಳಿದ ವರ್ಗಕ್ಕೆ ಸೇರಿದ ಅನೇಕ ಕುಟುಂಬಗಳು ಇಲ್ಲಿ ವಾಸಿಸುತ್ತೇವೆ. ಹೀಗಾಗಿ ಜರೂರು ಕ್ರಮದ ಅಗತ್ಯ ಇರುತ್ತದೆ. ಈಗಾಗಲೇ ತಹಸೀಲ್ದಾರ ಕುಷ್ಟಗಿ ಮನವಿ ಸಲ್ಲಿಸಲಾಗಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಹೇಳಿದರು.ಅಲ್ಲದೇ ಏಕಾಏಕೀಯಾಗಿ ಕುಷ್ಟಗಿ ಪುರಸಭೆಯ ಸಿಬ್ಬಂದಿಗಳು ಇವರ ಶೆಡ್/ ಮನೆಗಳನ್ನು ತೆರವುಗೊಳಿಸಲು ತಾಕಿತು ಮಾಡಿ ಹೋಗಿದ್ದಾರೆ. ಇಲ್ಲವಾದರೆ ಜೆ.ಸಿ.ಬಿ. ಯಂತ್ರದಿಂದ ತೆರವುಗೊಳಿಸುತ್ತೇವೆ ಎಚ್ಚರಿಕೆ ನೀಡಿರುವದು ಸರಿಯಲ್ಲ ಎಂದರು.ಆದ್ದರಿಂದ ಈ ಆಶ್ರಯ ಬಡಾವಣೆಯ ಜಾಗವನ್ನು ಸಕ್ರಮಗೊಳಿಸಲು ತಾವು ಪರಿಶೀಲನೆ ನಡೆಸಿ, ಕಡುಬಡುವರಿಗೆ ನ್ಯಾಯ ಒದಗಿಸಲು ಮುಂದಾಗಬೇಕು ಮತ್ತು ಕಡುಬಡುವರಿಗೆ ಸೂರಿನಡಿ ಜೀವಿಸಲು ಹಕ್ಕುಪತ್ರ ನೀಡಲು ಪುರಸಭೆ ಕುಷ್ಟಗಿ ಅವರಿಗೆ ಆದೇಶಿಸಬೇಕೆಂದು ನಮ್ಮ ಸಂಘಟನೆಯಿಂದ ತೀವ್ರವಾಗಿ ಒತ್ತಾಯಿಸುವುದಾಗಿ ಎಂದರು.ಈ ನಿಯೋಗದಲ್ಲಿ ಸೇನೆಯ ಉಪಾಧ್ಯಕ್ಷ ಮಹಾಂತೇಶ ಅಮರಾವತಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಮನೂರ ಕೋಮಾರ,ಯಲಬುರ್ಗಾ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಮಾರುತಿ ನಾಯಕ್ ಸೇರಿದಂತೆ ಹಲವರು ಇದ್ದರು.

• ಸೆಕ್ಯುಲರ್ ವಾಯ್ಸ್ ನ್ಯೂಸ್ ಕುಷ್ಟಗಿ :
ಕುಷ್ಟಗಿ : ಇಲ್ಲಿನ ಸಂದೀಪ ನಗರದ ವಾರ್ಡ್ ನಂ.8 ರಲ್ಲಿ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ನೂರಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿರುತ್ತಾರೆ.ಆದರೆ ಇತ್ತೀಚಿಗೆ ಕೆಲವು ಬೆಳೆವಣಿಗೆಗಳ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳನ್ನು ಒಕ್ಕಲೆಬ್ಬಿಸಿ, ಸದರಿ ಜಾಗಗಳನ್ನು ಬೇರೆಯವರ ಹೆಸರಿಗೆ ಹಕ್ಕು ಪತ್ರಗಳನ್ನು ನೀಡುವ ಹುನ್ನಾರ ನಡೆದಿದೆ ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಸಿ.ಎಂ.ಸಿದ್ದರಾಮಯ್ಯ ಅವರಿಗೆ ಕೊಪ್ಪಳದಲ್ಲಿ ಸೋಮವಾರ ಮನವಿ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಸಂತೋಷ ತೋಟದ ಅವರು ಮಾತನಾಡಿ, ಇಲ್ಲಿನ ಗಜೇಂದ್ರಗಡ ರಸ್ತೆಯ ಸರ್ವೇ ನಂ.190/5 ಒಟ್ಟು ಕ್ಷೇತ್ರ 06, 01 ಗುಂಟೆ ಜಮೀನನ್ನು ರಾಜ್ಯ ಸರಕಾರ ಹೆಸರಿನಲ್ಲಿ ಖರೀದಿಸಿ, ಆಶ್ರಯ ಯೋಜನೆಯಡಿ ನಿವೇಶನಗಳನ್ನು ರಚಿಸಲಾಗಿತ್ತು. ನಂತರ ಖಾಲಿ ಉಳಿದ ಸದರಿ ಜಾಗದಲ್ಲಿ ನಿರ್ಗತಿಕ ಕಡುಬಡವರು ಕೂಲಿ ಮಾಡಿಕೊಂಡು ಶೆಡ್/ ಮನೆ ನಿರ್ಮಿಸಿಕೊಂಡು ವಾಸವಾಗಿರುತ್ತಾರೆ ಎಂದರು.
ಇಲ್ಲಿನ ವಾಸ ಮಾಡುವ ನಿವಾಸಿಗಳಿಗೆ ಪುರಸಭೆಯ ಕೆಲವು ಸಿಬ್ಬಂದಿ ಮತ್ತು ಕಿಡಿಗೇಡಿಗಳು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದ್ದಾರೆ. ಈಗಾಗಲೇ ನೆಲೆಸಿರುವ ಕಡುಬಡುವರಿಗೆ ಅನ್ಯಾಯವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದಾಗಿ ಉಲ್ಲೇಖ (1) ಮತ್ತು (2) ರನ್ವಯ ಹಿಂದಿನ ಡಿಸಿ ಆದೇಶ ಜಾರಿ ಮಾಡಿ ಸಂದೀಪನಗರದ 44 ಕುಟುಂಬಳಿಗೆ ನಿವೇಶನ ನೀಡಲು ಪುರಸಭೆ ಕುಷ್ಟಗಿ ಅವರಿಗೆ ಸೂಚಿಸಿ, ಎಲ್ಲರಿಗೂ ಹಕ್ಕುಪತ್ರ ನೀಡಿ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅದರ ಪ್ರತಿಯನ್ನು ರವಾನಿಸಲು ತಿಳಿಸಿದ್ದರು ಎಂದು ಹೇಳಿದರು.
ಅಲ್ಲದೇ ಬಹುತೇಕರು ದಲಿತರು, ಹಿಂದುಳಿದ ವರ್ಗಕ್ಕೆ ಸೇರಿದ ಅನೇಕ ಕುಟುಂಬಗಳು ಇಲ್ಲಿ ವಾಸಿಸುತ್ತೇವೆ. ಹೀಗಾಗಿ ಜರೂರು ಕ್ರಮದ ಅಗತ್ಯ ಇರುತ್ತದೆ. ಈಗಾಗಲೇ ತಹಸೀಲ್ದಾರ ಕುಷ್ಟಗಿ ಮನವಿ ಸಲ್ಲಿಸಲಾಗಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಹೇಳಿದರು.
ಅಲ್ಲದೇ ಏಕಾಏಕೀಯಾಗಿ ಕುಷ್ಟಗಿ ಪುರಸಭೆಯ ಸಿಬ್ಬಂದಿಗಳು ಇವರ ಶೆಡ್/ ಮನೆಗಳನ್ನು ತೆರವುಗೊಳಿಸಲು ತಾಕಿತು ಮಾಡಿ ಹೋಗಿದ್ದಾರೆ. ಇಲ್ಲವಾದರೆ ಜೆ.ಸಿ.ಬಿ. ಯಂತ್ರದಿಂದ ತೆರವುಗೊಳಿಸುತ್ತೇವೆ ಎಚ್ಚರಿಕೆ ನೀಡಿರುವದು ಸರಿಯಲ್ಲ ಎಂದರು.
ಆದ್ದರಿಂದ ಈ ಆಶ್ರಯ ಬಡಾವಣೆಯ ಜಾಗವನ್ನು ಸಕ್ರಮಗೊಳಿಸಲು ತಾವು ಪರಿಶೀಲನೆ ನಡೆಸಿ, ಕಡುಬಡುವರಿಗೆ ನ್ಯಾಯ ಒದಗಿಸಲು ಮುಂದಾಗಬೇಕು ಮತ್ತು ಕಡುಬಡುವರಿಗೆ ಸೂರಿನಡಿ ಜೀವಿಸಲು ಹಕ್ಕುಪತ್ರ ನೀಡಲು ಪುರಸಭೆ ಕುಷ್ಟಗಿ ಅವರಿಗೆ ಆದೇಶಿಸಬೇಕೆಂದು ನಮ್ಮ ಸಂಘಟನೆಯಿಂದ ತೀವ್ರವಾಗಿ ಒತ್ತಾಯಿಸುವುದಾಗಿ ಎಂದರು.
ಈ ನಿಯೋಗದಲ್ಲಿ ಸೇನೆಯ ಉಪಾಧ್ಯಕ್ಷ ಮಹಾಂತೇಶ ಅಮರಾವತಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಮನೂರ ಕೋಮಾರ,ಯಲಬುರ್ಗಾ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಮಾರುತಿ ನಾಯಕ್ ಸೇರಿದಂತೆ ಹಲವರು ಇದ್ದರು.
